ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ರಹಿಂ ನಗರದಿಂದ ಮುಂಜಾನೆ 8.ಗಂಟೆ ಸಮಯದಲ್ಲಿ ಕಾಣೆಯಾದ ನಿತ್ಯ ಎಂಬ ಐದು ವರ್ಷದ ಬಾಲಕಿ ಬಳ್ಳಾರಿ ಬಸ್ ನಲ್ಲಿ ಏಜೆಂಟರ ಕೈಗೆ ಸಿಕ್ಕಿ, ಈಗ ಪೋಷಕರ ಮಡಿಲಿಗೆ ತಲುಪಿದ್ದಾಳೆ.
ತಂದೆ ಶ್ರೀನಿವಾಸ್ ತಾಯಿ ಪುಷ್ಪ ಇವರ ಮಗಳು ಬೆಳಗ್ಗೆ
ಸುಮಾರು 8 ಗಂಟೆ ಸಮಯಲ್ಲಿ ಮನೆಯಿಂದ ಹೊರಗೆ ಹೋಗಿ
ಕಾಣೆಯಾಗಿರುವ ಬಗ್ಗೆ ಕುಟುಂಬಸ್ಥರು ನಗರದ ಗಲ್ಲಿ ಗಲ್ಲಿ ಬಸ್ ನಿಲ್ದಾಣ
ಸೇರಿದಂತೆ ವಿವಿಧ ಸ್ಥಳದಲ್ಲಿ ಹುಡುಕಿದರು.
ನಂತರ ಪತ್ತೆಯಾಗದೆ
ಇರುವುದರಿಂದ ಕುಟುಂಬಸ್ಥರು ಆತಂಕಗೊಂಡು ಪೋಲಿಸ್ ಠಾಣೆಗೆ
ದೂರು ನೀಡಿ, ಸಾಮಾಜಿಕ ಜಾಲರಾಣದಲ್ಲೂ ಬಾಲಕಿಯ
ಪೋಟೋ ಹಾಕಿ ಮನವಿ ಮಾಡಿಕೊಂಡಿದ್ದರೂ ಕೊನೆಗೂ ಬಾಲಕಿ ಬಸ್
ಹತ್ತಿ ಬಳ್ಳಾರಿ ತಲುಪಿದ್ದು ಮಗುವನ್ನು ಕಂಡ ಬಸ್ ಸಿಬ್ಬದಿ ಮತ್ತೆ ಕರೆತಂದು
ಚಳ್ಳಕೆರೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಪೋಲಿಸ್ ಅಧಿಕಾರಿಕಾರಿಗಳು
ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ, ಒಟ್ಟಾರೆ ಮಗಳು ಕಾಣೆಯಾಗಿ ದುಖಃದಲ್ಲಿದ್ದ ಪೋಷಕರಿಗೆ ಸಂತೋಷ ತಂದ ಬಸ್ ಚಾಲಕರ ಈ ಕಾರ್ಯಕ್ಕೆ ಧನ್ಯವಾದಗಳು ಅರ್ಪಿಸಿ, ಪೊಲೀಸರಿಂದ ಮಗುವನ್ನು ಮನೆಗೆಕರೆದೊಯ್ಯುದ್ದಿದ್ದಾರೆ.