ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ಲಾ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು,
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಚಳ್ಳಕೆರೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಸರ್ ಹಾಗೂ ಸರ್ಕಾರಿ ಪ್ರಾಥಮಿಕ ಶಾಲಾ ಸಂಘದ ಅಧ್ಯಕ್ಷ ಮಾರುತೇಶ್, ಊರಿನ ಮುಖಂಡರು ಎಸ್.ಪಾಲಯ್ಯ, ಬೋರಪ್ಪ ಹಾಗೂ ಎಲ್ಲ ಹಿರಿಯ ಗುರುಗಳು ಗಣ್ಯರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು,
ಈ ಶಾಲೆಯ ಭೂ ದಾನಿಗಳಾದ ಭಾರಿ ವೀರಮ್ಮ , ವಜ್ರಪ್ಪ ನವರ ಪುತ್ರರಾದ ಬಿ.ವಿ.ಶರಣಪ್ಪ ಈ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು,
ಜಿಲ್ಲಾ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾರುತೇಶ್ ಮಾತನಾಡಿ, ಡಾ.ಬಿ.ಆರ್ ಅಂಬೇಡ್ಕರ್ ರವರ ಆಶಯದಂತೆ ಯಾವುದೇ ಒಂದು ಸಮುದಾಯ ಸಮ ಸಮಾಜ ನಿರ್ಮಾಣ ಆಗಬೇಕಾದರೆ ಎಲ್ಲರಿಗೂ ಶಿಕ್ಷಣ ಎಂಬ ಆಯುಧ ಬಹಳ ಮುಖ್ಯ, ಇಂತಹ ಶಿಕ್ಷಣವನ್ನು ಪ್ರತಿಯೊಬ್ಬರ ಮಕ್ಕಳಿಗೆ ನೀಡುವಂತೆ ಪೋಷಕರು ಗಮನಹರಿಸಬೇಕು ಎಂದು ಹೇಳಿದರು,
ಪ್ರಾಸ್ತಾವಿಕ ನುಡಿಯನ್ನು ನುಡಿದ ಮುನಿಸ್ವಾಮಿ ರೆಡ್ಡಿ, ಗುರು ಎಂದರೆ ವ್ಯಕ್ತಿ ಅಲ್ಲ ಅದು ಒಂದು ಶಕ್ತಿ, ಗುರುತರವಾದ ದನ್ನು ರುಜುವಾತು ಪಡಿಸುವವನೆ ಗುರು ಎಂದು ಹೇಳಿದರು.
ಇನ್ನೂ ಶಾಲೆಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ನೀಡುವುದಾಗಿ ಹೇಳಿದರು.
ಎಲ್ಲ ಗುರುಗಳನ್ನು ಮತ್ತು ಗಣ್ಯರನ್ನು ಮೆರವಣಿಗೆಯ ಮೂಲಕ ಗ್ರಾಮದ ರಾಜ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು, ನಂತರ ಎಲ್ಲ ಗುರುಗಳನ್ನು ಸನ್ಮಾನಿಸಲಾಯಿತು, ನಂತರ ಸಂಜೆ ಶಾಲಾ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು ಎಲ್ಲ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ತುಂಬಾ ವಿಜೃಂಭಣೆಯಿಂದ ನಡೆಯಿತು,
ಈ ಕಾರ್ಯಕ್ರಮಕ್ಕೆ ಪ್ರೀತಿಯ ಗುರುಗಳು, ಸ್ನೇಹಿತರು,ಕಿರಿಯ ಮತ್ತು ಹಿರಿಯ ವಿದ್ಯಾರ್ಥಿಗಳು ಊರಿನ ಮುಖಂಡರು,ಯುವಕರು, ಎಲ್ಲ ಸಂಘಟನೆಗಳ ಪದಾಧಿಕಾರಿಗಳು, ನೆರೆ ಹೊರೆಯ ಗ್ರಾಮಸ್ಥರು ಎಲ್ಲರೂ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಯಿತು..
ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಸಂಯೋಜಕರು ಲಿಂಗರಾಜು,ಶ್ರೀಕಾಂತ್,ತಿಪ್ಪೇಸ್ವಾಮಿ.ವಿ.ಟಿ ವಿಜಯ್ ಕುಮಾರ್.ಡಿ, ವಿನಯ್ ಕುಮಾರ್ ಬಿ.ಎಂ, ನಾಗರಾಜ್,ತಿಪ್ಪೇಸ್ವಾಮಿ.ಯು, ತಿಪ್ಪೇಸ್ವಾಮಿ.ಎಂ,ಬಸವರಾಜು,ನಾಗರಾಜು, ಬಸವರೆಡ್ಡಿ,ಪ್ರಸಾದ್,ಶಿವಾರೆಡ್ಡಿ ಹಾಗೂ ಶಾಲೆಯ ಮುಖ್ಯ ಶಿಕ್ಷಕರು ಜಗನ್ನಾಥ ಕೆ.ಏಚ್,ಬಸವರಾಜ್.ಜಿ.ಟಿ, ರತ್ನಮ್ಮ.ಎಲ್,ಸುಶೀಲಮ್ಮ.ಎಸ್, ಆಶಾ.ಆರ್, ಸುಪ್ರಿಯಾ.ಜೆ ಬಸವರಾಜು, ಶಿವಮೂರ್ತಿ.ಟಿ ಉಪಸ್ಥಿತರಿದ್ದರು.