ಚಿತ್ರದುರ್ಗ : ಚಿತ್ರದುರ್ಗ ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್ ಜೆ ಅವರನ್ನು ವರ್ಗಾವಣೆಗೊಳಿಸಿ
ಸರ್ಕಾರ ಆದೇಶಿಸಿದ್ದು, ಇವರ ಸ್ಥಾನಕ್ಕೆ ಟಿ. ವೆಂಕಟೇಶ್ ಅವರನ್ನು
ಜಿಲ್ಲಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಿದೆ.
ಲೋಕಸಭಾ ಚುನಾವಣೆ
ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದ್ದು,
ಆದರೆ ಇದೀಗ ಸರ್ಕಾರ ಅಧಿಕೃತ
ಆದೇಶವನ್ನು ಹೊರಡಿಸಿದೆ. ಅವರಿಗೆ ಯಾವುದೇ ಸ್ಥಳನ್ನು ತೋರಿಸಿಲ್ಲ.
ಟಿ.ವೆಂಕಟೇಶ್ ಅವರು 2009 ರಲ್ಲಿ ಚಿತ್ರದುರ್ಗದ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿದರು.
ಇನ್ನೂ ಈ ಹಿಂದೆಯೂ ಒಂದು ಬಾರಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ವರ್ಗಾವಣೆ
ಆಗಿದೆ ಎಂಬ ವಿಚಾರ ಹಬ್ಬಿತ್ತು. ಆದರೆ ಅಧಿಕೃತ ಆದೇಶ ಹೊರ ಬಂದಿರಲಿಲ್ಲ ಈಗ ಸರಕಾರ ಅಧಿಕೃತ ಆದೇಶ ಹೊರಡಿಸಿ ವರ್ಗಾವಣೆ ಮಾಡಿದೆ.