ಲೋಕಸಭಾ ಚುನಾವಣೆಗೆ ಸಜ್ಜು ..!
ಮತದಾನದ ಪ್ರತ್ಯಕ್ಷತೆಯ ಮೂಲಕ ಮತದಾನದ ಜಾಗೃತಿ : ತಹಶೀಲ್ದಾರ್ ರೇಹಾನ್ ಪಾಷ
ಚಳ್ಳಕೆರೆ : ಮುಂಬರುವ ಲೋಕಸಭಾ ಚುನಾವಣೆಯ ತಯಾರಿಯಲ್ಲಿರುವ ಚುನಾವಣೆ ಆಯೋಗ ಈಗಾಗಲೇ ಕ್ಷೇತ್ರದ ಮತದಾರರ ಮಾಹಿತಿ, ತಿದ್ದುಪಡಿ ಈಗೇ ಹಲವು ಕಾರ್ಯಗಳಲ್ಲಿ ಸಕ್ರಿಯವಾಗಿರುವ ಆಯೋಗ, ಮತದಾನದ ಯಂತ್ರದ ಮೂಲಕ ಮತದಾರರಿಗೆ ಪ್ರತ್ಯಿಕ್ಷತೆ ನೀಡುವ ಮೂಲಕ ಮತದಾರರಿಗೆ ಮತದಾನ ಜಾಗೃತಿ ಮೂಡಿಸುತ್ತಿದೆ.
ಅದರಂತೆ ಚಳ್ಳಕೆರೆ ತಾಲ್ಲೂಕು ಕಛೇರಿಯಲ್ಲಿ ಚುನಾವಣೆ ಶಾಖೆಯ ಸಿಬ್ಬಂದಿ ತಾಲ್ಲೂಕು ಕಛೇರಿಗೆ ದಿನ ನಿತ್ಯವೂ ಆಗಮಿಸುವ ಸಾರ್ವಜನಿಕರಿಗೆ ಮತದಾನದ ಜಾಗೃತಿ ಮೂಡಿಸುವ ಮೂಲಕ ಪ್ರತೀಕ್ಷತೆ ಹಾಗೂ ವಿದ್ಯುನ್ಮಾನ ಮತಯಂತ್ರಗಳ ತರಬೇತಿ ಹಾಗೂ ಜಾಗೃತಿ ಮೂಡಿಸುವ ಮೂಲಕ ಚುನಾವಣೆಗೆ ಸಜ್ಜುಗೊಳಿಸಲು ಮುಂದಾಗಿದೆ.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ ಹಾಗೂ ಚುನಾವಣಾ ಶಾಖಾ ಸಿಬ್ಬಂದಿ ಎಂ.ದುರುಗಮ್ಮ ಇತರರು ಮತದಾನದ ಪ್ರತ್ಯಕ್ಷತೆಯನ್ನು ಸಾರ್ವಜನಿಕರಿಗೆ ತೋರಿಸುವ ಮೂಲಕ ಜಾಗೃತಿ ಮೂಡಿಸಿದರು.