ನಾಯಕನಹಟ್ಟಿ:: ಸಮೀಪದ ಗೌಡಗೆರೆ ಗ್ರಾಮದ ವಯೋ ವೃದ್ಧ 53 ವರ್ಷದ ಚೌಡಪ್ಪ ದಿನಾಂಕ 22 12 2023 ರಂದು ಬೆಳಿಗ್ಗೆ 10:00 ಸಮಯದಲ್ಲಿ ತಾನು ಗ್ರಾಮದೊಳಗೆ ಸುತ್ತಾಡಿಕೊಂಡು ಬರುತ್ತೇನೆ ಎಂದು ಮನೆಯಲ್ಲಿ ತಿಳಿಸಿ ಹೋದವರು ಇದುವರೆಗೆ ಮನೆಗೆ ವಾಪಸ್ ಬಂದಿರುವುದಿಲ್ಲ.
ಮಕ್ಕಳು ಕುಟುಂಬದವರು ಮತ್ತು ಸಂಬಂಧಿಕರ ಹಾಗೂ ಪರಿಚಯಸ್ಥರ ಬಳಿ ವಿಚಾರಿಸಿ ಹಾಗೂ ಬೇರೆ ಬೇರೆ ಸ್ಥಳಗಳಲ್ಲಿ ಹುಡುಕಲಾಗಿದೆ ಇದುವರೆಗೆ ಪತ್ತೆ ಆಗಿರುವುದಿಲ್ಲ ಎಂದು ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಯಾರಿಗಾದರೂ ಸಿಕ್ಕಲ್ಲಿ ಕಂಡು ಬಂದಲ್ಲಿ ನಾಯಕನಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ಅವರ ಮೊಬೈಲ್ ಸಂಖ್ಯೆ: 9480803158 ,
ಠಾಣೆಯ ಲ್ಯಾಂಡ್ ಫೋನ್ ನಂಬರ್ 80190 – 207408
ಸಂಪರ್ಕಿಸುವಂತೆ ಕೋರಲಾಗಿದೆ.
ಕಾಣೆಯಾದ ಚೌಡಪ್ಪ ವಿವರ ಮನೆಯಿಂದ ಹೋಗುವಾಗ ಬಿಳಿ ಶಾಟ್೯ ಬಿಳಿ ಬನಿಯನ್ ಬಿಳಿ ಪಂಚೆ, ಪಟ್ಟಿ ಲಾಡಿ ನಿಕ್ಕರ್ ಧರಿಸಿರುತ್ತಾರೆ, ಕೋಲು ಮುಖ, ಕಪ್ಪನೆ ಮೈಬಣ್ಣ,ನೀಳಿಕಾಯ ಶರೀರ,ತಲೆಯಲ್ಲಿ ಬಿಳಿ ಕೂದಲು,ಬಿಳಿ ಗಡ್ಡ ಇರುತ್ತದೆ, ಕನ್ನಡ ಭಾಷೆಯನ್ನು ಮಾತನಾಡುತ್ತಾರೆ ಸುಮಾರು 155 ಸೆ.ಮೀ.ಎತ್ತರ ಸುಮಾರು 52 ಕೆ ಜಿ. ಹೊಂದಿರುತ್ತಾರೆ,