ಚಳ್ಳಕೆರೆ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಚಳ್ಳಕೆರೆ ಶಾಖೆ ಇವರ ವತಿಯಿಂದ ನಗರದ ಸರ್ಕಾರಿ ನೌಕರರ ಭವನದಲ್ಲಿ ನಡೆದ ಸಂಘದ ಸಮುದಾಯ ಭವನ ಶಂಕುಸ್ಥಾಪನೆ ಹಾಗೂ 2024ರ ಕ್ಯಾಲೆಂಡರ್ ಬಿಡುಗಡೆ ಮತ್ತು ಸರ್ವ ಸದಸ್ಯರ ಸಭೆಯ ವ್ಯಕ್ತಿತ್ವ ವಿಕಸನ ಕಾರ್ಯಗಾರವನ್ನು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಉದ್ಘಾಟಿಸಿ ಮಾತನಾಡಿದರು.
ಸರಕಾರಿ ನೌಕರರ ಭವಣೆಗಳನ್ನು ನಾನು ಸಂಪೂರ್ಣವಾಗಿ ಹರಿತಿರುವೆನು, ಇಂದು ಮಹಿಳೆಯರು ನಮ್ಮ ಸರಕಾರದ ಉಚಿತ ಬಸ್‌ನಲ್ಲಿ ಬಂದಿದ್ದೀರಿ ಆದರೆ ಪುರುಷರು ಹಾಗಲ್ಲ ಅವರ ಸಮಸ್ಯೆಗಳು ನಿರಂತರ, ನಿಮ್ಮ ಸರಕಾರಿ ನೌಕರರ ಹೋರಾಟದ ಎನ್‌ಪಿಎಸ್ ನಿಂದ ಓಪಿಎಸ್ ಜಾರಿ ಈಗೇ ರಾಜ್ಯ ಮಟ್ಟದ ಸಮಸ್ಯೆಗಳ ಜೊತೆಗೆ ಸ್ಥಳೀಯವಾಗಿ ಸರಕಾರಿ ನೌಕರರ ಭವನದ ಕಟ್ಟದ ಶಂಕುಸ್ಥಾಪನೆಯನ್ನು ಇಂದು ಮಾಡಿದ್ದೆವೆ ಆದೇ ರೀತಿಯಲ್ಲಿ ನಿಮ್ಮೋಂದಿಗೆ ನಾನು ಸದಾ ಇರುತ್ತೆನೆ ಎಂದು ಹೇಳಿದರು.
ಇನ್ನೂ ಸರಕಾರಿ ನೌಕರರ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಇಂದು ಸುಮಾರು 55.ಲಕ್ಷ ವೆಚ್ಚದ ಸರಕಾರಿ ನೌಕರರ ಭವನದ ಶಂಕುಸ್ಥಾಪನೆ ನೆರೆವೆರಿಸಿರುವುದು ನಮ್ಮೆಲ್ಲರ ಹೆಮ್ಮೆ, ಚಳ್ಳಕೆರೆ ಕ್ಷೇತ್ರಕ್ಕೆ ಹ್ಯಾಟ್ರಿಕ್ ಹೀರೋ ಎಂದರೆ ಅದು ಶಾಸಕ ಟಿ.ರಘುಮೂರ್ತಿ ಎಂದರೆ ತಪ್ಪಗಲಾರದು, ಸರಕಾರಿ ನೌಕರರ ಬಗ್ಗೆ ಇವರಿಗೆ ಇರುವ ಕಾಳಜಿ ಹಾಗೂ ಅಪಾರವಾದ ಗೌರವ ಹತ್ತಿರದಿಂದ ಕಂಡಿದ್ದೆನೆ, ಆದ್ದರಿಂದ ನಮ್ಮ ಸರಕಾರಿ ನೌಕರರ ಬೇಡಿಕೆಗಳಾದ ರಾಜ್ಯ 7ನೇ ವೇತನ ಆಯೋಗದಿಂದ ಶೀಘ್ರ ಬರದಿ ಪಡೆದು ರಾಜ್ಯ ಸರಕಾರಿ ನೌಕರರ ವೇತನ ಭತ್ಯೆಗಳನ್ನು ಪೂರ್ಣ ಪ್ರಮಾಣದಲ್ಲಿ ಪರಿಷ್ಕರಿಸಿ ಆದೇಶ ಹೊರಡಿಸಬೇಕು, ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಬೇಕು, ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಟಾನಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ರಾಜ್ಯ ಖಜಾಂಚಿ ಸಿದ್ದರಾಮಣ್ಣ, ಜಿಲ್ಲಾ ಸಂಘದ ಗೌರವ ಅಧ್ಯಕ್ಷ ಲೋಕೇಶ್, ವೀರಶ್, ಮಂಜುನಾಥ್ ಭಾಗ್ಯಶ್ರೀ, ಈರಣ್ಣ, ಜಿಲ್ಲಾ ಅಧ್ಯಕ್ಷರಾದ ಕೆ.ಟಿ.ತಿಮ್ಮಾರೆಡ್ಡಿ, ತಾಲ್ಲೂಕು ಅಧ್ಯಕ್ಷರಾದ ಲಿಂಗೇಗೌಡ, ರವಿಶಂಕರರೆಡ್ಡಿ, ತಾಲ್ಲೂಕು ದಂಡಾಧಿಕಾರಿ ರೇಹಾನ್ ಪಾಷಾ, ಕಾರ್ಯನಿರ್ವಾಹಣಾಧಿಕಾರಿ ಶಶಿಧರ, ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್, ಪೌರಾಯುಕ್ತರಾದ ಚಂದ್ರಪ್ಪ, ಜಿಲ್ಲಾ ಗೌರವಾಧ್ಯಕ್ಷರಾದ ತಿಪ್ಪೇಸ್ವಾಮಿ, ಖಜಾಂಚಿ ಸುರೇಶ್ ಬಾಬು, ಬಸವರಾಜ್, ರಮೇಶ್, ತಿಪ್ಪೇಸ್ವಾಮಿ, ಭಿಮರಾಜ್, ಸಿ.ಟಿ.ವೀರೇಶ್, ದಯಾನಂದ, ವೆಂಕಟಲಕ್ಷ್ಮಿ, ತಿಪ್ಪೀರಮ್ಮ, ಮಂಜುಳಮ್ಮ, ಶ್ವೇತಾ, ನಾಗರಾಜ್, ಸುರೇಶ್, ಚಂದ್ರಣ್ಣ, ಶ್ರೀನಿವಾಸ್, ಅಪ್ರೂಜ್ ಪಾಷಾ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ಸರ್ಕಾರಿ ನೌಕರರ ಸಿಬ್ಬಂದಿ ವರ್ಗದವರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!