ಚಿತ್ರದುರ್ಗ
ಶಾಲಾ ಹಂತದಲ್ಲೆ ವಿದ್ಯಾರ್ಥಿಗಳನ್ನು ನಿಯಮಿತವಾಗಿ ಹೊರಸಂಚಾರ ಹಾಗೂ ಕ್ಷೇತ್ರ ಅಧ್ಯಯನಗಳಿಗೆ ಕರೆದೊಯ್ದರೆ ಅವರಲ್ಲಿ ಸಾಮಾನ್ಯ ಜ್ಞಾನ ಹೆಚ್ಚಿ ತಮ್ಮ ಸುತ್ತಲಿನ ಸಾರ್ವಜನಿಕ ಸ್ಥಳಗಳ ಮಾಹಿತಿ ಅರಿಯುವರು ಎಂದು ಜೆಸಿಹಳ್ಳಿಗೊಲ್ಲರಹಟ್ಟಿ ಗ್ರಾಮದ ಸಹಿಪ್ರಾ ಶಾಲಾ ಮುಖ್ಯಶಿಕ್ಷಕ ಒ ಚಿತ್ತಯ್ಯ ಹೇಳಿದರು
ಚಿತ್ರದುರ್ಗ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಜೆಸಿಹಳ್ಳಿಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳನ್ನು ಸೋಮವಾರ ಸಮೀಪದ ಬಾಲೇನಹಳ್ಳಿ ರೈಲ್ವೆ ಸ್ಟೇಷನ್‌ಗೆ ಕ್ಷೇತ್ರ ಅಧ್ಯಯನಕ್ಕೆ ಕರೆದೊಯ್ದು ಅಲ್ಲಿನ ರೈಲ್ವೆ ವ್ಯವಸ್ಥೆ ಕುರಿತು ಮಕ್ಕಳಿಗೆ ಮಾಹಿತಿ ನೀಡಿ ಮಾತನಾಡಿದರು
ಪ್ರಾಥಮಿಕ ಹಾಗೂ ಪ್ರೌಢಹಂತದ ವಿದ್ಯಾರ್ಥಿಗಳನ್ನು ಶಾಲಾ ವ್ಯಾಪ್ತಿಯ ರೈಲ್ವೆ ಸ್ಟೇಷನ್, ಬಸ್‌ನಿಲ್ದಾಣ, ಬ್ಯಾಂಕ್, ಅಂಚೆ ಕಚೇರಿ, ಐತಿಹಾಸಿಕ ಸ್ಮಾರಕಗಳು, ವೀರಗಲ್ಲು ಮಾಸ್ತಿಗಲ್ಲು, ಪ್ರವಾಸಿ ಸ್ಥಳಗಳು ರೈತರ ತೋಟಗಳು ಹೀಗೆ ವಿವಿಧ ಪ್ರದೇಶಗಳಿಗೆ ನಿಯಮಿತವಾಗಿ ಕರೆದುಕೊಂಡು ಹೋಗಿ ಅಲ್ಲಿನ ಸಂಪೂರ್ಣ ಮಾಹಿತಿ ನೀಡಿದರೆ ಅವರು ಭವಿಷ್ಯದಲ್ಲಿ ಉತ್ತಮ ಸಂವಹನ ಕೌಶಲಗಳನ್ನು ಹೊಂದಿ ಇತರರಿಗೆ ಮಾದರಿಯಾಗುತ್ತಾರೆ ಎಂದರು
ಶಾಲಾ ಹಿರಿಯ ಶಿಕ್ಷಕ ಎಸ್ ಟಿ ಮಂಜುನಾಥ ಅಲ್ಲಿನ ರೈಲ್ವೆ ನಿಲ್ದಾಣ, ಟಿಕೆಟ್ ಕೌಂಟರ್, ರೈಲ್ವೆ ಯಂತ್ರಗಳನ್ನು ಪರಿಚಯಿಸಿ ಇಂದಿನ ಅಧುನಿಕ ಕಾಲಘಟ್ಟಕ್ಕೆ ಅನುಗುಣವಾಗಿ ರೈಲ್ವೆ ಸಿಬ್ಬಂದಿಗೆ ತಂತ್ರಜ್ಞಾನಾದಾರಿತ ಉಪಕರಣಗಳ ಮೂಲಕ ಸ್ಟಾಂಡ್‌ಗೆ ಬರುವ ಹೋಗುವ ರೈಲುಗಳ ಮಾಹಿತಿ ತಿಳಿಯುತ್ತಿದೆ ವಿದ್ಯಾರ್ಥಿಗಳು ಮಾಹಿತಿ ತಿಳಿದು ತಮ್ಮ ನೆರೆ ಹೊರೆಯವರಿಗೆ ತಿಳಿವಳಿಕೆ ನೀಡಬೇಕು ಎಂದರು
ಇದೇ ವೇಳೆ ರೈಲು ನಿಲ್ದಾಣದಲ್ಲಿ ಅಲ್ಲಿನ ವ್ಯವಸ್ಥಾಪಕ ಸಾಯಿವಣ್ಣ ಮತ್ತು ಸಾಯಿಕುಮಾರ ಮಕ್ಕಳಿಗೆ ದಿನ ನಿತ್ಯ ಬಂದು ಹೋಗುವ ರೈಲುಗಳು, ಸಮಯ, ಸುರಕ್ಷತಾ ನಿಯಮ, ಅಲ್ಲಿನ ಹೈವೋಲ್ಟೇಜ್ ವಿದ್ಯುತ್ ತಂತಿಗಳಿAದ ರಕ್ಷಣೆ ಇತರೆ ಮಾಹಿತಿ ತಿಳಿಸಿದರು
ಮಕ್ಕಳಿಗೆ ರಸಪ್ರಶ್ನೆ, ಖೋ ಖೋ, ಕಬ್ಬಡ್ಡಿ, ಕೆಲ ವೈಯಕ್ತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಸಂದರ್ಭದಲ್ಲಿ ಮುಖ್ಯಶಿಕ್ಷಕ ಓ ಚಿತ್ತಯ್ಯ, ಶಿಕ್ಷಕರಾದ ಎಸ್ ಟಿ ಮಂಜುನಾಥ, ವಿ ಶರಣಪ್ಪ, ಮೇಘಾ, ಭವಾನಿ ವಿದ್ಯಾರ್ಥಿಗಳಾದ ತ್ರಿವೇಣಿ, ವಿನಯ್, ಕಿರಣ್, ಆಕಾಶ, ಜೀವನ್, ಸುಚಿತ್ರಾ, ಅಕ್ಷಿತಾ, ಗೌತಮಿ, ಸ್ಪೂರ್ತಿ, ಇದ್ದರು
(ಪೋಟೋ À ರೈಲು 18)
ಚಿತ್ರದುರ್ಗ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಜೆಸಿಹಳ್ಳಿಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳನ್ನು ಸೋಮವಾರ ಸಮೀಪದ ಬಾಲೇನಹಳ್ಳಿ ರೈಲ್ವೆ ಸ್ಟೇಷನ್‌ಗೆ ಕ್ಷೇತ್ರ ಅಧ್ಯಯನಕ್ಕೆ ಕರೆದೊಯ್ದು ಅಲ್ಲಿನ ರೈಲ್ವೆ ವ್ಯವಸ್ಥೆ ಕುರಿತು ಮಕ್ಕಳಿಗೆ ಅಲ್ಲಿನ ಸಿಬ್ಬಂದಿ ಸಾಯಿವಣ್ಣ, ಸಾಯಿ ಕುಮಾರ ಮಾಹಿತಿ ನೀಡಿದರು ಮುಖ್ಯಶಿಕ್ಷಕ ಓ ಚಿತ್ತಯ್ಯ, ಶಿಕ್ಷಕರಾದ ಎಸ್ ಟಿ ಮಂಜುನಾಥ, ವಿ ಶರಣಪ್ಪ, ಮೇಘಾ, ಭವಾನಿ ವಿದ್ಯಾರ್ಥಿಗಳಾದ ತ್ರಿವೇಣಿ, ವಿನಯ್, ಕಿರಣ್, ಆಕಾಶ, ಜೀವನ್, ಸುಚಿತ್ರಾ, ಅಕ್ಷಿತಾ, ಗೌತಮಿ, ಸ್ಪೂರ್ತಿ, ಇದ್ದರು

About The Author

Namma Challakere Local News
error: Content is protected !!