ರಾಮುದೊಡ್ಮನೆ ಚಳ್ಳಕೆರೆ
ಚಳ್ಳಕೆರೆ : ಜಿಲ್ಲೆಯಲ್ಲಿ ಅತೀ ದೊಡ್ಡ ತಾಲೂಕು ಹಾಗಿ ಹೊರಹೊಮ್ಮಿದ ಚಳ್ಳಕೆರೆ ಬಯಲು ಸೀಮೆಯಲ್ಲಿ ಉದ್ಯಾನವನಗಳು ಮರಿಚಿಕೆಯಾಗಿವೆ.
ಚಳ್ಳಕೆರೆ ತಾಲೂಕು ಅತೀ ಕಡಿಮೆ ಬಿಳುವ ಪ್ರದೇಶವಾಗಿರುವುದರಿಂದ ಗಿಡಮರಗಳ ಸಂಖ್ಯೆ ಇಳಿಮುಖವಾಗಿದೆ, ಗಿಡ ಮರಬೆಳೆಸಲು ಮೂಲಭೂತ ಸೌಲಭ್ಯಗಳನ್ನು ಸರಕಾರ ಕಲ್ಪಿಸಿ ಅನುದಾನ ನೀಡಬೇಕಾದ ಸರಕಾರ ಅನುದಾನ ಬಿಡುಗಡೆ ಮಾಡದೆ ಇರುವುದರಿಂದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೂ ಎದ್ದು ಕಾಣುತ್ತಿದೆ
ಚಳ್ಳಕೆರೆ ನಗರದ 31ವಾರ್ಡ್ಗಳಲ್ಲಿ, ಸಾರ್ವಜನಿಕರ ಉದ್ದೇಶಕ್ಕೆ ಸುಮಾರು 26 ಜಾಗಗಳನ್ನು ನಿಗಧಿ ಮಾಡಿದರೆ, ಇನ್ನೂ ಸುಮಾರು 116 ಉದ್ಯಾಯನವನಗಳು ಇವೆ ಆದರೆ ಬೆರಳೆಣಿಕೆಯಷ್ಟು ಮಾತ್ರ ಅಭಿವೃದ್ದಿಯಲ್ಲಿವೆ ಆದರೆ ಇನ್ನೂ ಕೆಲವು ಜಾಲಿ ಗಿಡಗಳು ಬೆಳೆದು ಉದ್ಯಾಯನವನಗಳ ಅಕ್ಕ ಪಕ್ಕದ ಮನೆಗಳಿಗೆ ವಿಷಜಂತುಗಳ ಕಾಟವಾಗಿದೆ.
ಇನ್ನೂ ವಾರ್ಡ್ಗೆ ಒಂದು ಉದ್ಯಾಯನವನ ಅಭಿವೃದ್ಧಿಗೆ ನಗರಸಭೆ ನಿರ್ವಹಣೆ ಹೊತ್ತಿದೆ ಆದರೆ ಕಳೆದ ವರ್ಷದಿಂದ ಮೌನ ವಹಿಸಿದೆ ಹಲವಾರು ವರ್ಷಗಳಿಂದ ಹೆಮ್ಮರವಾಗಿ ಬೆಳೆದ ಮರಗಳು ಇಂದು ಮೂಲ ಸೌಲಭ್ಯ ಕೊರತೆಯಿಂದ ಒಣಗುತ್ತಿವೆ.
ಉದ್ಯಾಯನವನ ಖಾಸಗಿ ವ್ಯಕ್ತಿಗಳ ಅಕ್ರಮಣ :
ನಗರದ ಬೆಂಗಳೂರು ರಸ್ತೆಯ ಶಿವನಗರದಲ್ಲಿ ಸಾರ್ವಜನಿಕರ ಉದ್ದೇಶಕ್ಕಾಗಿ ಲೇಔಟ್ ನಿರ್ಮಾಣವಾದಗಲೇ ಉದ್ಯಾಯನವನ, ರಸ್ತೆ ಈಗೇ ಜಾಗವನ್ನು ಮೀಸಲಿಟ್ಟರೆ ಖಾಸಗಿಯವರು ಅದನ್ನು ಕಬಳಿಸುವ ಮೂಲಕ ನಗರಸಭೆ ಆಸ್ತಿಯನ್ನು ದುರಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರ ವಲದಲ್ಲಿ ಹಬ್ಬಿದೆ.
ಇದರಿಂದ ದಿನ ಬೆಳಗಾದರೆ ನಗರದಲ್ಲಿ ವಾಯುವಿಹಾರಕ್ಕೆ ತೆರಳುವ ವಯೋ ವೃದ್ದರು, ನಿವೃತ್ತಿ ನೌಕರÀರು, ವಿಶ್ರಾಂತಿ ಪಡೆಯುವ ಸಾರ್ವಜನಿಕರು, ಮಕ್ಕಳು ಆಟವಾಡಲು ಉದ್ಯಾಯನವನ ಇಲ್ಲದೆ ದಿನ ಬೆಳಗಾದರೆ ನಗಸಭೆ ಆಧಿಕಾರಿಗಳಿಗೆ ಶಾಪ ಹಾಕುವ ಮೂಲಕ ಮನಸ್ಸಲ್ಲೆ ಮರುಗುತ್ತಿದ್ದಾರೆ.
ಖಾಸಗಿ ವ್ಯಕ್ತಿಗಳು ಉದ್ಯಾಯನದಲ್ಲಿ ಕಾರು ಪಾರ್ಕಿಂಗ್ ಹಾಗೂ ಶೆಡ್ಡು ನಿರ್ಮಾಣ ಮಾಡಿಕೊಂಡು ಉದ್ಯಾಯನವನದ ಮೂಲ ಉದ್ದೇಶವನ್ನೆ ಮರೆತು, ಈರೀತಿ ಖಾಸಗಿ ವಶಕ್ಕೆ ಪಡೆಯುವುದು ಆಕ್ಷö್ಯಮ್ಯ ಅಪರಾಧವಾಗಿದೆ, ಆದರೆ ಇದರ ಬಗ್ಗೆ ನಗರಸಭೆ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಕೆಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಸ್ಥಳೀಯ ನಿವಾಸಿಗಳ ಅಭಿಪ್ರಾಯವಾಗಿದೆ.
ಇನ್ನೂ ಚಿತ್ರದುರ್ಗ ರಸ್ತೆಯ ಡಿವೈಎಸ್‌ಪಿ ಕಛೇರಿ ಸಮೀಪದಲ್ಲಿ ವಿಸ್ಮಯ ಪಾರ್ಕ್ ನಿರ್ಮಾಣ ಮಾಡಿದ ನಗರಸಭೆ ಅಧಿಕಾರಿಗಳು ಸಾರ್ವಜನಿಕರ ಬಳಕೆಗೆ ಕೈಗೆಟುಕದಂತೆ ಇದೆ, ಅಲ್ಲಿನ ಸ್ವಚ್ಚತೆ ಇಲ್ಲದೆ ಇರುವುದು, ಸೊಳ್ಳೆಗಳ ಉತ್ಪತ್ತಿ ತಾಣ, ಪ್ಲಾಸ್ಟಿಕ್ ತ್ಯಾಜ್ಯ ಈಗೇ ಉದ್ಯಾಯನದವದಲ್ಲಿ ಎಲ್ಲಿ ನೋಡಿದರೂ ಸ್ವಚ್ಚತೆ ಇಲ್ಲದೆ ಇರುವುದು ಕಂಡು ಬರುತ್ತಿದೆ, ಇನ್ನೂ ಲಕ್ಷಗಟ್ಟಲೆ ಅನುದಾನ ಬಳಕೆಯಾದ ವಿಸ್ಮಯ ಪಾರ್ಕ್ ಈರೀತಿ ಅವಸನದ ಅಂಚಿಗೆ ತಲುಪಿರುವುದು ನಿಜಕ್ಕೂ ಶೌಚನೀಯ, ಇನ್ನೂ ನಗರದಲ್ಲಿ ದಿನವೊಂದಕ್ಕೆ ಸಾವಿರಾರು ಜನರು ಬಂದುಹೋಗುತ್ತಾರೆ ಆದರೆ ಬಯಲು ಸೀಮೆಯಲ್ಲಿ ಎಲ್ಲಿಯೂ ಕೂಡ ಒಂದು ಹಸಿರು ತಾಣ ಉದ್ಯಾಯನವನ ಇಲ್ಲದೆ ಇರುವುದು ವಿಪರ್ಯಸವೇ ಸರಿ.
ಹೇಳಿಕೆ :
1.ಗ್ರಾಮೀಣ ಪ್ರದೇಶದಿಂದ ನಗರÀಕ್ಕೆ ಅನ್ಯಕಾರ್ಯಗಳ ನಿಮ್ಮಿತ್ತ ಬಂದರೆ ನಗರದಲ್ಲಿ ವಿಶ್ರಾಂತಿ ಪಡೆಯಲು ಎಲ್ಲಿಯೂ ಕೂಡ ಒಂದು ಸರಿಯಾದ ಉದ್ಯಾಯನವನ ಇಲ್ಲ, ಉರಿ ಬಿಸಿಲಿನಲ್ಲೆ ಕಾಲ ಕಳೆಯಬೇಕಾಗಿದೆ, ಇನ್ನೂ ಇರುವ ಉದ್ಯಾಯನವನಗಳು ಉಳ್ಳವರ ಪಾಲು ಹಾಗದಂತೆ ಇದರ ಬಗ್ಗೆ ನಗರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಉದ್ಯಾಯನವನಗಳ ಉದ್ದೇಶ ಈಡೇರಿಸಬೇಕು ಕೇವಲ ನೆಪ ಮಾತ್ರಕ್ಕೆ ಕೆಲಸ ಮಾಡದೆ ಸಾರ್ವಜನಿಕರ ಸೇವೆಗೆ ಮುಂದಾಗಲಿ.
–ಕೆ.ಪಿ.ಭೂತಯ್ಯ ರಾಜ್ಯ ರೈತ ಸಂಘ ಉಪಾಧ್ಯಕ್ಷ
ಹೇಳಿಕೆ :

2.ನಗರದ ಶಿವನಗರದಲ್ಲಿ ಉದ್ಯಾಯನವನದಲ್ಲಿ ಖಾಸಗಿ ಕಾರು ಶೆಡ್ಡ್ ಹಾಕಿರುವುದು ಗಮನಕ್ಕೆ ಬಂದಿರಲಿಲ್ಲ, ಈ ಕೂಡಲೇ ಸ್ಥಳ ಪರೀಶಿಲಿಸಿ ಉದ್ಯಾಯನವನದಲ್ಲಿ ಶೇಡ್ ನಿರ್ಮಿಸಿದ್ದರೆ ಕೂಡಲೇ ತೆರುವುಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಡಲಾಗುವುದು. ನಗರದಲ್ಲಿ ಸರಿ ಸುಮಾರು 116 ಉದ್ಯಾಯನವನಗಳು ಹಾಗೂ 26 ಸಾರ್ವಜನಿಕರ ಉದ್ದೇಶಕ್ಕೆ ಮೀಸಲಿಟ್ಟ ಜಾಗಗಳಿವೆ, ಅದರಲ್ಲಿ ಸುಮಾರು ಉದ್ಯಾಯನವನಗಳು ಅಭಿವೃದ್ದಿಯಾಗಿವೆ ಸಾರ್ವಜನಿಕರ ಬಳಕೆಗೆ ಉಪಯುಕ್ತವಾಗಿವೆ, ಆದರೆ ಕೆಲವು ಉದ್ಯಾಯನವನಗಳಿಗೆ ಮಾತ್ರ ಅನುದಾನ ಇಲ್ಲ ಈ ಬಾರಿ ನಗರದ ಎಲ್ಲಾ ಉದ್ಯಾಯನವನಗಳ ಹಸಿರುಕರಣಕ್ಕೆ ಮುಂದಾಗಲಾಗುವುದು. ..
-ಸಿ.ಚಂದ್ರಪ್ಪ, ಪೌರಾಯುಕ್ತರು ನಗರಸಭೆ ಚಳ್ಳಕೆರೆ

1.ಪೋಟೊ ಚಳ್ಳಕೆರೆ ನಗರದ ಶಿವನಗರದಲ್ಲಿ ಉದ್ಯಾಯನವನದಲ್ಲಿ ಖಾಸಗಿ ವ್ಯಕ್ತಿಗಳು ಕಾರುಶೆಡ್ಡು ನಿರ್ಮಿಸಿರುವುದು.
2.ಚಳ್ಳಕೆರೆ ನಗರದ ಡಿವೈಎಸ್‌ಪಿ ಕಚೇರಿ ಸಮೀಪದಲ್ಲಿರುವ ವಿಸ್ಮಯ ಪಾರ್ಕ್ ಸ್ವಚ್ಚತೆ ಇಲ್ಲದೆ ವಿಷಜಂತುಗಳ ತಾಣವಾಗಿದೆ.
3.ಚಳ್ಳಕೆರೆ ನಗರದ ಶಿವ ನಗರದ ಉದ್ಯಾಯವನ ಅನುದಾನ ಇಲ್ಲದೆ ಸೌರಗುತ್ತಿರುವುದು

About The Author

Namma Challakere Local News
error: Content is protected !!