ಚಳ್ಳಕೆರೆ : ಮಕ್ಕಳ ಜೀವನದಲ್ಲಿ ಆದ್ಯಾತ್ಮ ಎನ್ನುವುದು ಪ್ರಮುಖ ಪಾತ್ರವಹಿಸುತ್ತದೆ, ಮನುಷ್ಯನ ಜೀವನದಲ್ಲಿ ಭಗವದ್ಗೀತಾ ಗೀತೆಯನ್ನು ಓದುವ ಅನಿವಾರ್ಯತೆ ಇದೆ ಎಂದು ಶ್ರೀ ನರಹರಿ ಗುರುಪೀಠದ ಶ್ರೀ ರಾಜಾರಾಮ್ ಮಹಾ ಸ್ವಾಮಿಗಳು ಹೇಳಿದರು.
ಅವರು ನಗರದ ನರಹರಿನಗರದ ಶ್ರೀ ನರಹರಿ ಸೇವಾ ಆಶ್ರಮದಲ್ಲಿ ಗೀತಾ ಜಯಂತಿ ಅಂಗವಾಗಿ ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ವಾರಿಯಾರ್ಸ್ ಆಂಗ್ಲ ಮಾಧ್ಯಮ ಶಾಲಾವತಿಯಿಂದ ಆಯೋಜಿಸಿದ್ದ ಭಗವದ್ಗೀತಾ ಗೀತೆ ಕಂಠಪಾಠ ಸ್ಪರ್ಧಾ ಕಾರ್ಯವನ್ನು ಉದ್ಘಾಟಿಸಿ ಆರ್ಶಿವಚಿಸಿದ ಮಹಾಸ್ವಾಮಿಗಳು, ಇಂದಿನ ಮನುಷ್ಯನ ಜನ್ಮ ಸನಾತನದ ಧರ್ಮದ ಮೂಲಕ ಹಾಸುಹೊಕ್ಕಾಗಿದೆ, ಇಂದಿನ ಮಕ್ಕಳಿಗೆ ಧಾರ್ಮಿಕ ಚಿಂತನೆಗಳನ್ನು ಹಾಗೂ ಭಗವದ್ಗೀತಾ, ಮಹಾಭಾರತದ, ಹಾಗೂ ರಾಮಾಯಣದಂತಹ ಸನ್ನಿವೇಶಗಳನ್ನು ತಿಳಿಸುವ ಮೂಲಕ ಶಾಲಾ ಹಂತದಿಂದ ಮಕ್ಕಳಿಗೆ ದೇಶದ ಸತ್ ಪ್ರಜೆಗಳನ್ನಾಗಿ ಮಾಡಲು ಪ್ರತಿಯೊಬ್ಬ ಪೋಷಕರು ಪಣತೊಡಬೇಕು ಎಂದರು.
ಈ ಸ್ಪರ್ಧೆಯಲ್ಲಿ ಸುಮಾರು ಹತ್ತು ಶಾಲೆಯ ಸುಮಾರು75 ಜನ ಮಕ್ಕಳು , ಭಾಗವಹಿಸಿದ್ದರು.
ಇದೇ ಸಂಧರ್ಭದಲ್ಲಿ ವಾರಿಯಾರ್ಸ್ ಆಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷೆ ಉಪಾ ಲೋಕನಾಥ್, ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಹೆಚ್.ಎಸ್.ರಾಜೇಶ್ ಗುಪ್ತ, ಕಾರ್ಯದರ್ಶಿ ದಯಾನಂದ ಪ್ರಹ್ಲಾದ್, ಡಾ.ನಾಗಭೂಷಣ್ ಶೆಟ್ಟಿ, ಕೆ.ವಿ.ಪ್ರಸಾದ್, ಇತರ ಶಿಕ್ಷಕರು, ಮಕ್ಕಳು ಪಾಲ್ಗೊಂಡಿದ್ದರು.