ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ವಿದ್ಯಾರ್ಥಿಗಳು ಉತ್ಸಾಹದಿಂದ ಪರೀಕ್ಷಾ ಕೇಂದ್ರಗೆ ತೆರಳಿದರು.

ಇನ್ನೂ‌ ಮೊದಲ ದಿನವಾದ ಕನ್ನಡ ಪರೀಕ್ಷೆಗೆ ಪಿಯು ಹಂತದ ವಿದ್ಯಾರ್ಥಿಗಳು ಕೇಂದ್ರಗಳತ್ತಾ ಸಾಗಿದರು.

ಚಳ್ಳಕೆರೆ ತಾಲೂಕಿನಲ್ಲಿ ಸು.3ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾವಣೆ ಮಾಡಿಕೊಂಡಿದ್ದರು ಎನ್ನಲಾಗಿದೆ

ಚಳ್ಳಕೆರೆ ನ್ಯೂಸ್ : ಮಾರ್ಚ 1.ರಿಂದ 22ರವೆರೆಗೆ ನಡೆಯುವ ದ್ವಿತೀಯ ಪಿಯು ವಾರ್ಪಿಕ ಪರೀಕ್ಷೆಗೆ ಮೊದಲ ದಿನವಾದ ಕನ್ನಡ ವಿಷಯ ಪರೀಕ್ಷೆಗೆ ವಿದ್ಯಾರ್ಥಿಗಳು ಉತ್ಸಾಹದಿಂದ ತೆರಳಿದರು.

ಚಿತ್ರದುರ್ಗ ಜಿಲ್ಲೆಯಲ್ಲೆ ಅತೀ ಹೆಚ್ಚಿನ ವಿದ್ಯಾರ್ಥಿಗಳು ಇರುವ ಪರೀಕ್ಷಾ ಕೇಂದ್ರ ಚಳ್ಳಕೆರೆ ಸರಕಾರಿ ಪದವಿ ಪೂರ್ವ ಕಾಲೇಜಿನ ಸುಮಾರು1418 ನೊಂದಾವಣೆ ಮಾಡಿಕೊಂಡು
1354 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಸು. 64 ವಿದ್ಯಾರ್ಥಿಗಳು ಗೈರು ಹಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಎಂ.ರವೀಶ್ ಮಾಹಿತಿ ನೀಡಿದ್ದಾರೆ.

ಇನ್ನೂ ಪರುಶುರಾಂಪುರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸು.379 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದರು. ಅದರಲ್ಲಿ ಸು.347 ವಿದ್ಯಾರ್ಥಿಗಳು ಹಾಜರಾಗಿದ್ದರು, ಇನ್ನೂ 32 ವಿದ್ಯಾರ್ಥಿಗಳು ಗೈರಾಗಿದ್ದರು.

ಅದರಂತೆ ಬಾಪುಜೀ ಪದವಿ ಪೂರ್ವ ಕಾಲೇಜಿನ 931 ವಿದ್ಯಾರ್ಥಿಗಳು ನೊಂದಾವಣೆ ಮಾಡಿಕೊಂಡಿದ್ದರು, ಅದರಲ್ಲಿ ಸು.881 ವಿದ್ಯಾರ್ಥಿಗಳು ಹಾಜರಾಗಿದ್ದರು..50 ವಿದ್ಯಾರ್ಥಿಗಳು ಗೈರಾಗಿದ್ದರು..

ಒಟ್ಟಾರೆ ಕನ್ನಡ ವಿಷಯಕ್ಕೆ ತಾಲೂಕಿನಲ್ಲಿ ಸು.146 ವಿದ್ಯಾರ್ಥಿಗಳು ಗೈರಾಗಿದ್ದರು ಎನ್ನಲಾಗಿದೆ.

Namma Challakere Local News
error: Content is protected !!