ಚಳ್ಳಕೆರೆ : ವಾದ-ಪ್ರತಿವಾದಗಳು ಮುಗಿದಿದ್ದರೂ ಸಹಾ
ನ್ಯಾಯಾಲಯಗಳಲ್ಲಿ ಆದೇಶವನ್ನು ನೀಡದೆ ಪ್ರಕರಣಗಳು
ಬಾಕಿಯಿರುವುದರಿಂದ ತಮ್ಮ ಹಂತದಲ್ಲಿಯೇ ಪರಿಶೀಲಿಸಿ
ತುರ್ತಾಗಿ ತೀರ್ಪು ನೀಡಬೇಕೆಂದು ಜಿಲ್ಲಾಧಿಕಾರಿಯವರಲ್ಲಿ ಸ್ವಾಭಿಮಾನಿ ಸೇನೆಯವರು ವಿನಂತಿಸಿದರು.

ಜಿಲ್ಲೆಯ ಮೂಲ ವಾರಸುದಾರರು ಆದೇಶ ಪಡೆದುಕೊಂಡು
ಕೆಲವು ಪ್ರಕರಣಗಳು ಅಂತಿಮವಾಗಿದ್ದರೂ ಸ್ವಾಧೀನಕ್ಕೆ
ಕೆಲವು ಕ್ರಯದಾರರು ಅಡಚಣೆಯುಂಟು ಮಾಡುತ್ತಿದ್ದಾರೆ.
ಭೂಮಂಜೂರಾತಿಯ ವಿದ್ಯಮಾನಗಳನ್ನು ಸರಿಯಾಗಿ
ಅಥೈಸಿಕೊಳ್ಳದಿರುವುದೆ ಇದಕ್ಕೆ ಕಾರಣ.

ಎರಡು ತಿಂಗಳ
ಹಿಂದೆ ಚಳ್ಳಕೆರೆ ಟೌನ್ ಕಸಬಾ ಹೋಬಳಿಯಲ್ಲಿ
ಪಿ.ಟಿ.ಸಿ.ಎಲ್.ಕಾಯ್ದೆ ಉಲ್ಲಂಘಿಸಿ
ಉಪವಿಭಾಗಾಧಿಕಾರಿಗಳು ಕ್ರಯದಾರರ ಪರವಾಗಿ
ಆದೇಶಿಸಿದ್ದಾರೆ.ಪಿ.ಟಿ.ಸಿ.ಎಲ್.ಕಾಯ್ದೆ ಪ್ರಕಾರ ಮೂಲ
ಮಂಜೂರುದಾರರಿಗೆ ಕಾನೂನು ರೀತಿಯ ತೀರ್ಪು
ನೀಡಬೇಕು. ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಎಲ್ಲಾ
ಪಿ.ಟಿ.ಸಿ.ಎಲ್.ಕೇಸುಗಳನ್ನು ಸ್ವಯಂ ದಾಖಲಿಸಿ ಪರಿಶಿಷ್ಟ
ಜಾತಿ, ಪರಿಶಿಷ್ಟ ವರ್ಗದವರಿಗೆ ಕಾಯ್ದೆ ಬಗ್ಗೆ ಅರಿವು ಮೂಡಿಸಿ
ತ್ವರಿತವಾಗಿ ನ್ಯಾಯ ಒದಗಿಸುವಂತೆ ಪ್ರತಿಭಟನಾನಿರತರು
ಜಿಲ್ಲಾಧಿಕಾರಿಯವರನ್ನು ಕೋರಿದರು.

ಅಂಬೇಡ್ಕರ್ ಸ್ವಾಭಿಮಾನಿ ಸೇನೆ ರಾಜ್ಯಾಧ್ಯಕ್ಷ
ಡಾ.ಆರ್.ಕೋದಂಡರಾಮ್, ಜಿಲ್ಲಾಧ್ಯಕ್ಷ ರಾಮಚಂದ್ರ ಕೆ.
ಗೌರವಾಧ್ಯಕ್ಷ ಪಿ.ಎಂ.ತಿಪ್ಪೇಸ್ವಾಮಿ, ತಾಲ್ಲೂಕು ಅಧ್ಯಕ್ಷ
ಮೊಹಮದ್ ರಫಿ, ರಾಘವೇಂದ್ರ ಆರ್.
ವಿನೋದ್‌ಕುಮಾರ್, ಸಾಧಿಕ್ ಚನ್ನಗಿರಿ, ಕಣುಮೇಶ
ದಾದಾಪೀರ್ ಎಸ್.ದುರ್ಗೇಶ್, ಕುಮಾರ್, ರಘು,ಇತರ ಮುಖಂಡರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!