ಆರೋಗ್ಯದಲ್ಲಿ ಏರುಪೇರು ಕಂಡರೆ ತಕ್ಷಣ ವೈದ್ಯರ ಸಲಹೆ ಪಡೆದುಕೊಳ್ಳಿ : ಕಾರ್ಮಿಕ ಅಧಿಕಾರಿ ಕುಸುಮಾ
ಚಳ್ಳಕೆರೆ : ತಾಲೂಕಿನ ಮಿರಾಸಾಬಿಹಳ್ಳಿ ಹಾಗೂ ರಂಗೆನಹಳ್ಳಿ ಗ್ರಾಮದಲ್ಲಿ ಕಾರ್ಮಿಕ ಇಲಾಖೆ ಹಾಗೂ ಕಾರ್ಮಿಕ ಸಂಘಟನೆಯ ಸಹಕಾರದಿದ್ದ ಕಾರ್ಮಿಕರ ಕಾರ್ಡ್ ಇರುವಂತಹ ಸದಸ್ಯರಿಗೆ ಹಾಗೂ ಅವರ ಅವಲಂಬಿತರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಕಾರ್ಮಿಕ ಇಲಾಖೆಯ ಚಳ್ಳಕೆರೆ ವಿಭಾಗದ ಕಾರ್ಮಿಕ ನಿರೀಕ್ಷಕರಾದ ಕುಸುಮಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಗ್ರಾಮದಲ್ಲಿ ಆರೋಗ್ಯಕರ ಜೀವನ ನಡೆಸಲು ಪ್ರತಿಯೊಬ್ಬರು ಸನ್ನದರಾಗಬೇಕು, ಸದೃಡ ದೇಹವನ್ನು ಹೋಂದಬೇಕು, ಉತ್ತಮ್ಮ ಪೋಷ್ಠಿಕ ಆಹಾರ ಸೇವೆನೆಯಿಂದ ಉತ್ತಮ ಆರೋಗ್ಯ ಪಡೆಯಬಹುದು, ಚಿಕ್ಕಪುಟ್ಟ ಖಾಯಿಲೆಗಳು ಬಂದರೆ ಎದರದೆ ತಕ್ಷಣವೇ ವೈಧ್ಯರ ಸಲಹೆ ಪಡೆದು ಆರೋಗ್ಯ ಸುಧಾರಿಸಕೊಳ್ಳಬಹುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಬಾಲಕಾರ್ಮಿಕ ನಿರ್ಮೂಲನ ಅಧಿಕಾರಿ ಸತೀಶ್ ಹಾಗೂ ಕಾರ್ಮಿಕ ಸಂಘಟನೆಯ ಅದ್ಯಕ್ಷ ಸ್ವಾಮಿ ಎಂ ಹೆಚ್, ರಂಗೆನಹಳ್ಳಿ ಶೇಖರ್ ಇತರರು ಇದ್ದರು

About The Author

Namma Challakere Local News
error: Content is protected !!