ಚಳ್ಳಕೆರೆ ನ್ಯೂಸ್ : ಇಂದಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸುವ ಮೂಲಕ ಮೌಲ್ಯಯುತ ಶಿಕ್ಷಣ ನೀಡಬೇಕು ಎಂದು ನೃತ್ಯ ನಿಕೇತನ ಸಂಸ್ಥೆಯ ವಿಷ್ಣುಮೂರ್ತಿ ಹೇಳಿದರು.
ನಗರದ ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೃತ್ಯ ನಿಕೇತನ ಶಾಸ್ತ್ರೀಯ ನೃತ್ಯ ಸಂಗೀತ ಶಿಕ್ಷಣ ಕೇಂದ್ರ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ಬಡಾವಣೆಗಳಲ್ಲಿ ಭರತನಾಟ್ಯ ಸೊಬಗು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ ಮೂವತೈದು ವರ್ಷಗಳಿಂದ ಇಂತಹ ಬಯಲು ಸೀಮೆಯಲ್ಲಿ ನೃತ್ಯ ಸಂಗೀತ ಕಲಿಸುವುದು ನಿಜಕ್ಕೂ ಸಹಾಸದ ಕೆಲಸವಾಗಿತ್ತು, ಆದರೆ ಸುಧಾಮೂರ್ತಿ ರವರ ಪ್ರಯತ್ನದಿಂದ ಇಂದು ಸಾವಿರಾರು ನೃತ್ಯಕಾರರು ದೇಶ ವಿದೇಶಗಳಲ್ಲಿ ತಮ್ಮ ನೃತ್ಯ ಕಲೆಯನ್ನು ಪ್ರದರ್ಶಿಸುವ ಮೂಲಕ ಶಾಸ್ತ್ರೀಯ ಸಂಗೀತದ ಮಹತ್ವವನ್ನು ತಿಳಿಸಿದ್ದಾರೆ..
ಇಂದು ಬಡಾವಣೆಗಳಲ್ಲಿ ಭರತನಾಟ್ಯ ಸೊಬಗನ್ನು ಉಣಬಡಿಸುವ ಮೂಲಕ ಈಡೀ ಚಳ್ಳಕೆರೆ ಬಯಲು ಸೀಮೆಯಲ್ಲಿ ನೃತ್ಯ ಸಂಗೀತವನ್ನು ಹಸಿರಾಗಿಸುವಂತೆ ಮಾಡಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ರಾಜೇಶ್ ಗುಪ್ತ ಮಾತನಾಡಿ, ಇಂದಿನ ಪೋಷಕರು ಮಕ್ಕಳ ಅಂಕಗಳ ಹಿಂದೆ ಓಡದೆ ಮೌಲ್ಯಯುತ ಶಿಕ್ಷಣ ಕೊಡಿಸಬೇಕು ಇನ್ನೂ ಇಂದಿನ ಮಕ್ಕಳು ಮೊಬೈಲ್ ಗೀಳಿನಿಂದ ಮನಸ್ಥಿತಿ ಬದಲಾಗುವುದು ಅನಿರ್ವಾಯವಾಗಿದೆ, ಆದ್ದರಿಂದ ಮೊಬೈಲ್ ಗೀಳಿನಿಂದ ಹೊರತನ್ನಿ ,ಇಂತಹ ಭರತನಾಟ್ಯ ನೃತ್ಯ ಕಲಿಕೆ ಅಷ್ಟು ಸುಲಭವಲ್ಲ ಕಠಿಣವಾದ ಭರತನಾಟ್ಯ ವಿಧೈಯನ್ನು ಇಂದಿನ ಮಕ್ಕಳಿಗೆ ಕಲಿಸಲು ಪೋಷಕರು ಸಹಕಾರ ಮುಖ್ಯವಾಗಿದೆ ಆದ್ದರಿಂದ ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ ಉಳಿಸಲು ಸಂಸ್ಕಾರ ಮುಖ್ಯವಾಗುತ್ತದೆ ಎಂದರು.
ಸಂಜೀವಿನಿ ಲ್ಯಾಬ್ ಮಾಲೀಕರಾದ ಮೃತ್ಯುಂಜಯ ಮಾತನಾಡಿ, ಶಿಕ್ಷಣ ಎಂಬುದು ಇಂದು ಆಧುನಿಕತೆಯ ಯಾಂತ್ರಿಕವಾಗಿ ಮುಂದೆ ಸಾಗುತ್ತದೆ ಆದರೆ ಮೌಲ್ಯಯುತ ಶಿಕ್ಷಣ, ಸಂಸ್ಕೃತಿ ಹಾಗೂ ಸಂಸ್ಕಾರ ಸಿಗುವಂತಾ ಶಿಕ್ಷಣ ಇಂದಿನ ಕಾಲದಲ್ಲಿ ಕಣ್ಮರೆಯಾಗುತ್ತಿದೆ,ಆದ್ದರಿಂದ ಪೋಷಕರು ಮಕ್ಕಳು ಅಂಕಗಳ ಜೊತೆ ಓಡುವ ಬದಲು ಮೌಲ್ಯಯುತ ಶಿಕ್ಷಣದ ಕಡೆ ಗಮನಹರಿಸಿ ಎಂದರು.
ಇದೇ ಸಂಧರ್ಭದಲ್ಲಿ ಹೊಂಗಿರಣ ಇಂಟರ್ನ್ಯಾಷನಲ್ ಸಂಸ್ಥೆಯ ಗೌರವ ಅಧ್ಯಕ್ಷ ಡಿ.ನಾಗಪ್ಪ, ಅಧ್ಯಕ್ಷ ರಾಜೇಶ್ ಗುಪ್ತ, ಕಾರ್ಯದರ್ಶಿ ಡಿ.ದಯಾನಂದ ಪ್ರಹ್ಲಾದ್, ನಿರ್ದೇಶಕರಾದ ಡಿ.ಶಿವಪ್ರಸಾದ್, ಡಿಎನ್.ಮಧುಸೂದನ್, ಮುಖ್ಯ ಶಿಕ್ಷಕ ಡಿವಿಎನ್.ಪ್ರಸಾದ್, ಶೋಭಾ ಸುರೇಶ್, ನೃತ್ಯ ಸಂಗೀತ ಸುಧಾಮೂರ್ತಿ, ವಿಷ್ಣುಮೂರ್ತಿ, ಸಂಜೀವಿನಿ ಲ್ಯಾಬ್ ಮಾಲೀಕರಾದ ಮೃತ್ಯುಂಜಯ, ಸಹ ಶಿಕ್ಷಕರು, ಪೋಷಕರು, ಮಕ್ಕಳು, ಸಾರ್ವಜನಿಕರು, ಇತರರು ಪಾಲ್ಗೊಂಡಿದ್ದರು.