ಚಳ್ಳಕೆರೆ : ತಾಲೂಕು ಛಾಯಾಚಿತ್ರ ಗ್ರಾಹಕರ ಸಂಘದ ವತಿಯಿಂದ ಫೋಟೋಗ್ರಫಿ ಚಿಂತನ ಮಂಥನ ಕಾರ್ಯಕ್ರಮವನ್ನು ನಗರದ ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳ ಸಮುದಾಯ ಭವನದಲ್ಲಿ ಇಂದು ಆಯೋಜಿಸಲಾಗಿತ್ತು.
ಇನ್ನೂ ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಕೆಟಿ.ಶ್ರೀನಿವಾಸ್ ಉದ್ಘಾಟಿಸಿ ಮಾತನಾಡಿದ ಅವರು ಪೋಟ್ರೋಗ್ರಾಪಿ ಎನ್ನುವ ನಮ್ಮ ವೃತ್ತಿ ಬದುಕಿನಲ್ಲಿ ಹಾಸುಹೊಕ್ಕಾಗಿದೆ, ಸರಕಾರದ ಯಾವುದೇ ಭದ್ರತೆ ಇಲ್ಲದೆ ನಿರಂತರವಾಗಿ ಸಮಾಜಿಕ ಜೀವನದಲ್ಲಿ ಸೇವೆ ಸಲ್ಲಿಸುವ ಪೋಟೋ ಗ್ರಾಪಿಗರ ಜೀವನ ಅತಂತ್ರವಾಗಿದೆ ಎಂದರು.
ತಾಲೂಕ ಸಂಘದ ಗೌರವಾಧ್ಯಕ್ಷರಾದ ಪಿ.ರವೀಂದ್ರನಾಥ್, ತಾಲೂಕು ಅಧ್ಯಕ್ಷ ನೇತಾಜಿ ಪ್ರಸನ್ನ, ಉಪಾಧ್ಯಕ್ಷ ತಿರುಮಲಕುಮಾರ್, ಕಾರ್ಯದರ್ಶಿ ಶಾಂತಲಾ ಚಂದ್ರಶೇಖರ್, ಸಹಕಾರಿದರ್ಶಿಗಳಾದ ರಘುಲ್ಯಾಮಿನೇಷನ್, ಸಂಘಟನಾ ಕಾರ್ಯದರ್ಶಿ ಅಜಯ್ ನಿರ್ದೇಶಕರಗಳಾದ ಆರ್.ಅಶೋಕ್ ಬಾನು, ಮೃತ್ಯುಂಜಯ ಶ್ರೀನಿವಾಸಲು, ತಿಪ್ಪೇಶ್, ಕೊಟ್ರೇಶ್, ಶಂಕರ್‌ಚೌಧರಿ, ಉಮೇಶ್ ವೆಂಕಟೇಶ್, ದೇವರಾಜ್, ಸರ್ವ ಸದಸ್ಯರು ಹಾಜರಿದ್ದರು.