ನಾಯಕನಹಟ್ಟಿ:: ಬರದನಾಡಿಲ್ಲಿ ವಿದ್ಯಾ ವಿಕಾಸ ಎಜುಕೇಶನ್ ಸೊಸೈಟಿ ಕಳೆದ 25 ವರ್ಷಗಳಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತದೆ ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದ್ದಾರೆ .
ಸೋಮವಾರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳಮಠ ಸಮುದಾಯ ಭವನ ಆವರಣದಲ್ಲಿ ವಿದ್ಯಾ ವಿಕಾಸ ಎಜುಕೇಶನ್ ಸೊಸೈಟಿ ವತಿಯಿಂದ ವಿದ್ಯಾ ವಿಕಾಸ ಸಂಸ್ಥೆಯ ರಜತ ಸಂಭ್ರಮ 1998-2023 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು ಬರದ ನಾಡಿನಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ಕಳೆದ 25 ವರ್ಷಗಳಿಂದ ವಿದ್ಯಾ ವಿಕಾಸ ಎಜುಕೇಶನ್ ಸೊಸೈಟಿ ಉತ್ತಮ ಶಿಕ್ಷಣವನ್ನು ನೀಡುತ್ತದೆ ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವಲ್ಲಿ ಮುಂಚೂಣಿಯಲ್ಲಿರಬೇಕು ಮನೆಯಲ್ಲಿ ಮಕ್ಕಳಿಗೆ ಯಾವುದೇ ರೀತಿ ಒತ್ತಡವನ್ನು ನೀಡದೆ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮತ್ತು ಪೋಷಕರ ಪಾತ್ರ ಮಹತ್ವವಾದದ್ದು ಒಂದು ಶಾಲೆ ಅಕ್ಷರ ಕಲಿಯುವ ಕೇಂದ್ರವಾಗಬಾರದು ಅದು ಸಂಸ್ಕಾರ ಕಲಿಯುವ ಶಾಲೆಯಾಗಬೇಕು ಅಕ್ಷರ ಮತ್ತು ಸಂಸ್ಕಾರ ಕಲಿತಾಗ ಮಾತ್ರ ವಿದ್ಯಾರ್ಥಿ ಜೀವನ ಪಾವನವಾಗುತ್ತದೆ.ಎಂದರು,
ಇನ್ನೂ ಕಾರ್ಯಕ್ರಮದಲ್ಲಿ ವಕೀಲ ಕೆ ಎನ್ ವಿಶ್ವನಾಥಯ್ಯ, ಡಾ. ಸುಬ್ಬರೆಡ್ಡಿ ಐಐಎಸ್ ಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ .ಎಂ. ಶಿವಸ್ವಾಮಿ, ಪಟ್ಟಣ ಪಂಚಾಯತಿ ಸದಸ್ಯರಾದ ಸೈಯದ್ ಅನ್ವರ್, ಅಬಕಾರಿ ತಿಪ್ಪೇಸ್ವಾಮಿ, ಶ್ರೀಮತಿ ಟಿ. ಮಂಜುಳಾ ಶ್ರೀಕಾಂತ್, ಶ್ರೀಮತಿ ಸರ್ವ ಮಂಗಳ, ಶ್ರೀಮತಿ ಓ. ಮಹೇಶ್ವರಿ , ವಕೀಲ ಉಮಾಪತಿ, ಪಿಎಸ್ಐ ದೇವರಾಜ್, ವಿದ್ಯವಿಕಾಸ ಶಾಲೆಯ ಶಿಕ್ಷಕ- ಶಿಕ್ಷಕಿಯರು ಮತ್ತು ಶಾಲೆಯ ವಿದ್ಯಾರ್ಥಿ -ವಿದ್ಯಾರ್ಥಿನಿಯರು ಇದ್ದರು