ಚಳ್ಳಕೆರೆ : ಸಂವಿಧಾನ ಜಾಗೃತಿಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು, ಇಂದು ನಾವು ನೀವೆಲ್ಲಾರು ಇರುವುದು ಸಂವಿಧಾನದ ಅಡಿಯಲ್ಲಿ ಎಂಬುದು ಮರೆಯಬಾರದು ಎಂದು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶಶಿರಾಜ್ ಹೇಳಿದರು.
ಅವರು ತಾಲೂಕಿನ ಕಸವಿಗೊಂಡನಹಳ್ಳಿ ಗ್ರಾಮಕ್ಕೆ ತಲುಪಿದ ಸಂವಿಧಾನ ಜಾಗೃತಿ ಸ್ತಬ್ದ ಚಿತ್ರ ರಥಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು, ಸಂವಿಧಾನವನ್ನು ರಕ್ಷಿಸುವುದು ಮತ್ತು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಇಂದು ಗ್ರಾಮಕ್ಕೆ ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆ ಆಗಮಿಸಿದೆ, ಅದರಂತೆ ಸರ್ವರಿಗೂ ಸಮಬಾಳು ಸಮಪಾಲು ಎಂಬ ತತ್ವದಡಿಯಲ್ಲಿ ಎಲ್ಲಾರು ಓಗ್ಗೂಡಬೇಕು ಎಂದರು.
ಇನ್ನೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಈರಪ್ಪ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಪುಷ್ಪ ಮಾಲೆ ಹಾಕಿ ಮಾತನಾಡಿ ಮಹಿಳೆಯರಿಗೆ ಸಂವಿಧಾನದ ಅಡಿಯಲ್ಲಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಾರ್ಥಿಕವಾಗಿ ಮಹಿಳೆಯರಿಗೆ ವಿಶೇಷ ಸ್ಥಾನಮಾನದ ಕಲ್ಪಿಸಿದ ಕೀರ್ತಿ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಸಲ್ಲಿಸುತ್ತದೆ. ನಮ್ಮ ಭಾರತ ದೇಶಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಅಪಾರ ಎಂದರು.
ಇದೇ ಸಂಧರ್ಭದಲ್ಲಿ ಗ್ರಾಪಂ.ಉಪಾಧ್ಯಕ್ಷ ಮಂಜು, ಮಹಾಂತೇಶ ಗುರುಸ್ವಾಮಿ, ಬಾಬು, ತಿಪ್ಪೇಶ್, ಶ್ರೀನಿವಾಸ್, ಆಂಜಿನೇಯ, ಓಬಳೇಶ್ ಹಾಗೂ ಹಟ್ಟಿಯ ಮುಖಂಡರು, ಕಸವಿಗೊಂಡನಹಳ್ಳಿ ಗ್ರಾಮಸ್ಥರು ಇತರ ಅಧಿಕಾರಿ ವರ್ಗದವರು ಪಾಲ್ಗೊಂಡಿದ್ದರು.