ಚಳ್ಳಕೆರೆ ನ್ಯೂಸ್:
ಸುಧಾಕರ್ ಅವರು ಶಿಫಾರಸ್ಸು ಪತ್ರ ವಾಪಾಸ್ಸು
ಪಡೆಯಬೇಕು
ಚಿತ್ರದುರ್ಗ ಮೆಡಿಕಲ್ ಕಾಲೇಜ್ ಗೆ ಡೀನ್ ಆಗಿ ಸಂಜೀವ್
ಅವರನ್ನು ನೇಮಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ
ಡಿ. ಸುಧಾಕರ್ ಅವರು ಸರ್ಕಾರಕ್ಕೆ ಶಿಫಾರಸ್ಸು ಪತ್ರವನ್ನ
ಕೊಟ್ಟಿರುವುದನ್ನು ಕರುನಾಡ ವಿಜಯಸೇನೆ ಖಂಡಿಸುತ್ತೆ.
ಕೂಡಲೇ
ಇದನ್ನು ರದ್ದು ಮಾಡಬೇಕು ಇಲ್ಲದೆ ಹೋದರೆ ರಾಜ್ಯದಾದ್ಯಂತ
ಸುಧಾಕರ್ ಅವರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು
ಜಿಲ್ಲಾಧ್ಯಕ್ಷ ಕೆ ಟಿ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಅವರು
ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು.