ಚಳ್ಳಕೆರೆ ನ್ಯೂಸ್ : ನಾವು ಸೋತ್ತಿದ್ದೆವೆ ಹೊರತು ಸತ್ತಿಲ್ಲ ಆದ್ದರಿಂದ ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ನಾವು ಎಚ್ಚೆತ್ತುಕೊಳ್ಳಬೇಕು ಎಂದು ಜಿಲ್ಲಾಧ್ಯಕ್ಷ ಜಯಣ್ಣ ಹೇಳಿದರು.
ಅವರು ನಗರದ ಬೆಂಗಳೂರು ರಸ್ತೆಯ ದಲ್ಲಾಲರ ಸಮುದಾಯ ಭವನದಲ್ಲಿ ಜೆಡಿಎಸ್ ಪಕ್ಷದ ತಾಲೂಕು ಘಟಕದಿಂದ ಲೋಕಸಭಾ ಚುನಾವಣೆಯ ಕಾರ್ಯಕರ್ತರ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಭವಿಷ್ಯ ನಾವು ನಮ್ಮ ತಪ್ಪುಗಳಿಂದ ಮಾತ್ರ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸೋತಿದ್ದೆವೆ ಆದ್ದರಿಂದ ನಾವು ಪ್ರಸ್ತುತ ಲೋಕಾಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಹಾಗಿರುವುದರಿಂದ ನಾವು ಇಂದು ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ನಮ್ಮ ಪಕ್ಷದ ಬಲ ಹೆಚ್ಚಿಸಬೇಕು ಎಂದರು.
ಜೆಡಿಎಸ್ ಮುಖಂಡರು ಹಾಗು ಪರಾಜಿತ ಅಭ್ಯರ್ಥಿ ಎಂ.ರವೀಶ್ ಮಾತನಾಡಿ, ಕಾಂಗ್ರೇಸ್ ಸರಕಾರ ನೀಡಿದ ಗ್ಯಾರಂಟಿ ಯೋಜನೆಗಳು ಬಹಳ ದಿನಗಳ ಕಾಲ ಉಳಿಯುದಿಲ್ಲ ಆದ್ದರಿಂದ ಕಳೆದ ನಮ್ಮ ಜೆಡಿಎಸ್ ಕಾಂಗ್ರೇಸ್ ಮೈತ್ರಿ ಸರಕಾರ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಸರಕಾರ ನಮ್ಮ ಸರಕಾರವನ್ನು ಬಿಳಿಸಲು ಕುತಂತ್ರ ಕುಡುಕಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರು, ಇವರು ಇಂತಹ ದ್ರೋಹಿಗಳು ಎಂದು ಯಾರು ಕೂಡ ಅಂದುಕೊಂಡಿರಲಿಲ್ಲ ಆದರೆ ಮತ್ತೆ ಪ್ರಸ್ತುತ ನಾವು ಬಿಜೆಪಿ ಜೊತೆ ಮೈತ್ರಿ ಯಾದರೆ ಕೊಮುವಾದಿಗಳು ಎನ್ನುತ್ತಾರೆ, ಆದರೆ ಅವರು ಯಾವ ಪಕ್ಷದಲ್ಲಿ ಮೈತ್ರಿ ಯಾದರೆ ಕೊಮುವಾದಿ ಅಲ್ವ ಎಂದು ಟೀಕಿಸುತ್ತಾರೆ ಎಂದು ಕಿಡಿಕಾರಿದರು.
ಇನ್ನೂ ತಾಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ಮಾತನಾಡಿ, ಕಳೆದ ಎರಡು ವಿಧಾನ ಸಭಾ ಚುನಾವಣೆಯಲ್ಲಿ ಅತೀ ಕಡಿಮೆ ಅಂತರದಲ್ಲಿ ಸೋಲುಂಡಿದ್ದೆವೆ, ಆದರೆ ಈ ಲೋಕಸಭಾ ಚುನಾವಣೆಯಲ್ಲಿ ನಮ್ಮ ತಪ್ಪು ಮಾಡಬಾರದು, ಎಂದು ಕಿವಿಮಾತು ಹೇಳಿದರು.
ಇದೇ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷ ಜಯಣ್ಣ, ತಾಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ಪರಾಜಿತ ಅಭ್ಯರ್ಥಿ ಎಂ.ರವೀಶ್ , ಲೋಕಸಭಾ ವೀಕ್ಷಕರಾದ ಪಾವಗಡ ತಿಮ್ಮರಾಯಪ್ಪ, ಹನುಮಂತರಾಯಪ್ಪ, ರವಿಂದ್ರಪ್ಪ, ಆನಂದಪ್ಪ, ವೀರಣ್ಣ, ಶಿವಣ್ಣ, ಚಂದ್ರಣ್ಣ, ನಗರಸಭೆ ಸದಸ್ಯೆ ನಾಗವೇಣಿ, ಚೆನ್ನಿಗರಾಮಯ್ಯ, ಇತರ ಮಹಿಳಾ ಕಾರ್ಯಕರ್ತೆಯರು, ಮುಖಂಡರು ಪಾಲ್ಗೊಂಡಿದ್ದರು.