ಆಶಾ ಕಿರಣ ಯೋಜನೆಯಡಿ ಎರಡನೇ ಹಂತದ ನೇತ್ರ ತಪಾಷಣೆಗೆ ಚಾಲನೆ ನೀಡಿದ ಜಿಲ್ಲಾ ಕುಷ್ಟರೋಗ ನಿವಾರಣಾಧಿಕಾರಿ ಡಾ. ನಾಗರಾಜ್
ನಾಯಕನಹಟ್ಟಿ:: ರಾಜ್ಯ ಸರ್ಕಾರ ನೂತನವಾಗಿ ಗ್ರಾಮೀಣ ಪ್ರದೇಶದ ಜನರಿಗೆ ದೃಷ್ಟಿ ದೋಷ ಪರೀಕ್ಷಿಸಲು ಆಶಾ ಕಿರಣ ಯೋಜನೆಯಲ್ಲಿ ಎರಡನೇ ಹಂತದ ನೇತ್ರ ತಪಾಸಣೆಯಲ್ಲಿ ಭಾಗವಹಿಸಿ ಸದುಪಯೋಗನ್ನ ಪಡೆಸಿಕೊಳ್ಳುವಂತೆ ತಿಳಿಸಿದ್ದಾರೆ.
ಪಟ್ಟಣದ ಶ್ರೀ ಹಟ್ಟಿ ಮಲ್ಲಪ್ಪ ನಾಯಕ ಕಚೇರಿಯಲ್ಲಿ ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಎರಡನೇ ಹಂತದ ನೇತ್ರ ತಪಾಷಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ್ದಾರೆ. ರಾಜ್ಯ ಸರ್ಕಾರದ ಆಶಾಕಿರಣ ಮಹತ್ವವಾದ ಯೋಜನೆಯ ಜಾರಿಗೆ ತಂದಿದೆ ಗ್ರಾಮೀಣ ಪ್ರದೇಶದ ಬಡ ಜನರಿಗೆ ಆಶಾ ಕಿರಣ ಯೋಜನೆ ವರದಾನವಾಗಲಿದೆ ಎಂದರು.
ಇದೇ ವೇಳೆ ನೀರಾವರಿ ಹೋರಾಟ ಸಮಿತಿಯ ಹೋಬಳಿ ಅಧ್ಯಕ್ಷ ಜಿ ಪಿ ಮುದಿಯಪ್ಪ ಮಾತನಾಡಿ ಲಕ್ಷ ಲಕ್ಷ ಹಣವನ್ನು ಹಾಕಿ ಖಾಸಗಿ ಆಸ್ಪತ್ರೆಯಲ್ಲಿ ಸೌಲಭ್ಯವನ್ನು ಪಡೆಯುವ ಗ್ರಾಮೀಣ ಪ್ರದೇಶದ ಬಡ ಜನರಿಗೆ ಸರ್ಕಾರ ಇಂತಹ ಒಂದು ಮಹತ್ವವಾದ ಯೋಜನೆಯನ್ನು ಜಾರಿಗೆ ತಂದು ಬಡಜನರ ನೆರವಿಗೆ ಇಂಥ ಯೋಜನೆ ತಂದಿರುವುದು ತುಂಬ ಸಂತೋಷದ ವಿಷಯ ಎಂದರು.
ಇದೇ ಸಂದರ್ಭದಲ್ಲಿ ಡಾನ್ ಬಾಸ್ಕೋ ಶಾಲೆಯ ಕಾರ್ಯದರ್ಶಿ ಎಸ್ ಟಿ ಬೋರ್‌ಸ್ವಾಮಿ, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ ಬಸಪ್ಪ ನಾಯಕ, ಸೃಷ್ಟಿ ಸಂಸ್ಥೆ ಆರ್. ಎನ್ನಪ್ಪ, ಹೆಲ್ತ್ ಇನ್ಸ್ಪೆಕ್ಟರ್ ಅಧಿಕಾರಿ ಚೈತ್ರ ಸಮುದಾಯ ಆರೋಗ್ಯ ಅಧಿಕಾರಿ ನಲಗೇತನಹಟ್ಟಿ ಮುನಿರಾಬಾನು, ನೇತ್ರಾಧಿಕಾರಿ ಡಾ. ವೀಣಾ, ಆಶಾ ಕಾರ್ಯಕರ್ತರ ಪಾರಿಜಾತ, ದ್ರಾಕ್ಷಾಯಿಣಿ, ಅನಸೂಯಮ್ಮ, ಪರಂಜ್ಯೋತಿ, ರತ್ನಮ್ಮ, ರಾಧಮ್ಮ ಸೇರಿದಂತೆ ವಿವಿಧ ಹಳ್ಳಿಯ ವೃದ್ಧರು ಮಹಿಳೆಯರು ಗ್ರಾಮಸ್ಥರು ಇದ್ದರು