ನಾಯಕನಹಟ್ಟಿ:: ಮನೆ ಮಠದ ನಡುವೆ ಗ್ರಾಮದಲ್ಲಿ ಒಂದು ದೇವಸ್ಥಾನ ಕಟ್ಟಬೇಕು ಎಂದು ಪರಮಪೂಜ್ಯ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ಹೇಳಿದ್ದಾರೆ.

ಸಮೀಪದ ಗೌಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋಗಿಹಟ್ಟಿ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ನೂತನ ಶ್ರೀ ದುರ್ಗಾಂಬಿಕ ದೇವಸ್ಥಾನದ ಉದ್ಘಾಟನೆ ಹಾಗೂ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ದಿವ್ಯ ಸಾನಿಧಿ ವಹಿಸಿ ಮಾತನಾಡಿದರು ಭಕ್ತಿ ಮತ್ತು ಸಂಸ್ಕಾರ ಶ್ರದ್ದೆಗೆ ಜೋಗಿಹಟ್ಟಿ ಗ್ರಾಮದ ಅಂಬೇಡ್ಕರ್ ಕಾಲೋನಿಯ ಶ್ರೀ ದುರ್ಗಾಂಬಿಕ ದೇವಿ ದೇವಸ್ಥಾನದ ಉದ್ಘಾಟನೆಯನ್ನು ಗ್ರಾಮದ ಪ್ರತಿಯೊಬ್ಬರು ಸಂಭ್ರಮ ಸಡಗರದಿಂದ ದೇವಸ್ಥಾನದ ಪ್ರಾರಂಭೋತ್ಸವ ಅಧೂರಿಯಾಗಿ ಆಚರಣೆಯನ್ನು ಮಾಡಿದ್ದಾರೆ.
ನಮ್ಮ ತಂದೆ ತಾಯಿಗಳು ತಮ್ಮ ಮಕ್ಕಳಿಗಾಗಿ ಏನೆಲ್ಲ ತ್ಯಾಗವನ್ನು ಮಾಡುತ್ತಾರೆ . ಹೆತ್ತವರನ್ನು ಇದ್ದಾಗ ಕಡೆಗಾಣಿಸಿ ಸತ್ತಾಗ ಹೂಮಾಲೆ ಹಾಕಿದರೆ ದೇವರು ಮೆಚ್ಚುವುದಿಲ್ಲ.
ಅದರಿಂದ ಗ್ರಾಮದಲ್ಲಿ ಪ್ರತಿಯೊಬ್ಬ ಗುರು ಹಿರಿಯರನ್ನು ಗೌರವದಿಂದ ಕಾಣಬೇಕು ಮತ್ತು ಅವರ ಮಾರ್ಗದರ್ಶನ ಬಹು ಮುಖ್ಯ. ಮನೆಮಠದ ನಡುವೆ ಗ್ರಾಮದಲ್ಲಿ ಒಂದು ದೇವಸ್ಥಾನ ಕಟ್ಟಬೇಕು ತಮ್ಮ ತಮ್ಮ ಮನೆಗಳಲ್ಲಿ ಪ್ರತಿಯೊಬ್ಬರನ್ನು ಗೌರವದಿಂದ ಕಾಣಬೇಕು ದೇವಸ್ಥಾನ ಮನುಷ್ಯನಿಗೆ ಶಾಂತಿ ನೆಮ್ಮದಿ ನೀಡುವ ಸ್ಥಳವಾಗಬೇಕು ನಂಬಿಕೆಗಳ ಶ್ರದ್ಧಾ ಕೇಂದ್ರವೇ ದೇವಸ್ಥಾನವು ಎಂದರು.

ಇದೇ ಸಂದರ್ಭದಲ್ಲಿ ಜೋಗಿಹಟ್ಟಿ ಗ್ರಾಮದ ಸಮಸ್ತ ಊರಿನ ಪ್ರಮುಖರು ಹಟ್ಟಿಯ ಯಜಮಾನರಾದ ಸಣ್ಣ ನಾಗಪ್ಪ, ಮಾಳಿಗೆ ತಿಮ್ಮಯ್ಯ,ದಡ್ಡಪ್ಪ, ನಾಯಕನಹಟ್ಟಿ ತಿಪ್ಪೇಸ್ವಾಮಿ, ಮಲ್ಲಪ್ಪ, ಕಾಶಿಪುರ ದುರುಗಪ್ಪ, ಉರುಕಜ್ಜರು ರತ್ನಪ್ಪ, ಮತ್ತು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸಣ್ಣಪ್ಪ, ಸದಸ್ಯ ಮಾಜಿ ಅಧ್ಯಕ್ಷ ಜಿ ಒ. ಓಬಳೇಶ್, ಸದಸ್ಯೆ ಮಂಜಮ್ಮ ಡಿ ಜಿ ಗೋವಿಂದಪ್ಪ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಟಿ ತಿಪ್ಪೇಶ್, ಸೇರಿದಂತೆ ಅಂಬೇಡ್ಕರ್ ಕಾಲೋನಿಯ ಸಮಸ್ತ ಗ್ರಾಮಸ್ಥರು ಇದ್ದರು

About The Author

Namma Challakere Local News
error: Content is protected !!