ಚಳ್ಳಕೆರೆ : ಅನ್ನಭಾಗ್ಯ ಯೋಜನೆಯ ಅಕ್ಕಿಗಾಗಿ ರಾತ್ರಿವೇಳೆ ಮಹಿಳೆಯರು ಸರಥಿ ಸಾಲಿನಲ್ಲಿ ಕಾಯುವ ಪರಸ್ಥಿತಿ ನಿರ್ಮಾಣವಾಗಿದೆ
ಬಡವರ ಹೊಟ್ಟೆಗಾಗಿ ಸರಕಾರ ಅನ್ನಭಾಗ್ಯ ಯೋಜನೆಯ ಹೊರತಂದಿದ್ದಾರೂ ಸೋಸೈಯಟಿ ಮಾಲೀಕರ ನಿರ್ಲಕ್ಷö್ಯಕ್ಕೆ ಕಡಿವಾಣ ಹಾಕುವವರಿಲ್ಲವಾಗಿದೆ.
ಚಳ್ಳಕೆರೆ ತಾಲೂಕಿನ ಬಂಜಿಗೆರೆ ಗ್ರಾಮದಲ್ಲಿ ಸೋಸೈಟಿ ಮಾಲೀಕರು ಬಡವರ ಅಕ್ಕಿಯನ್ನು ಮನಬಂದAತೆ ನೀಡುವ ಮೂಲಕ ಅವರಿಗೆ ತಿಳಿದ ಸಮಯಕ್ಕೆ ಅಕ್ಕಿ ನೀಡುವ ಪರಿಪಾಠ ರೂಡಿಸಿಕೊಂಡಿದ್ದಾರೆ.
ಇನ್ನೂ ಮುಂಜಾನೇ ಕೇವಲ ಒಂದು ಗಂಟೆ ಅನ್ನಭಾಗ್ಯ ಅಕ್ಕಿ ವಿತರಣೆ ಮಾಡಿದರೆ ಮತ್ತೆ ಸಂಜೆ 7ರಿಂದ 8 ಗಂಟೆಯವರೆಗೆ ಮಾತ್ರ ಅನ್ನಭಾಗ್ಯದ ಅಕ್ಕಿ ನೀಡುವುದು ವಾಡಿಕೆಯಾಗಿದೆ. ಕತ್ತಲು ಕವಿದ ದಾಸ್ತನು ಕಟ್ಟಡದಲ್ಲಿ ಮಹಿಳೆರುವ ಅನ್ನಭಾಗ್ಯದ ಅಕ್ಕಿ ಪಡೆಯಲು ರಾತ್ರಿವೇಳೆ ಕಾಯುವ ಪರಸ್ಥಿತಿ ಉಂಟಾಗಿದೆ.
ಇನ್ನೂ ಗ್ರಾಮದಲ್ಲಿ ಸಂಜೆವೆಳೆಗೆ ಮಧ್ಯಪಾನ ಪ್ರೀಯರು ಕೂಡ ಇದೇ ದಾರಿಯಲ್ಲಿ ಓಡಾಡುವುದರಿಂದ ಇಲ್ಲಿನ ಅನ್ನಭಾಗ್ಯ ಯೋಜನೆಯ ಅಕ್ಕಿಗಾಗಿ ಬಂದ ಮಹಿಳೆಯರ ಪಾಡು ಏಳತೀರದು
ಹೌದು ನಿಜಕ್ಕೂ ಇದು ಅಧಿಕಾರಿಗಳ ಜಾಣ ಕುರುಡತನ ಎನ್ನಬಹುದು..? ಕಳೆದ ಮೂರು ತಿಂಗಳಿನಿAದ ಈ ಸೋಸೈಟಿ ಮಾಲೀಕರು ತಮ್ಮ ಹಳೆ ಚಾಳಿಯ ಸಮಯವನ್ನು ಮುಂದುವರಿಸಿದ್ದರೂ ಕೂಡ ಅಧಿಕಾರಿಗಳು ಯಾಕೇ ಅವರಿಗೆ ತಿಳವಳಿಕೆ ನೋಟಿಸ್ ನೀಡದೆ ನಿರ್ಲ್ಯಕ್ಷ ಮಾಡಿದ್ದಾರೆ ಎಂಬುದು ಗೋಚರಿಸದು.
ಇದರಿಂದ ಗ್ರಾಮದಲ್ಲಿ ಅಕ್ಕಿಗಾಗಿ ರಾತ್ರಿಪಾಳಿಯದಲ್ಲಿ ಕಾಯುವ ಪರಸ್ಥಿತಿ ಉಂಟಾಗಿದೆ.