ಚಿತ್ರದುರ್ಗ : ಸತಿ ಪತಿ ಎಂಬ ಎರಡು ದೇಹವಿದ್ದರೂ ಮನಸ್ಸು ಮತ್ತು ಆಲೋಚನೆಗಳು ಒಂದೇ ಇರಬೇಕು. ಪರಸ್ಪರ ಪ್ರೀತಿ ಇದ್ದಾಗ ಬದುಕು ಸ್ವರ್ಗ ಆಗುತ್ತದೆ ಎಂದು ಶ್ರೀ ಬಸವಪ್ರಭು ಸ್ವಾಮಿಗಳು ನುಡಿದರು.ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ನಡೆದ 34ನೇ ವರ್ಷದ ಎರಡನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಗಳು, ಸತಿ ಪತಿಗಳು ಕೊನೆವರೆಗೂ ಹೊಂದಿಕೊAಡು ಹೋಗಬೇಕು. ಇನ್ನೊಬ್ಬರಿಗೆ ತೊಂದರೆ ಕೊಡದೆ ಇರುವುದೇ ನಿಜವಾದ ತಪಸ್ಸು. ಸಮಸ್ಯೆಗಳು ಸಾಂಸಾರಿಕರಿಗೆ ಬರುತ್ತವೆ. ಅವುಗಳನ್ನು ಮೆಟ್ಟಿ ನಿಲ್ಲುವ ಜಾಣ್ಮೆ ನಮ್ಮದಾಗಬೇಕು ಎಂದು ಹೇಳಿದರು.ಕಾರ್ಯಕ್ರಮದ ಸಮ್ಮುಖ ವಹಿಸಿದ್ದ ಗುಡ್ಡದಆನ್ವೇರಿ ವಿರಕ್ತಮಠದ ಶ್ರೀ ಶಿವಯೋಗೀಶ್ವರ ಸ್ವಾಮಿಗಳು ಮಾತನಾಡಿ, ಅನುಭವ ಮಂಟಪದ ಅನುಭವ ದೊಡ್ಡದು. ಅನೇಕ ಶಿವಶರಣರು ಅಲ್ಲಿ ಆಧ್ಯಾತ್ಮಿಕ ಅನುಭವ ಪಡೆದುಕೊಂಡರು. ವಚನ ರಚಿಸಿದರು. 12ನೇ ಶತಮಾನದೊಳಗೆ ಇವನಾರವ ಎಂದೆನಿಸದೆ ಇವ ನಮ್ಮವ ಎಂದವರು. ಶರಣರ ಮಾರ್ಗ ದಾಸೋಹ, ಕಾಯಕ ಮಾರ್ಗ. ನೇಗಿಲಯೋಗಿಯಾದ ಒಕ್ಕಲಿಗ ಮುದ್ದಣ್ಣನನ್ನು ಅನುಭವ ಮಂಟಪಕ್ಕೆ ಕರೆದು ಶಿವಶರಣರನ್ನಾಗಿಸಿದವರು ಶರಣರು. ಯಾವುದೇ ಕಾಯಕವನ್ನು ಶ್ರೇಷ್ಟವೆಂದು ಕರೆದರು. ಭೌತಿಕ ಸಂಪತ್ತಿಗಿAತ ಆಧ್ಯಾತ್ಮಿಕ ಸಂಪತ್ತು ಮುಖ್ಯ ಎಂದವರು ಶರಣರು ಎಂದು ತಿಳಿಸಿದರು.ಮುಖ್ಯ ಅತಿಥಿ ವಿನಯ್ ತಿಮ್ಮಾಪುರ ಮಾತನಾಡಿ, 12ನೇ ಶತಮಾನದಂತೆ ಶ್ರೀಮುರುಘಾಮಠ ಹಿಂದುಳಿದವರಿಗೆ ಆಶಾಕಿರಣವಾಗಿದೆ. ಈ ದೇಶದಲ್ಲಿ ಬುದ್ಧ ಬಸವ ಅಂಬೇಡ್ಕರ್ ಅವರ ತತ್ವಗಳು ನಮಗೆಲ್ಲ ಆದರ್ಶ. ಜಾತಿ ವಿಷಬೀಜ ಬಿತ್ತುವ ಇಂದಿನ ದಿನಮಾನಗಳಲ್ಲಿ ಶಾಂತಿ ನೆಲೆಸಲಿ. ನಮ್ಮ ನಾಡು ಶಾಂತಿಯ ಬೀಡು. ಸಾಮೂಹಿಕ ಕಲ್ಯಾಣದಂತಹ ಮಹತ್ಕಾರ್ಯಗಳು ನಿರಂತರವಾಗಿ ಎಲ್ಲೆಡೆ ನಡೆದರೆ ನಾವು ಒಂದು ಎನ್ನುವ ಭಾವನೆ ಬರುತ್ತದೆ. ನಮ್ಮದು ಉತ್ತಮ ಸಂಸ್ಕಾರವುಳ್ಳ ರಾಷ್ಟç. ಇಂತಹ ದೇಶದಲ್ಲಿ ಹುಟ್ಟಿರುವುದೇ ನಮ್ಮ ಪುಣ್ಯ. ನಾವು ಇನ್ನೊಬ್ಬರ ಶ್ರೇಯಸ್ಸನ್ನು ಬಯಸುತ್ತ ಬೆಳೆಯಬೇಕು, ಬೆಳೆಸಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ 7 ಜೋಡಿಗಳ ವಿವಾಹ ನೆರವೇರಿತು.ನಿಪ್ಪಾಣಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ಬಸವಕುಂಬಾರ ಗುಂಡಯ್ಯ ಸ್ವಾಮಿಗಳು, ಶ್ರೀ ತಿಪ್ಪೇರುದ್ರ ಸ್ವಾಮಿಗಳು, ಶ್ರೀ ಮುರುಘೇಂದ್ರ ಸ್ವಾಮಿಗಳು, ಶ್ರೀ ಬಸವನಾಗಿದೇವ ಸ್ವಾಮಿಗಳು ಭಾಗವಹಿಸಿದ್ದರು.ಜಮುರಾ ಕಲಾವಿದರು ಪ್ರಾರ್ಥಿಸಿದರು. ವೀರಭದ್ರಪ್ಪ ಸ್ವಾಗತಿಸಿದರು. ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.

About The Author

Namma Challakere Local News
error: Content is protected !!