ಚಳ್ಳಕೆರೆ: ಇತ್ತಿಚೀನ ದಿನಗಳಲ್ಲಿ ಓದುವ ವಯಸ್ಸಿನಲ್ಲಿ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ರಾಜ್ಯದಲ್ಲಿ ಹಾಗಿದ್ದಾಂಗ್ಲೆ ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಇದಕ್ಕೆ ನಿಖರವಾದ ಕಾರಣ ಮಾತ್ರ ಗೊತ್ತಾಗುವುದಿಲ್ಲ. ಅಂತಹದೊAದು ಘಟನೆ ಚಳ್ಳಕೆರೆ ನಗರದಲ್ಲಿ ವರದಿಯಾಗಿದೆ ವಿದ್ಯಾರ್ಥಿಯೋರ್ವ ಮನೆಯಲ್ಲಿ ಆತ್ಮಹತ್ಯೆಗೆ ಶರಗಾಗಿರುವ ಘಟನೆ ನಡೆದಿದೆ.
ಚಳ್ಳಕೆರೆ ನಗರದ ವಾಸವಿ ಕಾಲೋನಿಯ ವೆಂಕಟೇಶ ಎಂಬುವರ ಪುತ್ರ ಮುಕುಂದ(15) ಖಾಸಗಿ ವಿದ್ಯಾಸಂಸ್ಥೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.
ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ವಿದ್ಯಾರ್ಥಿ ವ್ಯಾಸಂಗದಲ್ಲಿ ಶಾಲೆಗೆ ಪ್ರಥಮ ಹಾಗೂ ಚೆಸ್ ಆಟದಲ್ಲಿ ರಾಜ್ಯ ಮಟ್ಟದ ಕ್ರೀಡಾಪಟು ಎನ್ನಲಾಗಿದೆ .
ಮೃತನ ಕುಟುಂಬಸ್ಥರು ಚಳ್ಳಕೆರೆ ಠಾಣೆಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಮೃತನ ಕುಟುಂಬಸ್ಥರ ರೋದನ ಮುಗಿಲು ಮುಟ್ಟುವಂತಿತ್ತು.