ಚಳ್ಳಕೆರೆ: ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಹನುಮ ಜಯಂತಿಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಸಂಭ್ರಮ ಸಡಗರದಿಂದ ಗ್ರಾಮಸ್ಥರೆಲ್ಲರೂ ಆಚರಿಸಿದರು.

ಹನುಮನ ದೇವಸ್ಥಾನವನ್ನು ಮಾವಿನ-ತೋರಣ ವಿದ್ಯುತ್ ದೀಪಗಳು ಮತ್ತು ವಿವಿಧ ಬಗೆಯ ಹೂಗಳಿಂದ ದೇವಸ್ಥಾನವನ್ನು, ಅಲಂಕರಿಸಿ ದೇವರಿಗೆ, ಹಾಲು-ತುಪ್ಪದ ಅಭಿಷೇಕ, ವಿವಿಧ ಬಗೆಯ ಪೂಜಾ ಕಾರ್ಯಗಳನ್ನು ನಡೆಸಲಾಯಿತು. ಭಕ್ತರು ಹನುಮಾನ ದರ್ಶನ ಪಡೆಯಲು ಹೂವಿನ ಹಾರ, ಬಾಳೆಹಣ್ಣು, ತೆಂಗಿನಕಾಯಿ, ಕರ್ಪೂರ, ಪೂಜಾ ಸಾಮಗ್ರಿಗಳೊಂದಿಗೆ ಗ್ರಾಮದ ಸಮಸ್ತ ಭಕ್ತರು ದೇವಸ್ಥಾನಕ್ಕೆ ಬಂದು ದರ್ಶನವನ್ನು ಪಡೆದಿದ್ದಾರೆ, ಎಂದು ಪೂಜಾರಿ ರಂಗಸ್ವಾಮಿ ತಿಳಿಸಿದ್ದಾರೆ.

ಪ್ರತಿವರ್ಷದಂತೆ ಈ ವರ್ಷವೂ ಹನುಮ ಜಯಂತಿಯನ್ನು ತಾಲೂಕಿನಲ್ಲಿ ಬರಗಾಲವಿದ್ದರೂ ಸಹ ಗ್ರಾಮದ ಎಲ್ಲಾ ಜಾತಿ ಜನಾಂಗದ ಸಹಕಾರದಿಂದ ವಿಜೃಂಭಣೆಯಿಂದ ಆಚರಿಸಿದ್ದೇವೆ. ಅನ್ನ ಸಂತರ್ಪಣೆ ಮಾಡಲು ಒಂದು ಕ್ವಿಂಟಲ್ ಪುಳಿಯೋಗರೆ, ಅರ್ಧ ಕ್ವಿಂಟಲ್ ಪಾಯಸ,ಪಲ್ಯ ಎಲ್ಲವನ್ನು ಭಕ್ತರಿಗೆ ಮಾಡಿಸಿದ್ದು 2ಸಾವಿರಕ್ಕೂ ಅಧಿಕ ಭಕ್ತಾದಿಗಳು ಪ್ರಸಾದ ಸ್ವೀಕರಿಸಿದ್ದಾರೆ. ಹಾಗೂ ಗ್ರಾಮದಲ್ಲಿ 12 ವರ್ಷಗಳಿಂದ ಹನುಮ ಜಯಂತಿಯನ್ನು ಆಚರಿಸುತ್ತಾ ಬಂದಿದ್ದೇವೆ.

ದೇವಸ್ಥಾನ ಇನ್ನು ಅಭಿವೃದ್ಧಿ ಹೊಂದಬೇಕಿದೆ ಇದರಿಂದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸನ್ಮಾನ್ಯ ಶಾಸಕರದ ಟಿ ರಘುಮೂರ್ತಿ ಅವರು ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನವನ್ನು ನನ್ನ ಅನುದಾನದಲ್ಲಿ ಪೂರ್ಣಗೊಳಿಸಿ ಕೊಡದೆ ಎಂದು ಭರವಸೆ ನೀಡಿದ್ದರು. ಇದರಿಂದ ಗ್ರಾಮಸ್ಥರು ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡಿ ಜಯಶೀಲರನ್ನಾಗಿಸಿದ್ದೇವೆ. ಶಾಸಕರು ದೇವಸ್ಥಾನವನ್ನು ಪೂರ್ಣಗೊಳಿಸಿ ಕೊಡುವ ನಂಬಿಕೆ ಗ್ರಾಮಸ್ಥರಿಗೆ ಇದೆ ಎಂದು ಗ್ರಾಮ ಪಂಚಾಯತಿ ಸದಸ್ಯ ಪಿ.ಟಿ.ಎಸ್ ನಾಗರಾಜ್ ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ.

About The Author

Namma Challakere Local News
error: Content is protected !!