ಚಿತ್ರದುರ್ಗ : ಚಳ್ಳಕೆರೆ ತಾಲೂಕಿನ ಪರಶುರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಕಾಲುವೆಹಳ್ಳಿ, ಯಾದಲಗಟ್ಟೆ, ಗುಡಿಹಳ್ಳಿ,
ಮೈಲನಹಳ್ಳಿ, ರೇಣುಕಾಪುರ, ಬಸಾಪುರ ಗ್ರಾಮಗಳನ್ನು ಸೇರ್ಪಡೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಪರಶುರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರ್ಪಡೆಯಾಗಿದ್ದು, ಪ್ರಸ್ತುತ ಈ ಹಳ್ಳಿಗಳನ್ನು
ತಳಕು ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರ್ಪಡೆಮಾಡಿಕೊಂಡಿದ್ದು, ತಳಕು ಪೊಲೀಸ್ ಠಾಣೆಗೆ
ಹೋಗಲು ಯಾವುದೇ ಸಾರಿಗೆ ಸೌಲಭ್ಯವಿಲ್ಲದೆ 20 ಕಿ.ಮೀ ಹೋಗಬೇಕಿದೆ. ಸಮಯಕ್ಕೆ
ಸರಿಯಾಗಿ ಸೌಲಭ್ಯಗಳಿಲ್ಲದೇ ರಸ್ತೆ ಸಂಪರ್ಕವಿಲ್ಲದೆ ಸುತ್ತಿ ಬಳಸಿ ತಳಕು ಠಾಣೆಗೆ ಹೋಗಿ ಪ್ರಕರಣಗಳನ್ನು ದಾಖಲಿಸಲು ಸಾರ್ವಜನಿಕರಿಗೆ ತುಂಬಾ
ತೊAದೆಯಾಗಿದ್ದು ಹಾಗೂ ಪರಶುರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಜಾಜೂರು ಪೊಲೀಸ್
ಠಾಣೆ ಸಮೀಪವಾಗಿದ್ದು ಮತ್ತು ಪರಶುರಾಂಪುರಕ್ಕೆ ಸಾರಿಗೆ ಸೌಲಭ್ಯವಿದ್ದು, ಯಾವುದೇ
ಸಾರ್ವಜನಿಕರಿಗೆ ತೊಂದರೆಯಾಗುವುದಿಲ್ಲ.
ತಳಕು ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಗ್ರಾಮಗಳನ್ನು ಪರಶುರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಂಡು
ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಹಿರಿಯ ಉಪಾಧ್ಯ ಕೆ.ಪಿ.ಭೂತಯ್ಯ.ಶಿವಕುಮಾರ್ .ಚೇತನ್ ಒತ್ತಾಯಿಸಿದರು.