ಚಳ್ಳಕೆರೆ : ಬಹುದಿನಗಳ ಬೇಡಿಕೆಯಾದ ಕಾಡು ಗೊಲ್ಲರ ಜಾತಿ ಪ್ರಮಾಣ ಪತ್ರ ಇಂದು ಕೈ ಸೇರಿದೆ.
ಹೌದು ಚಳ್ಳಕೆರೆ ನಗರದ ತಾಲೂಕು ಕಛೇರಿಯಲ್ಲಿ ಇಂದು ನೂರಾರು ಸಮುದಾಯದ ಫಲಾನುಭಿವಗಳು ಇಂದು ಸಾಕ್ಷಿಯಾಗಿದ್ದರು.
ಕಳೆದ ಹಲವು ವರ್ಷಗಳಿಂದ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ Pಕೋರಿ ಹಲವು ಪ್ರತಿಭಟನೆಗಳು, ಧರಣೆಗಳು, ಹೋರಾಟಗಳು ನಡೆಸಿದರ ಫಲ ಇಂದು ನಮಗೆ ಜಾತಿ ಪ್ರಮಾಣ ಪತ್ರ ದೊರಕಿದೆ ಎಂದು ಕಾಡು ಗೊಲ್ಲ ಸಮುದಾಯದ ಮುಖಂಡರು ಮುಗಲ್ನಗೆ ಬೀರಿದರು.
ಇನ್ನೂ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡಲು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಗೋಪಾಲಕೃಷ್ಣ ಹಾಗೂ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಇಂದು ತಮ್ಮ ಹಸ್ತದಿಂದ ಫಲಾನುಭವಿಗಳಿಗೆ ಜಾತಿ ಪ್ರಮಾಣ ಪತ್ರ ನೀಡಿ ಸಂತಸ ವ್ಯಕ್ತಪಡಿಸಿದರು.
ಕಾಡುಗೊಲ್ಲ ಸಮುದಾಯದ ತಾಲೂಕು ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ ಮಾತನಾಡಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಶೈಕ್ಷಣಿಕ ಅಭಿವೃದ್ದಿಗೆ ಈಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ಅವಶ್ಯ ಇಂತಹ ಪ್ರಮಾಣ ಪತ್ರ ನೀಡಲು ಕಳೆದ ಹಲವು ವರ್ಷಗಳಿಂದ ರಾಜ್ಯಾಧ್ಯಾಂತ ಹೋರಾಟದ ನಂತರ ಇಂದು ಪ್ರಮಾಣ ಪತ್ರ ಸಿಕ್ಕಿದೆ ಎಂದರು.
ಇನ್ನೂ
ಈಡೀ ರಾಜ್ಯದಲ್ಲಿ ಕಾಡುಗೊಲ್ಲರ ಬಗ್ಗೆ ವಿಶೇಷವಾದ ಕಾಳಜಿಹೊಂದಿದ ಶಾಸಕರು ನಮ್ಮ ಕ್ಷೇತ್ರದಲ್ಲಿ ಇರುವುದು ಪುಣ್ಯ ಶಾಸಕ ಟಿ.ರಘುಮೂರ್ತಿ ಹಾಗೂ ಶಾಸಕ ಎನ್.ವೈ.ಗೋಪಾಲ ಕೃಷ್ಣ ರವ ಇತಸಕ್ತಿಯಂತೆ ಇಂದು ಕಾಡುಗೊಲ್ಲ ಜನಾಂಗಕ್ಕೆ ನ್ಯಾಯ ಸಮ್ಮತವಾದ ಜಾತಿ ಪ್ರಮಾಣ ಪತ್ರ ದೊರಕಿದೆ ಎಂದರು.
ಅದರAತೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ, ನಾವು ಕೂಡ ಕಾಡುಗೊಲ್ಲ ಹಟ್ಟಿಗಳಲ್ಲಿ ಹಾಡಿ ಬೆಳೆದು ಬಂದಿದ್ದೆವೆ ಅವರ ನೋವು ನಲಿವು ಸುಖ ದುಖಃಗಳನ್ನು ಹಂಚಿಕೊAಡಿದ್ದೆವೆ ಇಂದು ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ಸರಕಾದಿಂದ ನೀಡಿರುವುದು ಸಂತಸ ತಂದಿದೆ ಮುಂದಿನ ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಸಬಲರಾಗಿ ಎಂದು ಕಿವಿಮಾತು ಹೇಳಿದರು.
ಇನ್ನೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಕಾಡುಗೊಲ್ಲರು ತಾಲೂಕಿನಲ್ಲಿ ಸುಮಾರು 139 ಹಟ್ಟಿಗಳನ್ನು ಗುರುತಿಸಲಾಗಿತ್ತು ನಿಮ್ಮ ಶೈಕ್ಷಣಿಕ ಅಭಿವೃದ್ದಿಗೆ ತಕ್ಕಂತೆ ಜಾತಿ ಪ್ರಮಾಣ ಪತ್ರ ಸದ್ಬಳಕೆ ಮಾಡಿಕೊಂಡು ಸಬಲರಾಗಿ, ಇನ್ನೂ ಅಲೆಮಾರಿ ಹಾಗೂ ಅರೆಅಲೆಮಾರಿ ಜಾನಂಗದ ನಿಗಮ ಮಂಡಳಿಯಲ್ಲಿ ಸಮುದಾಯಕ್ಕೆ ನೆರವು ಹಾಗುವ ನಿಟ್ಟಿನಲ್ಲಿ ಸಂಬAದಪಟ್ಟ ಸಚಿವರಲ್ಲಿ ಮನವಿ ಮಾಡುತ್ತೆವೆ, ನಮ್ಮ ಸರಕಾರ ಕಾಡುಗೊಲ್ಲ ಅಭಿವೃದ್ದಿ ನಿಗಮ ಮಂಡಳಿ ಸ್ಥಾಪನೆಗೆ ಅನುಮೋದನೆ ನೀಡಿ ಕಾಡುಗೊಲ್ಲರ ಹಿತರಕ್ಷಣೆ ಕಾಯುತ್ತಿದೆ ಎಂದರು.
ಈದೇ ಸಂಧರ್ಭದಲ್ಲಿ ತಹಶೀಲ್ದಾರ್ ರೇಹಾನ ಪಾಷ, ಶಿರಸ್ತೆದಾರ್ ಸದಾಶಿವಪ್ಪ, ಗೀರೀಶ್, ಜಿಪಂ ಮಾಜಿ ಅಧ್ಯಕ್ಷ ರವಿಕುಮಾರ್, ಕಾಡುಗೊಲ್ಲ ತಾಲೂಕು ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ, ಬಾಲರಾಜ್, ಸಿರಿಯಪ್ಪ , ಮಂಜುನಾಥ್, ಮುಡಲಗಿರಿಯಪ್ಪ, ಮಂಜುನಾಥ್, ಕರಿಯಣ್ಣ ಯಲಗಟ್ಟೆ, ವೀರೇಶ್‌ಚಂದ್ರ, ಕರಿಯಣ್ಣ, ವಿರೇಣ್ಣ, ಅಜ್ಜಪ್ಪ, ಇತರರು ಇದ್ದರು.