ಹೌದು
ಚಳ್ಳಕೆರೆ ತಾಲ್ಲೂಕಿನ ಕಸವಿಗೊಂಡನಹಳ್ಳಿ ಗ್ರಾಮದಲ್ಲಿ ಆಂಜನೇಯ ಇವರ ವಾಸದ ಮನೆಯ ಮುಂಬಾಗದ ಕಾಂಪೌಂಡ್‌ನಲ್ಲಿ ಬೆಳೆದ ಬದನೆಕಾಯಿ ಗಿಡಗಳ ಮದ್ಯದಲ್ಲಿ ಹೂ, ತೆನೆ, ಕಾಂಡ ಬೀಜಗಳಿಂದ ಕೂಡಿದ ಒಂದು ಹಸಿ ಗಾಂಜಾ ಗಿಡ ಬೆಳೆಸಿದ್ದು,

ಗಾಂಜಾ ದ ಗಿಡವನ್ನು ಬೇರು ಸಮೇತ ಕಿತ್ತು ತೂಕ ಯಂತ್ರದ ಸಹಾಯದಿಂದ ತೂಕ ಮಾಡಿ ನೋಡಲಾಗಿ 1.510 ಕೆ.ಜಿ ತೂಕವಿರುತ್ತದೆ ಎಂದು ಅಬಕಾರಿ ನಿರೀಕ್ಷಕರಾದ ನಾಗರಾಜ್ ಹೇಳಿದರು.

ಜಪ್ತಾದ ಗಾಂಜಾ ಮೌಲ್ಯ ಸುಮಾರು 30000 ರೂಪಾಯಿಗಳು ಆಗಿರುತ್ತದೆ.
ಇನ್ನೂ ಎನ್ .ಡಿ .ಪಿ. ಎಸ್. ಕಾಯ್ದೆ 1985 ರ ಕಲಂ 8(ಬಿ), 8(ಸಿ), ರೀತ್ಯಾ ಉಲ್ಲಂಘನೆಯಾಗಿದ್ದು ಇದೇ ಸಮ ಕಾಯ್ದೆ 20(b) (ii)(ಎ),25 ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುವುದರಿಂದ ಆಂಜನೇಯ 55 ವರ್ಷ ವೃತ್ತಿ-ವ್ಯವಸಾಯ, ಕಸವಿಗೊಂಡನಹಳ್ಳಿ ಗ್ರಾಮ, ತಳಕು ಹೋಬಳಿ, ಚಳ್ಳಕೆರೆ ತಾಲ್ಲೂಕು ಎಂಬ ಪರಾರಿಯಾದ ಆರೋಪಿತನ ವಿರುದ್ದ ಮೊಕದ್ದಮೆ
ದಾಖಲಿಸಲಾಗಿರುತ್ತದೆ.

ಚಿತ್ರದುರ್ಗ ಅಬಕಾರಿ ಉಪ ಆಯುಕ್ತರು, ರವರ ನಿರ್ದೇಶನ ಹಾಗೂ ಅಬಕಾರಿ ಉಪ ಅಧೀಕ್ಷಕರು, ಹಿರಿಯೂರು ರವರ ಮಾರ್ಗದರ್ಶನದಲ್ಲಿ, ಕಾರ್ಯಾಚರಣೆಯಲ್ಲಿ ನಾಗರಾಜು.ಸಿ.ಅಬಕಾರಿ ನಿರೀಕ್ಷಕರು,ಡಿ.ಟಿ ತಿಪ್ಪಯ್ಯ ಅಬಕಾರಿ ಉಪ ನಿರೀಕ್ಷಕರು-2, ಟಿ.ರಂಗಸ್ವಾಮಿ ಅಬಕಾರಿ ಉಪ ನಿರೀಕ್ಷಕರು-1 ಚಳ್ಳಕೆರೆ ವಲಯ ಮತ್ತು ಅಬಕಾರಿ ಮುಖ್ಯ ಪೇದೆ ಎಸ್.ರಘುನಾಥ ಮತ್ತು ಅಬಕಾರಿ ಪೇದೆಗಳಾದ ಎನ್.ನಾಗರಾಜ, ಟಿ.ಸೋಮಶೇಖರ,ಎನ್ ಶಾಂತಣ್ಣ ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!