ಚಿತ್ರದುರ್ಗ:
ಕೆಪಿಸಿಸಿ ಕಾರ್ಯಧ್ಯಕ್ಷ ಬಿ.ಎನ್ ಚಂದ್ರಪ್ಪರನ್ನು ರೈತರು ತರಾಟಗೆ ತೆಗೆದುಕೊಂಡಿದ್ದಾರೆ.
ಚಿತ್ರದುರ್ಗದಲ್ಲಿಂದು ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಕಾರ್ಯಾನುಷ್ಟಾನಕ್ಕೆ ಆಗ್ರಹಿಸಿ ಬಂದ್ ಗೆ ಕರೆ ನೀಡಿದ್ದು ರೈತರು ಹಾಗೂ ವಿವಿಧ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸುತ್ತಿದರು
ಪ್ರತಿಭಟನ ಸ್ಥಳಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಚಿತ್ರದುರ್ಗ ಮಾಜಿ ಸಂಸದ ಬಿ.ಎನ್ ಚಂದ್ರಪ್ಪ ಅವರು ಆಗಮಿಸಿ ಬಾಷಣ ಮಾಡಿತ್ತಿದ್ದು ಈ ವೇಳೆ ರೈತರು ಬಿ.ಎನ್ ಚಂದ್ರಪ್ಪ ಅವರನ್ನ ತರಾಟೆಗೆ ತೆಗೆದುಕೊಂಡ ಘಟನೆ ನಡಿದ್ದಾರೆ.
ನೀವು ಸಂಸದರಾಗಿದ್ದಾಗ ಯಾಕೆ? ಭದ್ರಾ ಮೇಲ್ದಂಡೆ ಯೋಜನೆಗೆ ಕಾಮಗಾರಿ ವೇಗ ಮಾಡಿಲ್ಲ. ಹಾಗೂ ಯೋಜನೆ ಬಗ್ಗೆ ಗಮನ ಹರಿಸದ ನೀವು ಈಗ ಚುನಾವಣೆ ಹತ್ತಿರ ಬಂದಿದ್ದರಿಂದ ಗಿಮಿಕ್ ಗಾಗಿ ಇಲ್ಲಿ ಬಂದಿದ್ದೀರಿ ಎಂದು ರೈತರು ಬಿ.ಎನ್ ಚಂದ್ರಪ್ಪ ಅವರಿಗೆ ಕೇಳಿದರು.
ನಿಮ್ಮ ರಾಜಕೀಯವನ್ನು ವಿಧಾನ ಸೌಧ, ಪಾರ್ಲಿಮೆಂಟ್ ನಲ್ಲಿ ಮಾತನಾಡಿ, ಇಲ್ಲಿ ಯಾಕೆ? ಬಂದಿದ್ದೀರಿ, ಹಿಂದೆ ಸಂಸದರಾಗಿದ್ದಾಗಲೂ ಇದೇ ರೀತಿ ಹೇಳಿ ರೈತರನ್ನು ಗಡೆಗಣಿಸಿದ್ದು ಎರಡು ಪಕ್ಷಗಳು ರೈತರಿಗೆ ಮೋಸ ಮಾಡುತ್ತಿದ್ದಾಗಿ ರೈತರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಈ ವೇಳೆಯಲ್ಲಿ ಮುಜುಗರಕ್ಕೆ ಒಳಗಾದ ಬಿ.ಎನ್ ಚಂದ್ರಪ್ಪ ಅವರು ನಗು ನಗುತ್ತಲೆ ಬಾಷಣ ಮುಕ್ತಾಯಗೊಳಿಸಿ ಸ್ಥಳದಿಂದ ತೆರಳಿದ್ದಾರೆ.