ಚಳ್ಳಕೆರೆ : ಸ್ವತಂತ್ರ ಪೂರ್ವದಲ್ಲಿ ಬಾಯಿಯವರು ಹಲವಾರು ಕಷ್ಠ ಮತ್ತು ಅಪಾಮಾನಗಳನ್ನು ಸಹಿಸಿಕೊಂಡು ಉತ್ತಮ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ತನ್ನ ಪತಿ ಜ್ಯೋತಿ ಬಾ ಪುಲೆ ರವರ ಸಹಕಾರದೊಂದಿಗೆ 18 ಪಾಠಶಾಲೆಗಳನ್ನು ತೆರೆದು ಶಿಕ್ಷಣ ಕ್ರಾಂತಿಯನ್ನುAಟು ಮಾಡಿದರು ಎಂದು ಕಾಲೇಜಿನ ಪ್ರಾಚಾರ್ಯರಾದ ಎಂ.ರವೀಶ್, ಹೇಳಿದರು.
ಅವರು ತಾಲೂಕಿನ ಸೊಮಗುದ್ದು ರಸ್ತೆಯಲ್ಲಿರುವ ಸರಕಾರಿ ಪದವಿ ಪೂರ್ವಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಸಾವಿತ್ರಿ ಬಾಯಿ ಪುಲೆಯವರ 193 ನೇ ಜನ್ಮ ದಿನಾಚರಣೆಯನ್ನು ಅಂಗವಾಗಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು, ಸಾವಿತ್ರಿಬಾಯಿ ಪುಲೆರವರು ಸಮಾಜದಲ್ಲಿನ ಅನಿಷ್ಠ ಪದ್ಧತಿಗಳಾದ ಬಾಲ್ಯವಿವಾಹ, ಸತಿ ಸಹಗಮ ಪದ್ಧತಿ, ಕೇಶಮುಂಡನೆ ವಿರುದ್ಧ ಹೋರಾಟ ಮಾಡಿ ಸ್ತಿçÃಯರ ರಕ್ಷಣೆಗೆ ಶ್ರಮಿಸಿದ್ದಾರೆ ಎಂದರು.
ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಶಾಂತಕುಮಾರಿ ಮಾತನಾಡಿ, ಬಾಯಿರವರ ಸೇವೆಯನ್ನು ಗುರುತಿಸಿ ಬ್ರಿಟಿಷ್ ಸರ್ಕಾರ “ಭಾರತ ಮೊದಲ ಮಹಿಳಾ ಶಿಕ್ಷಕಿ” ಎಂಬ ಬಿರುದನ್ನು ನೀಡಿ ಗೌರವಿಸಿದರು. ಆದ್ದರಿಂದ ವಿದ್ಯಾರ್ಥಿಗಳು ಅವರ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಪರಿವರ್ತನೆಗೆ ಶ್ರಮಿಸಬೇಕೆಂದು ಕಿವಿಮಾತು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ರವೀಶ್, ಪುಷ್ಪಲತ ಜಿಟಿ, ಹಬೀವುಲ್ಲಾ, ನಾಗರಾಜ್‌ಬೆಳಗಟ್ಟ, ರೇಖ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಶಾಂತಕುಮಾರಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Namma Challakere Local News
error: Content is protected !!