ಬಿಆರ್‌ಸಿ,ಬಿಆರ್‌ಪಿ ಮತ್ತು ಸಿಆರ್‌ಪಿಗಳಿಗೆ ಪುನಶ್ಚೇತನ ಕಾರ್ಯಗಾರ..!
ಮುಗ್ದಮಕ್ಕಳ ಮನಸ್ಸು ಸೆಳೆಯಲು ವಾತವರಣಕ್ಕೆ ತಕ್ಕಂತೆ ಕಲಿಕೆ : ಬಿಇಓ.ಕೆ.ಎಸ್.ಸುರೇಶ್
ಚಳ್ಳಕೆರೆ : ಚಳ್ಳಕೆರೆ ನಗರದ ಆದರ್ಶ ವಿದ್ಯಾಲಯದ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಇವರ ಸಹಯೋಗದಲ್ಲಿ ವಿವಿಧ ಶೈಕ್ಷಣಿಕ ಸಮೀಕ್ಷೆಗಳ ಅನುಷ್ಠಾನ ಮತ್ತು ಅನು ಪಾಲನೆ ಕುರಿತು ಜಿಲ್ಲೆಯ ಬಿಆರ್‌ಸಿ, ಬಿಆರ್‌ಪಿ ಮತ್ತು ಸಿಆರ್‌ಪಿಗಳಿಗೆ ಪುನಶ್ಚೇತನ ಕಾರ್ಯಗಾರದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಕ್ಷೇತ್ರದ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದ ಮುಗ್ದ ಮಕ್ಕಳ ಮನಸ್ಸು ಸೆಳೆಯಲು ಅಲ್ಲಿನ ವಾತವರಣಕ್ಕೆ ತಕ್ಕಂತೆ ಉದಾಹರಣೆಗಳನ್ನು ನೀಡುತ್ತಾ ಕಲಿಕಾ ಪೂರಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಮನಸ್ಸು ಗೆಲ್ಲಬೇಕು, ಕಳೆದ ಬಾರಿ ಎಸ್ ಎಸ್‌ಎಲ್‌ಸಿ ಫಲಿತಾಂಶ ಈಡೀ ರಾಜ್ಯದಲ್ಲಿ ಮೊದಲ ಸ್ಥಾನ ನಮಗೆ ಖುಷಿ ಕೊಟ್ಟಿದೆ ಇನ್ನೂ ಈ ಸ್ಥಾನವನ್ನು ಯಾರಿಗೂ ಬಿಟ್ಟುಕೊಡದ ರೀತಿಯಲ್ಲಿ ನಮ್ಮ ತಯಾರಿ ಇರಬೇಕು ಎಂದರು.
ಇನ್ನೂ ಪ್ರಾಸ್ತಾವಿಕವಾಗಿ ಮಾತನಾಡಿದ ನೋಡಲ್ ಅಧಿಕಾರಿ ಪ್ರಶಾಂತ್ ಕುಮಾರ್ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಗುರುತಿಸಲು ಈ ಕ್ರಮವನ್ನು ಅನುಸರಿಸುವುದರಿಂದ ಮುಂದಿನ ಶೈಕ್ಷಣಿಕ ವರ್ಷಕ್ಕೆ ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳಿಗೆ ಯಾವ ರೀತಿಯ ಪರಿಣಾಮಕಾರಿ ಬೋಧನೆಯನ್ನು ಭೋದಿಸಬೇಕು ಎಂಬುದರ ಬಗ್ಗೆ ಜ್ಞಾನ ಮೂಡುತ್ತದೆ ಈ ನಿಟ್ಟಿನಲ್ಲಿ ಈ ಕಾರ್ಯಗಾರವನ್ನ ಬಿಆರ್‌ಪಿ, ಸಿಆರ್‌ಪಿ ಹಾಗೂ ಬಿಆರ್‌ಸಿ ಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಈದೇ ಸಂದರ್ಭದಲ್ಲಿ ಡಯಟ್ ಅಧಿಕಾರಿಯ ಅಶ್ವಥನಾರಾಯಣ, ಬಸವರಾಜು, ತಿಪ್ಪೇಸ್ವಾಮಿ, ಆದರ್ಶ ಶಾಲೆಯ ಮುಖ್ಯೋಪಾಧ್ಯಾಯ ಅಶೋಕ್‌ರೆಡ್ಡಿ, ತಿಪ್ಪೇಸ್ವಾಮಿ ಸೇರಿದಂತೆ ಬಿಆರ್‌ಸಿ, ಸಿಆರ್‌ಪಿ ಹಾಗೂ ಬಿಆರ್‌ಪಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!