ಗೌರಸಮುದ್ರ ಶ್ರೀ ಮೈಲಾರಲಿಂಗಶ್ವರ ಸ್ವಾಮಿಯ ದೇವಾಸ್ಥಾನದ ಜೀರ್ಣೋದ್ಧಾರ..!
ಪವಾಡ ಪುರುಷ, ಕಾರ್ಣೀಕ ನುಡಿಯುವ ಶ್ರೀ ಮೈಲಾರಲಿಂಗಶ್ವರಸ್ವಾಮಿ ದೇವಾಸ್ಥಾನ ನಿರ್ಮಾಣ ಮಾಡುತ್ತಿರುವುದು ದೈವತ್ವದ ಪ್ರತೀಕ : ದೇವಾಸ್ಥಾನ ಕಮಿಟಿಯ ಅಧ್ಯಕ್ಷರಾದ ನಿವೃತ್ತ ಎಎಸ್‌ಐ ಟಿ.ಮಲ್ಲಯ್ಯ ಹೇಳಿದ್ದಾರೆ.
ಚಳ್ಳಕೆರೆ : ಮನುಷ್ಯನ ಮಾನಸೀಕ ನೆಮ್ಮದಿಗೆ ಅನಾದಿ ಕಾಲದಿಂದಲೂ ಕಂಡುಕೊAಡ ಪದ್ದತಿಗಳು, ಹಾಗೂ ಭಕ್ತಿ ಭಾವನೆಗಳಿಗೆ ತಮ್ಮ ಪೂರ್ವಜರ ದೇವರ ಮೊರೆ ಹೋಗುವ ಮೂಲಕ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದರು, ಆದರಂತೆ ಇಂದು ತಮ್ಮ ಆರಾಧ್ಯ ದೈವವಾದ ಶ್ರೀ ಮೈಲಾರಲೀಗೇಶ್ವರ ದೇವಾಸ್ಥಾನದ ಜೀಣೋದ್ಧಾರದ ಮೂಲಕ ದೈವತ್ವವನ್ನು ಮೆರೆಯೋಣ ಎಂದು ಶ್ರೀ ಮೈಲಾರಲಿಂಗಶ್ವರ ಸ್ವಾಮಿ ದೇವಾಸ್ಥಾನ ಕಮಿಟಿಯ ಅಧ್ಯಕ್ಷರಾದ ನಿವೃತ್ತ ಎಎಸ್‌ಐ ಟಿ.ಮಲ್ಲಯ್ಯ ಹೇಳಿದ್ದಾರೆ.
ಅವರು ತಾಲೂಕಿನ ಗೌರಸಮುದ್ರ ಗ್ರಾಮದ ಶ್ರೀ ಮೈಲಾರಲಿಂಗಶ್ವರಸ್ವಾಮಿ ದೇವಾಸ್ಥಾನದ ಜೀಣೋದ್ಧಾರದ ಅಂಗವಾಗಿ ದೇವಾಸ್ಥಾನದ ಬಾಗಿಲು ಇಡುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಲವು ಬಾಗದ ಭಕ್ತಾಧಿಗಳು ಹಾಗೂ 36 ಹಳ್ಳಿಗಳ ದೇವಾಸ್ಥಾನದ ಅಣ್ಣತಮ್ಮಂದಿರು ಒಗ್ಗೂಡಿ ದೇವಾಸ್ಥಾನ ಜೀಣೋದ್ಧಾರಕ್ಕೆ ಕಂಕಣ ಬದ್ದರಾಗಿದ್ದಾರೆ ಇದರಿಂದ ನಮ್ಮ ಪೂರ್ವಿಕರು ನಂಬಿಕೊAಡ ಬಂದAತಹ ವಾಡಿಕೆ ಇಲ್ಲಿ ಈಗಲೂ ಜೀವಂತವಾಗಿದೆ ಎಂದರು.
ಮಧ್ಯಕರ್ನಾಟಕದ ಆರಾಧ್ಯ ದೈವ ಶ್ರೀ ಗೌರಸಮುದ್ರ ಮಾರಮ್ಮ ದೇವಿ ನೆಲೆಸಿದ ಗೌರಸಮುದ್ರ ಗ್ರಾಮದಲ್ಲಿ ಪವಾಡ ಪುರುಷ, ಮುಂದೆ ನಡೆಯಬಹುದಾದ ಘಟನೆಗಳ ಬಗ್ಗೆ ಕಾರ್ಣೀಕ ನುಡಿಯುವ ಶ್ರೀ ಮೈಲಾರಲಿಂಗಶ್ವರ ಸ್ವಾಮಿ ದೇವಾಸ್ಥಾನ ನಿರ್ಮಾಣ ಮಾಡುತ್ತಿರುವುದು ಈ ಭಾಗದ ದೈವತ್ವದ ಪ್ರತೀಕ ಹಿಂದಿನ ಕಾಲದ ದಾರ್ಮಿಕ ಪರಂಪರೆ ಉಳಿಸುವ ಮೂಲಕ ಗ್ರಾಮದ ಆರಾಧ್ಯ ದೈವವಾಗಿದ್ದಾರೆ ಎಂದರು.
ಇದೇ ಸಂಧರ್ಭದಲ್ಲಿ ಉಪಾಧ್ಯಕ್ಷ ಹೊನ್ನುರಪ್ಪ, ಕಾರ್ಯದರ್ಶಿಮಹೇಶ್, ತಿಪ್ಪೆಸ್ವಾಮಿ, ಪೂಜಾರಿ ಪೆನ್ನಯ್ಯ, ಬಸಣ್ಣ, ಯಜಮಾನ ತಿಪ್ಪಣ್ಣ ಇತರ ಸದಸ್ಯರುಗಳು ಹಾಗೂ ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.