ಚಳ್ಳಕೆರೆ : ಇಂದು ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಇಲಾಖೆಯ ಶಿಸ್ತು ಬದ್ದವಾದ ಬೈಕ್ ಜಾಗೃತಿ ಜಾಥ ನೋಡುಗರ ಗಮನ ಸೇಳೆಯಿತು.
ನಗರದ ವಾಲ್ಮೀಕಿ ವೃತ್ತ, ಅಂಬೇಡ್ಕರ್ ವೃತ್ತ, ನೆಹರು ವೃತ್ತ, ಬಸವೇಶ್ವರ ವೃತ್ತದ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಇಲಾಖೆ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ವಾಹನ ಸಾವರರಿಗೆ ಅರಿವು ಮೂಡಿಸುವ ಸಲುವಾಗಿ ಹಮ್ಮಿಕೊಂಡ ಜಾಗೃತಿ ಜಾಥಕ್ಕೆ ಡಿವೈಎಸ್ ಪಿ ಬಿಟಿ.ರಾಜಣ್ಣ ಚಾಲನೆ ನೀಡಿದರು.
ಜಾಗೃತಿ ಜಾಥವನ್ನು ಕುರಿತು ಮಾತನಾಡಿದ ಅವರು ವಾಹನ ಸವಾರರು ಕಡ್ಡಾಯವಾಗಿ ಹೆಲೈಟ್ ಹಾಗೂ
ಸೀಟ್ ಬೆಲ್ಟ್ ಧರಿಸಬೇಕೆಂದು, ನಿಮ್ಮ ತಂದೆ ತಾಯಿಗಳಿಗೆ ನೀವು ಕೊಡುವ ಗೌರವವಾಗಿದೆ, ನಿಮ್ಮ ಕುಟುಂಬ ನಿಮ್ಮ ಮೇಲೆ ಅವಲಂಬಿಸಿರುತ್ತದೆ ಇದನ್ನು ಅರಿತಾದರು ವಾಹನ ಓಡಿಸುವಾಗ ನಿಯಮಗಳನ್ನು ಪಾಲಿಸಬೇಕು ಎಂದರು.
ಇದೇ ಸಂಧರ್ಭದಲ್ಲಿ ಪಿ ಐ ದೇಸಾಯಿ ಮಾತನಾಡಿ
ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘನೆ ನಿಯಮ
ಪಾಲನೆ ಮಾಡದಿದ್ದರೆ ದಂಡದ ವಿಧಿಸಲಾಗುವುದು ಎಂದು ತಿಳಿಸಿದರು.
ವಾಹನ ಸವಾರರು ರಸ್ತೆ ನಿಯಮ ಕಡ್ಡಾಯವಾಗಿ ಪಾಲನೆ ಮಾಡಬೇಕು.
ನಿಮ್ಮ ಜೀವ ನೀವೇ ರಕ್ಷಣೆ ಮಾಡಿಕೊಳ್ಳಬೇಕು. ಇತ್ತೀಚೆಗೆ ಅಪಘಾತದಲ್ಲಿ
ಹೆಲೆಟ್ ಇಲ್ಲದೆಯೇ ಬೈಕ್ ಸವಾರರು ಸಾವು-ನೋವು ಸಂಭವಿಸುತ್ತಿರುವ
ಪ್ರಕರಣಗಳು ಹೆಚ್ಚಾಗುತ್ತಿವೆ ಕಾರು ಚಾಲನೆ ಮಾಡುವಾಗ ಸೀಟು ಬೆಲ್ಟ್
ಧರಿಸದೇ ವಾಹನ ಚಲಾಯಿಸಿದ್ದಕ್ಕೆ ಹಲವು ಅಪಘಾತಗಳು ನಡೆದಿವೆ.
ಈ ಬಗ್ಗೆ ಜಾಗೃತರಾಗಿ ಕಡ್ಡಾಯವಾಗಿ ಹೆಲೈಟ್ ಧರಿಸಬೇಕು ಎಂದು ಪಿಎಸ್ ಐ ಕೆ.ಸತೀಶ್ ನಾಯ್ಕ್
ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಬೈಕ್ ಜಾಥ ಕಾರ್ಯಕ್ರಮದಲ್ಲಿ ಪಿಎಸ್ ಐ ಗಳಾದ ಸತೀಶ್
ನಾಯ್ಕ, ಶಿವರಾಜ್, ಧರೆಪ್ಪ ಬಾಳಪ್ಪ ಹಾಗೂ ಪೋಲಿಸ್ ಇಲಾಖೆ ಸಿಬ್ಬಂದಿಗಳಿದ್ದರು.