ಚಳ್ಳಕೆರೆ ನ್ಯೂಸ್ : ಬಡಾವಣೆಗಳಲ್ಲಿ ಭರತನಾಟ್ಯದ ಸೊಬಗು ಕಾರ್ಯಕ್ರಮವನ್ನು ಇದೇ ಫೆ.24 ರಂದು ಹೊಂಗಿರಣ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ರಾಜೇಶ್‌ಗುಪ್ತ ತಿಳಿಸಿದ್ದಾರೆ.
ಅವರು ಮಾಧ್ಯಮದೊಂದಿಗೆ ಮಾತನಾಡಿದ ಅವರು ನೃತ್ಯ ನಿಕೇತನ ಶಿಕ್ಷಣ ಕೇಂದ್ರ, ಹೊಂಗಿರಣ ಇಂಟರ್ ನ್ಯಾಷನಲ್ ಶಾಲೆ ಹಾಗೂ ಸಂಜೀವಿನಿ ಲ್ಯಾಬ್ ವತಿಯಿಂದ ಹಮ್ಮಿಕೊಂಡ ಬಡಾವಣೆಗಳಲ್ಲಿ ಭರತನಾಟ್ಯದ ಸೊಬಗು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಾತನಾಡಿದರು,
ಕಲೆ ಹಾಗೂ ಸಂಗೀತ ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಾಗಿದೆ ಆದ್ದರಿಂದ ಪ್ರತಿ ಬಡಾವಣೆಗಳಲ್ಲಿ ಈ ಕಲೆ ಉಳಿಸಬೇಕು ಮುಂದಿನ ಪೀಳಿಗೆಗೆ ಕೊಂಡೊಯ್ಯುಬೇಕು ಎಂಬ ಪರಿಕಲ್ಪನೆಯಲ್ಲಿ ಈದೇ ಫೆ.24 ರಂದು ಚಳ್ಳಕೆರೆ ನಗರದ ಜನತಾ ಕಾಲೋನಿಯ ಸಮೀಪದ ಹೊಂಗಿರಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿದ ಸ್ಥಳೀಯ ಶಾಸಕರು ಹಾಗೂ ನೂತನವಾಗಿ ಕರ್ನಾಟಕ ರಾಜ್ಯದ ಸಣ್ಣ ಕೈಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಟಿ.ರಘುಮೂರ್ತಿರವರಿಗೆ ಅಭಿನಂದನಾ ಸಮಾರಂಭ ಹಾಗೂ ಹೊಂಗಿರಣ ವಿದ್ಯಾಸಂಸ್ಥೆಯಿAದ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತರಾದ ಸುಧಾಮೂರ್ತಿರವರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ ಎನ್ನಲಾಗಿದೆ.
ಇನ್ನೂ ಕಾರ್ಯಕ್ರಮದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇAದ್ರ, ಸದಸ್ಯೆ ಸುಮಕ್ಕ, ಸಂಸ್ಥೆಯ ಗೌರವ ಅಧ್ಯಕ್ಷ ಡಿ.ನಾಗಪ್ಪ, ಕಾರ್ಯದರ್ಶಿ ಸಿ.ದಯಾನಂದ, ಟ್ರಸ್ಟಿಯಾದ ಡಿ.ಶಿವಪ್ರಸಾದ್, ಟಿ.ಚಿಕ್ಕಣ್ಣ, ಹಿರಿಯ ನೃತ್ಯ ಸಂಗೀತ ಗುರುಗಳಾದ ಸುಧಾಮೂರ್ತಿ, ಸಂಜೀವಿನ ಲ್ಯಾಬ್ ಮಾಲೀಕರಾದ ಎಂ.ಎನ್. ಮೃತ್ಯುಂಜಯ ಇತರರು ಭಾಗವಹಿಸುವರು.