ಚಳ್ಳಕೆರೆ: ಸಮುದಾಯದ ವಿದ್ಯಾವಂತ ಯುವಜನತೆಗೆ ಮೀಸಲಾತಿ ದೊರೆಯದೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿ ನಿರುದ್ಯೋಗಿಗಳಾಗಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಆದ್ದರಿಂದ ತಾಲೂಕಿನ ಮಡಿವಾಳ ಜನಾಂಗವನ್ನು ಜನಜಾಗೃತಿಗೊಳಿಸುವ ದೃಷ್ಟಿಯಿಂದ ಇದೆ ಬುಧವಾರ ನಗರದ ವಾಸವಿ ಮಹಲ್‌ನಲ್ಲಿ ಶ್ರೀ ಮಡಿವಾಳ ಮಾಚಿದೇವ ಜನಜಾಗೃತಿ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಬುಡ್ನಹಟ್ಟಿ ಎಂ ನಾಗರಾಜ್ ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಮಡಿವಾಳ ಸಮುದಾಯವು ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ ಇತ್ತೀಚಿನ ದಿನಗಳಲ್ಲಿ ಆಧುನಿಕ ಶೈಲಿಯ ಹೊಡೆತಕ್ಕೆ ಸಿಲುಕಿ ಬಟ್ಟೆ ತೊಳೆಯುವ ಹಾಗೂ ಇಸ್ತ್ರಿ ಮಾಡುವ ಕಾಯಕದ ಕುಲಕಸುಬು ಮಾಯವಾಗುತ್ತಿದ್ದು ಸಮುದಾಯದ ವಿದ್ಯಾವಂತ ಯುವಜನತೆಗೆ ಮೀಸಲಾತಿ ದೊರೆಯದೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿ ನಿರುದ್ಯೋಗಿಗಳಾಗಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಅಲ್ಲದೆ ಗ್ರಾಮೀಣ ಭಾಗದ ಮಡಿವಾಳ ಸಮುದಾಯದ ಜನರು ಉದ್ಯೋಗವನ್ನು ಅರಸಿ ಪರ ಊರುಗಳಿಗೆ ವಲಸೆ ಹೋಗುವಂತಹ ಪರಿಸ್ಥಿತಿ ಬಂದೊದಗಿದೆ ಈ ಎಲ್ಲಾ ದೃಷ್ಟಿಕೋನದಿಂದ ಜನರನ್ನು ಜಾಗೃತಗೊಳಿಸುವುದಲ್ಲದೆ ಸರ್ಕಾರಕ್ಕೆ ಮಡಿವಾಳ ಜನಾಂಗದ ಸ್ಥಿತಿಗತಿಗಳ ಬಗ್ಗೆ ಮನವರಿಕೆ ಮಾಡಿಕೊಡುವ ದೃಷ್ಟಿಯಿಂದ ಈ ಜನಜಾಗೃತಿ ಸಮಾವೇಶವನ್ನು ಹಮ್ಮಿಕೊಂಡಿದ್ದು ಮಾರ್ಚ್6ರ ಬುಧವಾರದಂದು ನಗರದ ಪ್ರವಾಸಿ ಮಂದಿರದಿAದ ಪ್ರಮುಖ ಬೀದಿಗಳಲ್ಲಿ ವಾದ್ಯಗಳ ಮೂಲಕ ಬೆಳ್ಳಿ ರಥದಲ್ಲಿ ಮಡಿವಾಳ ಮಾಚಿದೇವ ಮೂರ್ತಿಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಡಿವಾಳ ಮಾಚಿದೇವ ಮಹಾಸಂಸ್ಥಾನ ಮಠದ ಡಾ. ಬಸವ ಮಾಚಿದೇವ ಮಹಾಸ್ವಾಮಿಗಳು ವಹಿಸಲಿದ್ದು ಉದ್ಘಾಟನೆಯನ್ನು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಟಿ ರಘುಮೂರ್ತಿ ನೆರವೇರಿಸಲಿದ್ದಾರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷ ಬುಡ್ನಹಟ್ಟಿ ಎಂ ನಾಗರಾಜ್ ಮಡಿವಾಳ ಮಾಚಿದೇವರ ವಿಶೇಷ ಉಪನ್ಯಾಸವನ್ನು ಜೀವನ ಕೌಶಲ್ಯ ತರಬೇತುದಾರರಾದ ಜೆಸಿ ರಾಜಶೇಖರ್ ನೀಡಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಕೇಂದ್ರ ಸಚಿವ ಎ ನಾರಾಯಣಸ್ವಾಮಿ, ಮಡಿವಾಳ ಸಮುದಾಯದ ರಾಜ್ಯಾಧ್ಯಕ್ಷ ಸಿ ನಂಜಪ್ಪ ಜಿಲ್ಲಾಧ್ಯಕ್ಷ ರಾಮಪ್ಪ ಆರ್ ರಘು ಕೌಟಿಲ್ಯ ಭಾಗವಹಿಸಲಿದ್ದು ಕಾರ್ಯಕ್ರಮದಲ್ಲಿ ತಾಲೂಕು ಮಡಿವಾಳ ಸಮಾಜದ ಗೌರವಾಧ್ಯಕ್ಷ ಎನ್ ಮಂಜುನಾಥ ಅಧ್ಯಕ್ಷರಾದ ಬುಡ್ನಹಟ್ಟಿ ನಾಗರಾಜ್ ಉಪಾಧ್ಯಕ್ಷ ಪುಟ್ಟಲಿಂಗಪ್ಪ ಕಾರ್ಯದರ್ಶಿ ಬಿಸಿ ಕುಶಾಲಪ್ಪ ಸಹ ಕಾರ್ಯದರ್ಶಿ ವಿ ವಿಜಯ ಖಜಾಂಚಿ ಆರ್ಟ್ಸನ್ ಪ್ರಕಾಶ್ ಉಪಸ್ಥಿತರಿರಲ್ಲಿದ್ದಾರೆ. ತಾಲೂಕಿನ ಎಲ್ಲಾ ಮಡಿವಾಳ ಕುಲ ಬಾಂಧವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಮಡಿವಾಳ ಸಮಾಜದ ಗೌರವಾಧ್ಯಕ್ಷ ಮಂಜುನಾಥ್, ನಗರಂಗೆರೆ ತಿಪ್ಪು , ವಿಜಯಪ್ಪ, ನಾಗರಾಜ್, ಸುರೇಶ್, ರಾಜು,ಉಪಸ್ಥಿತರಿದ್ದರು.