ಚಿತ್ರದುರ್ಗ : ನಗರದ ಎಸ್.ಜೆ.ಎಂ. ದಂತ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಡಾ. ನಾರಾಯಣಮೂರ್ತಿ ಮಾತನಾಡುತ್ತ, ರಕ್ತದಾನದ ಮಹತ್ವ, ಅದರಿಂದಾಗುವ ಲಾಭಗಳು ಹಾಗೂ ಒಂದು ರಕ್ತದಾನ ಮೂರುಜೀವಗಳನ್ನು ಉಳಿಸುತ್ತದೆ ಎಂದು ಅರಿವು ಮೂಡಿಸಿದರು.
ಪ್ರಾಚಾರ್ಯರಾದ ಡಾ. ಗೌರಮ್ಮ ವಿದ್ಯಾರ್ಥಿಗಳಿಗೆ ರಕ್ತದಾನ ಮಾಡುವಂತೆ ಪ್ರೇರಣೆ ನೀಡಿದರು.
ಈ ಸಂದರ್ಭದಲ್ಲಿ ಡಾ. ಪಾಲಾಕ್ಷಪ್ಪ, ಉಮೇಶ್, ಡಾ. ಈಶ್ವರಪ್ಪ, ಡಾ. ನಾಗರಾಜಪ್ಪ, ಡಾ. ಪ್ರೀತಿ ನಾಗ್ದೇವ್, ಎನ್.ಎಸ್.ಎಸ್. ಅಧಿಕಾರಿಗಳು ಇದ್ದರು.