ಚಿತ್ರದುರ್ಗ: ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ:13.12.2023ರAದು ಸಿವಿಲ್ ವಿಭಾಗದ ವತಿಯಿಂದ ನೂತನ ನಿರ್ಮಾಣ ಯೋಜನಾ ಕ್ಷೇತ್ರದಲ್ಲಿನ ಬೇಡಿಕೆಗಳು ಹಾಗೂ ಸವಾಲುಗಳು ಹಾಗೂ ವಿವಿಧ ಸ್ವರೂಪದ ಸೇತುವೆಗಳು ಕುರಿತಾದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಇಂಡಿಯನ್ ಕಾಂಕ್ರೀಟ್ ಇನ್ಸಿಸ್ಟಿಟ್ಯೂಟ್ ಬೆಂಗಳೂರು ವಿಭಾಗದ ಅಧ್ಯಕ್ಷರಾದ ಶ್ರೀ ಹೆಚ್ ಆರ್ ಗಿರೀಶ್ ಮಾತನಾಡಿ, ನಿರ್ಮಾಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಹಳೆಯ ಪದ್ಧತಿಗೆ ಹೋಲಿಸಿದಲ್ಲಿ ನೂತನ ನಿರ್ಮಾಣ ಪದ್ಧತಿಯಲ್ಲಿ ತಾಂತ್ರಿಕತೆಗೆ ಪ್ರಾಮುಖ್ಯತೆ ನೀಡಿ ನಿರ್ಮಾಣ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸಲಾಗಿದೆ. ಈ ನಿಟ್ಟಿನಲ್ಲಿ ಹಲವಾರು ಸವಾಲುಗಳನ್ನು ಮೆಟ್ಟಿ ನಿಂತು ಹೊಸ ಬೇಡಿಕೆಗಳಿಗೆ ಸ್ಪಂದಿಸಲಾಗುತ್ತಿದೆ ಎಂದು ನುಡಿದರು.
ಚೇತನ್ ಇನ್‌ಪ್ರಾಟೆಕ್ ಕನ್ಸÀಲ್ಟೆಂಟ್ ಪ್ರೆöÊ.ಲಿಮಿಟೆಡ್‌ನ ಶ್ರೀ ಅರವಿಂದ್ ಸಲೇಚಾ ವಿವಿಧ ಸ್ವರೂಪದ ಸೇತುವೆಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಜೆಎಸ್‌ಎಸ್ ಇಂಜಿನಿಯರಿAಗ್ ಕಾಲೇಜಿನ ಸಿವಿಲ್ ವಿಭಾಗದ ಪ್ರಾಧ್ಯಾಪಕರಾದ ಡಾ. ಸಂತೋಷ್ ಬಿ.ಎಸ್., ಎಸ್‌ಜೆಎಂಐಟಿ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ.ಜಗನ್ನಾಥ್ ಎನ್, ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಶೈಲ ಜೆ ಎಂ, ಪ್ರೊ.ಸುಬ್ರಮಣ್ಯ ಪಿ ಜಿ, ಕಾರ್ಯಕ್ರಮ ಸಂಚಾಲಕ ಪ್ರೊ.ಹುಸೇನ್ ಇಮ್ರಾನ್ ಕೆ ಎಂ, ಪ್ರೊ.ಅನುಷಾ ವಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕು.ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.