ಚಳ್ಳಕೆರೆ : ಸಂವಿಧಾನ ಬಂದು ಹಲವು ವರ್ಷಗಳು ಕಳೆದರೂ ದಲಿತರ ಮೇಲೆನ ದೌರ್ಜನ್ಯ ಪ್ರಕರಣಗಳು ನಿಂತಿಲ್ಲ.
ಇನ್ನೂ ಹೆಚ್ಚಿನ ರೀತಿಯಲ್ಲಿ ದಲಿತರ ಮೇಲೆ ಕ್ರೌರ್ಯ ನಡೆಯುತ್ತಿರುವುದು ಕಾಣಬಹುದಾಗಿದೆ. ತಡರಾತ್ರಿ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ದಲಿತ ಯುವಕನ ಮೇಲೆ ತಡರಾತ್ರಿ ಸವರ್ಣೀಯ ವ್ಯಕ್ತಿಯೊಬ್ಬ ಹಲ್ಲೇ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ತಾಲೂಕಿನ ಗೋಪನಹಳ್ಳಿ ಗ್ರಾಮದ ದಲಿತ ಯುವಕ ಪವನ, ಎಂಬ ವ್ಯಕ್ತಿಯನ್ನು ಸವರ್ಣಿಯರು ಕೆಲಸಕ್ಕೆ ಕರೆದಿದ್ದಾರೆ ಎನ್ನಲಾಗಿದೆ, ಆದರೆ ನಾನು ಕೆಲಸಕ್ಕೆ ಬರುವುದಿಲ್ಲ ಸ್ವಾಮಿ ಎಂದು ಮರು ಉತ್ತರ ಹೇಳಿದ್ದಕ್ಕೆ, ಪವನನ ಮೇಲೆ ನೀನು ಯಾಕೆ ಕೆಲಸಕ್ಕೆ ಬರುವುದಿಲ,್ಲ ನೀವು ದಲಿತರು ನಾನು ಹೇಳಿದ ಹಾಗೆ ಕೇಳಬೇಕು, ಎಂದು ತೀವ್ರವಾಗಿ ಹಲ್ಲೇ ನಡೆಸಿದ್ದಾನೆ. ಎಂದು ಹಲ್ಲೇಗೊಳಗಾದ ಪವನ ತಿಳಿಸಿದ್ದಾನೆ.
ಗ್ರಾಮದ ಮುಖಂಡರು ತೀವ್ರವಾಗಿ ಗಾಯಗೊಂಡ ಪವನನಿಗೆ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಮನೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.