ಚಳ್ಳಕೆರೆ ನ್ಯೂಸ್ : ಇಷ್ಟು ದಿನ ಹೇಗಿದ್ದಿರೀ ಗೊತ್ತಿಲ್ಲ ಆದರೆ ಇನ್ನೂ ಮುಂದೆ ಕಾನೂನು ಪಾಲಿಸಲೇಬೇಕು ಅನಿವಾರ್ಯ, ನಿಮ್ಮ ಬೆಲೆ ಬಾಳುವ ಚಿನ್ನದ ಅಂಗಡಿಗಳಿಗೆ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಲೇಬೇಕು ಎಂದು ನೂತನವಾಗಿ ಅಧಿಕಾರ ವಹಿಸಿಕೊಂಡ ಚಳ್ಳಕೆರೆ ಪೊಲೀಸ್ ಠಾಣೆ ಪಿಐ ಕೆ.ಕುಮಾರ್ ಹೇಳಿದರು.
ಅವರು ನಗರದ ಪೊಲೀಸ್‌ಠಾಣೆ ಆವರಣದಲ್ಲಿ ಚಿನ್ನ ಆಭರಣ ವರ್ತಕರ ಹಾಗೂ ಮಾಲೀಕರ ಸಭೆಯಲ್ಲಿ ಮಾತನಾಡಿದರು, ಚಳ್ಳಕೆರೆ ನಗರ ದೊಡ್ಡದಾಗಿದೆ ಇಲ್ಲಿಗೆ ಬರುವ ವ್ಯಾಪಾರಿಗಳ ನಿಗಾ ಇಡಲು ಸಿಸಿಟಿವಿ ಮುಖ್ಯವಾಗುತ್ತದೆ, ಇನ್ನೂ ಆಂಧ್ರದ ಗಡಿಯನ್ನು ಹಂಚಿಕೊAಡ ಚಳ್ಳಕೆರೆ ನಗರ, ಇದರಿಂದ ಇಲ್ಲಿಗೆ ಬರುವ ವ್ಯಾಪಾರಿಗಳು ಹಾಗೂ ಇತರೆ ವರ್ಗದ ಜನರನ್ನು ಗುರುತಿಸಲು ಕಷ್ಟಸಾಧ್ಯ ಆದ್ದರಿಂದ ನಿಮ್ಮ ಅಂಗಡಿ ಸುರಕ್ಷತೆಗೆ ನೀವು ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಿ ಎಂದು ಹೇಳಿದರು.
ಇನ್ನೂ ಮೊದಲ ಹಂತವಾಗಿ ನಿಮಗೆ ತಿಳುವಳಿಕೆ ನೋಟಿಸ್ ನೀಡಲಾಗುತ್ತದೆ ಇನ್ನೂ ಡಿವೈಎಸ್‌ಪಿ ಹಂತದಲ್ಲಿ ಪ್ರಕರಣ ದಾಖಲಾಗುತ್ತದೆ, ಕೊನೆಗೆ 10ರಿಂದ 15ಸಾವಿರ ದಂಡವನ್ನು ಕಟ್ಟಬೇಕಾಗುತ್ತದೆ ಆದ್ದರಿಂದ ನಿಮ್ಮ ಸುರಕ್ಷತೆಗೆ ನಿಮ್ಮ ಜವಾಬ್ದಾರಿ ಕೂಡ ಮುಖ್ಯವಾಗಿದೆ ಆದ್ದರಿಂದ ಪೋಲೀಸ್ ಇಲಾಖೆಯೊಂದಿಗೆ ಸಹಕಾರಿಸಿ ಕಳ್ಳತನ ಪ್ರಕರಣಗಳು ಹಾಗೂ ಕಾನೂನು ಬಾಹಿರ ಚಟುವಟಿಕೆಗಳನ್ನು ಕಡಿವಾಣ ಹಾಕಿ ಎಂದರು.
ಇದೇ ಸಂಧರ್ಭದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟೆರ್ ಕೆ.ಸತೀಶ್ ನಾಯ್ಕ್ ಮಾತನಾಡಿ, ನಗರದಲ್ಲಿ ಸರಿ ಸುಮಾರು ಬಂಗಾರದ ಅಂಗಡಿಗಳು ಇವೆ, ಕಳ್ಳರು ಇವುಗಳನ್ನೆ ಟಾರ್ಗಟ್ ಮಾಡಿ ನೀವು ಊಟಕ್ಕೆ ಹೋದ ಸಮಯದಲ್ಲಿ, ಇಲ್ಲ ವ್ಯಾಪಾರಿ ಸೋಗಿನಲ್ಲಿ ನಿಮ್ಮ ಅಂಗಡಿಗೆ ಬಂದು ನಿಮ್ಮ ಮನಸ್ಥಿತಿಯನ್ನು ಹರಿತು ಕಳ್ಳತನದ ಯತ್ನಗಳು ಜರುಗುತ್ತವೆ. ಆದ್ದರಿಂದ ಇಂತಹ ಕಳ್ಳತನಗಳಿಂದ ತಪ್ಪಿಸಿಕೊಳ್ಳಲು ಸಿಸಿಕ್ಯಾಮರಾ ಹಾಕಿಸಿಕೊಳ್ಳಿ ಎಂದು ವರ್ತಕರಿಗೆ ಮನವರಿಕೆ ಮಾಡಿಕೊಟ್ಟರು.
ಇದೇ ಸಂಧರ್ಭದಲ್ಲಿ ಚಿನ್ನ ಬೆಳ್ಳಿ ವರ್ತಕರು ಹಾಗೂ ಇತರ ಮಾಲೀಕರು, ಪೊಲೀಸರು ಹಾಜರಿದ್ದರು.

About The Author

Namma Challakere Local News
error: Content is protected !!