ಚಳ್ಳಕೆರೆ: ತಾಲೂಕಿನ ಸಿದ್ದಾಪುರ ಗೇಟ್ ನಿಂದ ಬುಡ್ನಹಟ್ಟಿ ಗ್ರಾಮದವರೆಗೆ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆ ಮತ್ತು ಗೋಪನಹಳ್ಳಿ ಗೇಟ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾಧಿಕಾರ ರಸ್ತೆ ಬದಿಯಲ್ಲಿ ನಾಮ ಫಲಕಗಳನ್ನು ಅಳವಡಿಸಿದ್ದು, ಬೋರ್ಡಿನಲ್ಲಿ ಸೂಚನಾ ಫಲಕಗಳು ವಿರುದ್ಧ ದಿಕ್ಕಿನಲ್ಲಿ ಹಾಕಿದ್ದು ಸಾರ್ವಜನಿಕರಿಗೆ ವಾಹನ ಸವಾರರಿಗೆ ನಿತ್ಯ ಕಿರಿಕಿರಿ ಉಂಟಾಗಿದೆ.

ರಸ್ತೆ ಬದಿಯಲ್ಲಿ ವಾಹನ ಸವಾರರಿಗೆ ಅನುಕೂಲಕ್ಕೆ ಎಂದು ನಾಮಫಲಕಗಳನ್ನು ಅಳವಡಿಸಿದ್ದು, ರಸ್ತೆ ಪ್ರಾಧಿಕಾರ ಎಡವಟ್ಟಿನಿಂದ ಬಳ್ಳಾರಿ ರಸ್ತೆಯನ್ನು ಹಿರಿಯೂರಿಗೆ , ಹಿರಿಯೂರು ರಸ್ತೆಯನ್ನು ಬಳ್ಳಾರಿಗೆ ಸೂಚನಾ ನಾಮಫಲಕವನ್ನು ವಿರುದ್ಧ ದಿಕ್ಕಿನಲ್ಲಿ ಅಳವಡಿಸಿದ್ದು ಹೂರ ಊರುಗಳಿಂದ ಬರುವ ಟ್ರಕ್ ಚಾಲಕರಿಗೆ ಕಾರುಗಳಿಗೆ ಹಾಗೂ ಇನ್ನಿತರ ವಾಹನಗಳಿಗೆ ದಿನನಿತ್ಯ ತೊಂದರೆ ಉಂಟಾಗಿದೆ ಎಂದು ಮಲ್ಲಿಕಾರ್ಜುನ್ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೋಪನಹಳ್ಳಿ ಗೇಟ್ ನಲ್ಲಿ ನಾಮಫಲಕದ ಬೋರ್ಡ್ ಅಳವಡಿಸಿದ್ದು, ಚಳ್ಳಕೆರೆಗೆ ಹೋಗುವ ದಾರಿಗೆ ಹಿರಿಯೂರಿನ ಸೂಚನೆ, ಹಿರಿಯೂರಿಗೆ ಹೋಗುವ ದಾರಿಗೆ ಚಳ್ಳಕೆರೆ ಸೂಚನೆಗಳನ್ನು ತೋರಿಸಿದ್ದು, ವಾಹನಸವರರಿಗೆ ತೊಂದರೆ ಉಂಟಾಗುತ್ತಿದೆ. ಇದರಿಂದ ಸಂಬಂಧಪಟ್ಟ ಲೋಕಪಯೋಗಿ ಇಲಾಖೆ ಅಧಿಕಾರಿಗಳು, ಎಚ್ಚೆತ್ತುಕೊಂಡು ನಾಮಫಲಕದ ಬೋರ್ಡ್ ಗಳನ್ನು ತೆಗೆಸಿ ಸರಿಯಾದ ರೀತಿಯಲ್ಲಿನ ನಾಮಫಲಕಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕೆಆರ್‌ಎಸ್ ಪಕ್ಷದ ಎಸ್ ಮಣಿಕಂಠ ಎಚ್ಚರಿಸಿದ್ದಾರೆ.

Namma Challakere Local News
error: Content is protected !!