ನಾಯಕನಹಟ್ಟಿ: ಮಾಡಿದಷ್ಟು ನೀಡು ಭಿಕ್ಷೆ ಎಂಬ ತತ್ವವನ್ನು ಇಡೀ ಜಗತ್ತಿಗೆ ಸಾರಿದ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ದೊಡ್ಡ ಕಾರ್ತಿಕೋತ್ಸವ ಡಿಸೆಂಬರ್ 22ರಂದು ಜರಗಲಿದೆ ಎಂದು ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ದೇವಸ್ಥಾನದ ಕಾರ್ಯನಿರ್ವಾಣಾಧಿಕಾರಿ ಎಚ್. ಗಂಗಾಧರಪ್ಪ ತಿಳಿಸಿದರು.
ಬುಧವಾರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ
ಕಾರ್ತಿಕ ಮಾಸದ ಅಂಗವಾಗಿ ಡಿಸೆಂಬರ್ 21ರಂದು ಲಕ್ಷದೀಪೋತ್ಸವ ಬೆಳ್ಳಿ ರಥೋತ್ಸವ ಕಾರ್ಯಕ್ರಮಗಳು ಜರುಗಲಿವೆ.
ಡಿ.15ರಂದು ಈಡಿಗರ ಮುತ್ಯಾಲಪ್ಪ ವಂಶಸ್ಥರಿಂದ ಸಣ್ಣ ಕಾರ್ತಿಕೋತ್ಸವ ಆಚರಿಸುವ ಮೂಲಕ ಆರಂಭವಾಗಿ ಡಿಸೆಂಬರ್ 16ರಂದು ಧನುರ್ಮಾಸ ಪೂಜೆ ತ್ರಿಕಾಲ ಪೂಜಾ ಕಾರ್ಯಕ್ರಮ ಜರುಗಲಿದೆ. ಡಿಸೆಂಬರ್ 18ರಂದು ಬಂಡಿರಂಗ ಸ್ವಾಮಿ ಕಾರ್ತಿಕೋತ್ಸವ ನಡೆಯಲಿದೆ.
ಡಿಸೆಂಬರ್ 21ರಂದು ಲಕ್ಷ ದೀಪೋತ್ಸವ ನಡೆಯಲಿದ್ದು ಬೆಳ್ಳಿ ರಥೋತ್ಸವ ಕಾರ್ಯಕ್ರಮ ನೆರವೇರಲಿದೆ ದೇವಾಲಯದಲ್ಲಿ ಅನ್ನದಾಸೋಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿರುತ್ತದೆ.
ಡಿಸೆಂಬರ್ 22ರಂದು ಸಂಜೆ ಮೂರು ಗಂಟೆಯಿಂದ ದೊಡ್ಡ ಕಾರ್ತಿಕೋತ್ಸವ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದು ಸಂಜೆ ಏಳು ಗಂಟೆಗೆ ದೇವಾಲಯದ ವೇದಿಕೆಯಲ್ಲಿ ರಾಜ್ಯದ ಸುಪ್ರಸಿದ್ಧ ಜಾನಪದ ಕಲೆಯಾದ ಭರತನಾಟ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಶ್ರೀ ಸ್ವಾಮಿಗೆ ನಿತ್ಯ ರುದ್ರಾಭಿಷೇಕ ಮಾಡಲಿಚ್ಚಿಸುವವರು 2501 ರೂ.ಗಳು ಠೇವಣೆ ನೀಡಿ ತಮ್ಮ ಹೆಸರು ನೋಂದಾಯಿಸಲು ಸೂಚಿಸಲಾಗಿದೆ ಈ ಹಿಂದೆ ಸಾವಿರ ರೂಪಾಯಿ ಹಾಗೂ 1500 ರೂಪಾಯಿ ಠೇವಣಿ ಇಟ್ಟಿರುವ ಭಕ್ತಾದಿಗಳು ಮತ್ತೆ ಹೆಚ್ಚುವರಿ ಹಣವನ್ನು ದೇವಸ್ಥಾನದಲ್ಲಿ ಪಾವತಿಸಲು ಸೂಚಿಸಲಾಗಿದೆ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದರು