ನಾಯಕನಹಟ್ಟಿ : ಭದ್ರಾ ಯೋಜನೆ ಶೀಘ್ರ ಕಾರ್ಯ ಅನುಷ್ಠಾನಕ್ಕೆ ಆಗ್ರಹಿಸಿ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಮಂಗಳವಾರ ಕರೆ ನೀಡಿದ್ದ ನಾಯಕನಹಟ್ಟಿ ಬಂದ್ ಸಂಪೂರ್ಣ ಯಶಸ್ವಿಗೊಂಡಿದೆ.
ಭದ್ರಾ ಮೇಲ್ದಂಡೆ ಯೋಜನೆಗೆ ೫೩೦೦ ಕೋಟಿ ಹಣ ಬಿಡುಗಡೆ ಮಾಡದೇ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕರುನಾಡು ವಿಜಯ ಸೇನೆ ಜಿಲ್ಲಾಧ್ಯಕ್ಷರಾದ ಕೆ. ಟಿ. ಶಿವಕುಮಾರ್ ಆರೋಪಿಸಿದರು.
ನಾಯಕನಹಟ್ಟಿ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ನೀರಾವರಿ ಹಾಗೂ ಸಾಮಾಜಿಕ ಹೋರಾಟ ಸಮಿತಿ ವತಿಯಿಂದ ಮಂಗಳವಾರ ಬಂದ್ ಕಾರ್ಯಕ್ರಮದಲ್ಲಿ ಮಾತನಾಡಿದವರು. ಚಿತ್ರದುರ್ಗ ಜಿಲ್ಲೆಯ ಜನರಿಗೆ ಮಲತಾಯಿ ಧೋರಣೆ ತೋರಿಸುವಲ್ಲಿ ಯಶಸ್ವಿಯಾಗಿದೆ.
ಕೇಂದ್ರ ಸಚಿವರಾದ ನಾರಾಯಣಸ್ವಾಮಿ ಪ್ರಧಾನಿಗಳ ಹತ್ತಿರ ಬಳಿ ಹೋಗಿ ಸಮಾಲೋಚಿಸಿ? ಬರುವ ಮಾರ್ಚ್ ತಿಂಗಳಲ್ಲಿ ಹಣವನ್ನು ಬಿಡುಗಡೆ ಮಾಡಿಸಿ ಚಿತ್ರದುರ್ಗ ಜಿಲ್ಲೆಯ ಜನರ ಋಣವನ್ನು ತೀರಿಸಬೇಕು ಇಲ್ಲದೆ ಹೋದರೆ ರಾಜನಾಮೆಯನ್ನು ಕೊಟ್ಟು ತಮ್ಮ ಕ್ಷೇತ್ರದ ಆನೇಕಲ್‌ಗೆ ನಮ್ಮಿಂದ ಬೀಳ್ಕೊಡುಗೆ ಪಡೆದು ಸೀರೆ ಬೆಳೆ ಕೊಡ್ತೀವಿ ಅದನ್ನು ತೆಗೆದುಕೊಂಡು ಹೋಗಿ ಎಂದು ನೇರವಾಗಿ ಗುಡುಗಿದರು.
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಾಲರಾಜ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ತುರ್ತಾಗಿ ಹಣ ಬಿಡುಗಡೆ ಮಾಡಬೇಕು ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಬೇಗ ಮುಗಿಸಿ ಕೆರೆಗಳಿಗೆ ನೀರು ತರಿಸುವಂತಹ ಕೆಲಸ ಮಾಡಬೇಕು ಎಂದು ತಿಳಿಸಿದರು. ಚಿತ್ರದುರ್ಗ ಜಿಲ್ಲೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರು ಭದ್ರಾ ಮೇಲ್ದಂಡೆ ಯೋಜನೆಗೆ ೫,೩೦೦ ಕೋಟಿ ಹಣ ಬಿಡುಗಡೆ ಮಾಡುತ್ತೇನೆಂದು ಹೇಳಿ ಹೋಗಿದ್ದರು ಆದರೆ ಹಣ ಬಿಡುಗಡೆ ಮಾಡಲಿಲ್ಲ ಮಾತು ತಪ್ಪಿದ ನರೇಂದ್ರ ಮೋದಿ ಎಂದು ಬಣ್ಣಿಸಿದರು.
ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾದ ಮುದಿಯಪ್ಪ ಮಾತನಾಡಿ ನಾಯಕನಹಟ್ಟಿ ಹೋಬಳಿ ೧೩,೦೦೦ ಕ್ಕೆ ಹೆಚ್ಚು ಪ್ರದೇಶವನ್ನು ಬಿಟ್ಟು ಕೊಟ್ಟಿದ್ದೇವೆ ಹೋಬಳಿಯ ಜನರ ಈ ತ್ಯಾಗಕ್ಕೆ ಬೆಲೆ ಕಟ್ಟಲಾಗದು ಭೂಮಿ ತ್ಯಾಗ ಮಾಡಿರುವ ಇಲ್ಲಿನ ಸಮುದಾಯದಗಳಿಗೆ ಪರ್ಯಾಯವಾಗಿ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರಯತ್ನ ಮಾಡಿಲ್ಲ ಎಂಬುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು
ಪಾದಗೆಟ್ಟೆಯಿಂದ ಒಳ ಮಠ ಅಂಬೇಡ್ಕರ್ ಸರ್ಕಲ್ ನಾಯಕನಹಟ್ಟಿಯ ಪ್ರಮುಖ ಬೀದಿಗಳಲ್ಲಿ ಮರೆವಣೆಗೆ ನಡೆಸಿದರು.
ಉಪತಹಸೀಲ್ದಾರ್ ಶಕುಂತಲಾ ಬಿ ಅವರಿಗೆ ನೀರಾವರಿ ಹೋರಾಟ ಸಮಿತಿವತಿಯಿಂದ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಪಟೇಲ್ ಜಿಎಂ ತಿಪ್ಪೇಸ್ವಾಮಿ, ಬಸವ ರೆಡ್ಡಿ, ಯಾದವ್ ರೆಡ್ಡಿ, ನಿಜಲಿಂಗ, ಭೂತಯ್ಯ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನಾಯಕನಹಟ್ಟಿ ಹೋಬಳಿ ಅಧ್ಯಕ್ಷರು ಈ ನಾಗರಾಜ್ ಮೀಸೆ, ಜಿಲ್ಲಾ ಕಾರ್ಯದರ್ಶಿ ನವೀನ, ಜಿಲ್ಲಾ ಉಪಾಧ್ಯಕ್ಷರು ಪಟೇಲ್ ಮಲ್ಲಿಕಾರ್ಜುನ , ತಾಲ್ಲೂಕು ಅಧ್ಯಕ್ಷರು ಎಸ್ ಪ್ರಸನ್ನ, ಈ ಸಂದರ್ಭದಲ್ಲಿ ಬಂದ್‌ಗೆ ೩೩ ಸಂಘಟನೆಗಳ ಅಧ್ಯಕ್ಷರು ಹಾಗೂ ಕಾರ್ಯಕರ್ತರು, ಎತ್ತು ಗಾಡಿ, ಟ್ರ‍್ಯಾಕ್ಟರ್, ಕುರಿ-ಮೇಕೆ ಹಾಗೂ ಪ್ರಮುಖ ರೈತರು, ಹಾಗೂ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷರು ಮತ್ತು ಪಧಾಧಿಕಾರಿಗಳು, ಪಟ್ಟಣ ಪಂಚಾಯ್ತಿ ಸದಸ್ಯರು, ಪೋಲಿಸ್ ಇಲಾಖೆಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು.