ಚಳ್ಳಕೆರೆ ನ್ಯೂಸ್ :
ಚಿತ್ರದುರ್ಗ ಜಿಲ್ಲಾ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್
ಬಯಸಿ ನಾನೂ ಕೂಡ ಆಕಾಂಕ್ಷಿಯಾಗಿದ್ದೇನೆಂದು ನಿವೃತ್ತ ಐಎಎಸ್
ಅಧಿಕಾರಿ ಶ್ರೀರಂಗಯ್ಯ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಪತ್ರಿಕಾ
ಗೋಷ್ಠಿಯಲ್ಲಿ ಮಾತಾಡಿದ ಅವರು ಈ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ
ಕಾರ್ಯ ನಿರ್ವಹಿಸಿದ್ದು, ಆರು ತಾಲೂಕುಗಳ ಜೊತೆಗೆ ತುಮಕೂರಿನ
ಶಿರಾ ಮತ್ತು ಪಾವಗಡ ಕ್ಷೇತ್ರಗಳಿಗೂ ನಾನು ಪರಿಚಯವಿದ್ದೇನೆ.
ಆಡಳಿತದ ಅನುಭವದ ಜೊತೆಗೆ ರಾಜಕೀಯ ಅನುಭವ ಪಡೆದು
ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದೇನೆ ಎಂದರು.
ಇನ್ನೂ ಎಲ್ಲಾ ಹಂತದ ಮುಖಂಡರ ಪರಿಚಯವಿದೆ, ಮತದಾರರ ಒಡನಾಟವಿದೆ ಇಗೇ ಕ್ಷೇತ್ರದ ಉದ್ದಗಲಕ್ಕೂ ನನಗೆ ಪರಿಚಯವಿದೆ ಎಂದು ಬಿಜೆಪಿ ಪಕ್ಷದ ಆಕಾಂಕ್ಷಿ ಶ್ರೀ ರಂಗಯ್ಯ ಹೇಳಿದ್ದಾರೆ.