ಚಳ್ಳಕೆರೆ : ರಾಜ್ಯ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆಯನ್ನು ನಾಳೆ ಶಿವಮೊಗ್ಗದಲ್ಲಿ ಚಾಲನೆ ನೀಡುವ ಪ್ರಯುಕ್ತ ರಾಜ್ಯದ ವಿವಿಧ ಜಿಲ್ಲೆಗಳಿಂದ ತಾಲೂಕು ಕೇಂದ್ರಗಳಿAದ ನಿರುದ್ಯೋಗ ಫಲಾನುಭವಿಗಳು ಆಗಮಿಸುವ ಸಲುವಾಗಿ ಆಯೋಜಿಸಿದ್ದ ಚಳ್ಳಕೆರೆ ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವಿವಿಧ ಅಧಿಕಾರಿಗಳಿಗೆ ಹಾಗೂ ಉಪನ್ಯಾಸಕರಿಗೆ ಆಯೋಜಿಸಿದ್ದ ಯುವನಿಧಿ ಪೂರ್ವ ಭಾವಿ ಸಭೆಯಲ್ಲಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಭಾಗವಹಿಸಿ ಮಾತನಾಡಿದರು.
ಜ.12 ರಂದು ಯುವನಿಧಿಗೆ ಚಾಲನೆ ನೀಡಲು ಚಳ್ಳಕೆರೆ ತಾಲೂಕಿನಲ್ಲಿ ಸುಮಾರು 30 ಬಸ್‌ಗಳನ್ನು ಆಯೋಜಿಸಲಾಗಿದೆ, ಇನ್ನೂ ತಾಲೂಕಿನ ಯುವಕರನ್ನು ಕರೆದುಕೊಂಡು ಉಪನ್ಯಾಸಕರನ್ನು ಆಯೋಜಿಸಲಾಗಿದೆ, ಇನ್ನೂ ಒಟ್ಟಾರೆ ಚಿತ್ರದುರ್ಗ ಜಿಲ್ಲೆಯಲ್ಲಿ 110 ಸರಕಾರಿ ಬಸ್ ಗಳ ವ್ಯವಸ್ಥೆ ಮಾಡಿದ್ದು ಅದರಲ್ಲಿ ಚಳ್ಳಕೆರೆ ತಾಲೂಕಿಗೆ 30 ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು ಉಪನ್ಯಾಸಕರು ಹಾಗೂ ಅಧಿಕಾರಿಗಳು ಯುವಕರಿಗೆ ಯಾವುದೇ ತೊಂದರೆಯಾಗದAತೆ ಕರೆದುಕೊಂಡು ಹೋಗಿ ಕರೆ ತರಬೇಕು ಇದು ರಾಜಕೀಯ ಕಾರ್ಯಕ್ರಮವಲ್ಲ ಸರಕಾರಿ ಕಾರ್ಯಕ್ರಮವಾಗಿರುವುದರಿಂದ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯಕ್ರವನ್ನು ಯಶಸ್ವಿಗೊಳಸಲು ಮುಂದಾಗಬೇಕು ಎಂದರು.

ಇನ್ನೂ ಜಿಪಂ ಯೋಜನಾಧಿಕಾರಿ ಹಾಗೂ ಯುವನಿಧಿ ಜಿಲ್ಲಾ ನೋಡೆಲ್ ಅಧಿಕಾರಿ ಸತೀಶ್ ರೆಡ್ಡಿ ಮಾತನಾಡಿ, ಚಳ್ಳಕೆರೆ ತಾಲೂಕಿಗೆ 30 ಬಸ್ ಗಳ ವ್ಯವವಸ್ಥೆ ಮಾಡಿದ್ದು ಕಾರ್ಯಕ್ರಮದ ಸಮಯ ಸ್ಥಳ ಹಾಗೂ ಮಾರ್ಗ ಸೂಚಿಯನ್ನು ಸಾರಿಗೆ ಇಲಾಖೆ ಅಧಿಕಾರಿಗಳ ಗಮನಸೆಳೆದಿದ್ದು, ಮಹಿಳೆಯರಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಯುವಕರ ಬಸ್ ನಲ್ಲಿ ಕುಳಿತರ ತಕ್ಷಣ ಆಯಾ ಬಸ್ಸಿನಲ್ಲಿರುವ ಯುವಕರ ವಾಟ್ಸ್ ಆಪ್ ಗ್ರೂಪ್ ಮಾಡಿಕೊಂಡು ಕಾರ್ಯಕ್ರಮಕ್ಕೆ ಹೋಗುವಾಗ ಮುಗಿದ ನಂತರ ಅವರನ್ನು ಕರೆತರಲು ಕಾಲ ಕಾಲಕ್ಕೆ ಮಾಹಿತಿ ಸೂಚನೆಗಳನ್ನು ನೀಡಬೇಕು ಎಂದರು.

ದೇ ಸಂಧರ್ಭದಲ್ಲಿ ತಹಶೀಲ್ದಾರ್ ರೇಹಾನ್‌ಪಾಷ, ತಾಂಪA ಇಓ.ಶಶಿಧರ್, ಪಶು ಅಧಿಕಾರಿ ಡಾ.ರೇವಣ್ಣ, ಎಇಇ ಕಾವ್ಯ, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ವಿವಿಧ ಕಾಲೇಜುಗಳ ಉಪನ್ಯಾಸಕರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!