ಚಳ್ಳಕೆರೆ ನ್ಯೂಸ್ :
ಎಚ್ಚರ ಇಲ್ಲದ ವ್ಯಕ್ತಿ, ತನ್ನ ಸಮಾಧಿಯನ್ನು ತಾನೇ
ತೋಡಿಕೊಂಡಂತೆ
ಎಲ್ಲವನ್ನು ನಾನು ಮಾಡಿದೆ ಎನ್ನುವುದು ಅಹಂಕಾರ..! ಯಾರಿಗೂ
ಒಳ್ಳೆಯದು ಮಾಡುವುದಿಲ್ಲ. ನಾನು ನೆಪ ಮಾತ್ರ ನನ್ನ ಹಿಂದೆ
ಮುಂದೆ ಇದ್ದು ಕಾರ್ಯನಿರ್ವಹಿಸುವ ಸಜ್ಜನರ ಸಲಹೆ, ಸಹಕಾರ
ಇಲ್ಲದಿದ್ದರೆ ನಾನೇನು ಮಾಡಲು ಸಾಧ್ಯ ಎನ್ನುವ ಎಚ್ಚರ ಇಲ್ಲದಿದ್ದರೆ
ಆ ವ್ಯಕ್ತಿ ತನ್ನ ಸಮಾಧಿಯನ್ನು ತಾನೇ ತೋಡಿಕೊಂಡಂತೆ
ಎಂದು ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ
ಸ್ವಾಮೀಜಿ ಹೇಳಿದರು.
ತಾಲೂಕಿನ ಸಾಣೆಹಳ್ಳಿ ಮಠದಲ್ಲಿ ಇಂದು
ಹಮ್ಮಿಕೊಂಡಿದ್ದ ಒಲಿದಂತೆ ಹಾಡುವೆನು ಕಾರ್ಯಕ್ರಮದಲ್ಲಿ ಅವರು
ಮಾತನಾಡಿದರು.
ಮನುಷ್ಯ ನಾನು ನಾನು ಎಂಬ ಅಹಾಂಕಾರ ಬಿಟ್ಟು ಎಲ್ಲರಲ್ಲಿ ನಾನು ಒಬ್ಬ ಎಂಬ ಮನೋಭಾವ ತಾಳಬೇಕು ಎಂದಿದ್ದಾರೆ.