ಸಮಾಜದ ಒಳಿತಿಗಾಗಿ ಶ್ರಮಿಸುವುದೆ ನಮ್ಮ ಸಂಸ್ಥೆಯ ಮುಖ್ಯ ಧ್ಯೇಯ
ಚಿತ್ರದುರ್ಗ :
ಇಂದು ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಪರಿಶ್ರಮ ಪ್ರೇರಣಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯ ವತಿಯಿಂದ ನಡೆದ ಸಾಮಾನ್ಯ ಸಭೆ ನಡೆಯಿತು. ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ್ P.S ಹಾಗೂ ಎಲ್ಲಾ ಪದಾಧಿಕಾರಿಗಳು ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಪರಶುರಾಮ್ ಎಂ ಸಮಾಜ ನಮಗೇನು ಮಾಡಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವೇನು ಮಾಡಿದ್ದೇವೆ ಎಂದು ಯೋಚಿಸಿ ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಅದೇ ನಮ್ಮ ಸಂಸ್ಥೆಯ ಮುಖ್ಯ ಧ್ಯೇಯ, ಇತಿಹಾಸದಲ್ಲಿ ಹಸಿವಿನಿಂದ ಸಾಧನೆ ಮಾಡಿದವರಿಗೆ ಗಿಂತ ಅವಮಾನದಿಂದ ಸಾಧಿಸಿ ಬೆಳೆದವರು ಹೆಚ್ಚು, ಅವಮಾನ ಹೊಟ್ಟೆ ಹಸಿವಿಗಿಂತ ಘನಘೋರ ವಾದದ್ದು ಎಂದು ಎಲ್ಲಾ ನಿರ್ದೇಶಕರಿಗೆ ಹೇಳುತ್ತಾ, ಓದಿದಾ ಓದು .. ತಾ ವೇದ
ಕಬ್ಬಿನ ಸಿಪ್ಪೆ…
ಓದಿನ ಒಡಲನಯದಿರೆ ಸಿಪ್ಪೆ ಕಬ್ಬಾದಂತೆ ಎಂದು ಹೇಳಿ ಎದೆಗೆ ಬಿದ್ದ ಅಕ್ಷರ ಎಮ್ಮರವಾಗಿ ಬೆಳೆದು ನಾಲ್ಕು ಜನರಿಗೆ ನೆರಳು ಆಗಬೇಕು ಅದೇ ಸಾರ್ಥಕತೆ,
ಸಮಾಜದಲ್ಲಿ ಹುಟ್ಟಿದ ಮೇಲೆ ನಮ್ಮದೇ ಆದ ಗುರುತು ಇರುವಂತೆ ಬೆಳೆದು ಪ್ರಪಂಚಕ್ಕೆ ತೋರಿಸಬೇಕು ಆ ನಿಟ್ಟಿನಲ್ಲಿ ನಮ್ಮ ಆಲೋಚನೆ ಇರಬೇಕು ನಾವು ಬೆಳೆದು ಸಮಾಜಕ್ಕೂ ಅಗತ್ಯ ಸೇವೆ ಮಾಡುವುರಲ್ಲ್ಲಿ ಆತ್ಮ ಸಂತೃಪ್ತಿ ಅಡಗಿದೆ ಹಾಗಾಗಿ ಸಮಾಜ ಸೇವೆ ನಮ್ಮ ಮೊದಲ ಆದ್ಯತೆ ಆಗಿರಬೇಕು ಎಂದು ಹೇಳಿದರು.
ಸಭೆಯಲ್ಲಿ ನಿರ್ದೇಶಕರಾದ ಚಿದಂಬರಂ H.P, ವಿಜಯ ಕುಮಾರ್ H, ಲಕ್ಷ್ಮಣ್, ತಿಪ್ಪೇಸ್ವಾಮಿ ಆರ್ ಮತ್ತು ಯಶೋಧರ ಉಪಸ್ಥಿತರಿದ್ದರು.
ವಿಜಯ್ ಕುಮಾರ್ ಸ್ವಾಗತಿಸಿದರು ಶಿವಮೂರ್ತಿ ಟಿ ಕೋಡಿಹಳ್ಳಿ ಕಾರ್ಯಕ್ರಮ ನಿರೂಪಿಸಿದರು.