ಹಿರೇಹಳ್ಳಿ ಗ್ರಾಪಂ ಗ್ರಂಥಾಲಯದಲ್ಲಿ  ಅಂಬೇಡ್ಕರ್ ರವರ 67ನೇ ಪರಿನಿರ್ವಾಣ ದಿನಾಚರಣೆ

ಹಿರೇಹಳ್ಳಿ ಗ್ರಾಪಂ ಗ್ರಂಥಾಲಯದಲ್ಲಿ  ಅಂಬೇಡ್ಕರ್ ರವರ 67ನೇ ಪರಿನಿರ್ವಾಣ ದಿನಾಚರಣೆ

ಚಳ್ಳಕೆರೆ:ದೀನ ದಲಿತರು ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಅಂಬೇಡ್ಕರ್ ಅವರ ಆಶಯಗಳನ್ನು ಇದುವರೆಗೂ ಯಥಾವತ್ತಾಗಿ ಜಾರಿಗೆ ತರುವಲ್ಲಿ ಎಲ್ಲಾ ಸರ್ಕಾರಗಳು ವಿಫಲವಾಗಿವೆ ಅಸ್ಕ್ರುಳಷ್ಯತೆ ಅಸಮಾನತೆ ಇನ್ನು ಜೀವಂತವಾಗಿರುವುದು ಸಮಾಜದ ದುರ್ದೈವದ ಸಂಗತಿಯೇ ಸರಿ ಎಂದು ವಕೀಲರಾದ ಆರ್ ರುದ್ರಮನಿ ಅಭಿಪ್ರಾಯಪಟ್ಟರು.

ತಾಲೂಕಿನ ಹಿರೇಹಳ್ಳಿ ಗ್ರಾಮದ ಗ್ರಂಥಾಲಯದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ 67ನೇ ಪರಿನಿರ್ವಾಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶಕ್ಕೆ ಸ್ವಾತಂತ್ರ ಬಂದು ಏಳು ದಶಕಗಳಾದರೂ ಬಡತನ ನಿರುದ್ಯೋಗ ಸಾಮಾಜಿಕ ಅನ್ಯಾಯ ಭ್ರಷ್ಟಾಚಾರ ಕೋಮುವಾದ ಅಸ್ಪೃಶ್ಯತೆ ಲಿಂಗ ತಾರತಮ್ಯ ಸೇರಿದಂತೆ ಜ್ವಲಂತ ಸಮಸ್ಯೆಗಳು  ಜೀವಂತವಾಗಿ ಉಳಿದಿವೆ ಆಳುವ ವರ್ಗದ ಸರ್ಕಾರಗಳು ಸಂವಿಧಾನದ ಮೂಲ ಆಶಯಗಳನ್ನು ಅಳವಡಿಸಿಕೊಂಡಿದ್ದರೆ ದೇಶದಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿತ್ತು ಅಂಬೇಡ್ಕರ್ ಅವರು ದೈಹಿಕವಾಗಿ ಇಲ್ಲದೆ ಇರಬಹುದು ಆದರೆ ತಮ್ಮ ಸಿದ್ದಾಂತ ವಿಚಾರಧಾರೆಗಳ ಮೂಲಕ ನಮ್ಮನ್ನು ಸದಾ ಎಚ್ಚರಿಸುತ್ತಾ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂಬ ಪರಿಕಲ್ಪನೆಯನ್ನು ಯಾರು ಮರೆಯಬಾರದು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯ ಎಸ್ ರಾಜಣ್ಣ ಮಾತನಾಡಿ ಅಂಬೇಡ್ಕರ್ ಅವರ 67ನೇ ಪರಿನಿರ್ವಾಣ ದಿನದ ಸಮಯದಲ್ಲಿ ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳು ದಮನಿತ ವರ್ಗಗಳು ವಿಮೋಚನೆ ಆಗಬೇಕೆಂದರೆ ಅಂಬೇಡ್ಕರ್ ಅವರ ಆಲೋಚನಾ ಕ್ರಮಕ್ಕೆ ತಮ್ಮನ್ನ ತಾವು ತೆರೆದುಕೊಳ್ಳುವುದು ಪ್ರಸ್ತುತ ಸಂದರ್ಭದಲ್ಲಿ ಅತ್ಯಗತ್ಯವಾಗಿದೆ ಎಂದರು.

ಗ್ರಂಥಾಲಯದ ಮುಖ್ಯ ಅಧಿಕಾರಿ ನಾಗೇಶ್ ಮಾತನಾಡಿ ಡಾ. ಅಂಬೇಡ್ಕರ್ ಅವರು ತಮ್ಮ ಬದುಕಿನ ಅಮೂಲ್ಯ ಸಮಯವನ್ನು ಗ್ರಂಥಾಲಯದಲ್ಲಿ ಕಳೆಯುವ ಮೂಲಕ ತಮ್ಮ ಜ್ಞಾನದ ಹಸಿವು ನೀಗಿಸಿಕೊಳ್ಳುತ್ತಿದ್ದರು ಅವರಲ್ಲಿದ್ದ ಅಂತಹ ಅಧ್ಯಯನಶೀಲ ಗುಣದಿಂದಾಗಿಯೇ ಭಾರತಕ್ಕೆ ಇಡೀ ಜಗತ್ತು ಒಪ್ಪುವಂತಹ ಸಂವಿಧಾನ ನೀಡಲು ಸಾಧ್ಯವಾಯಿತು ಎಂದರು.

ಈ ಸಂದರ್ಭದಲ್ಲಿ ಟಿ ರಾಮಸ್ವಾಮಿ ತಿಪ್ಪೇಸ್ವಾಮಿ ಟಿ ನಾಗರಾಜ ತಿಪ್ಪೇಸ್ವಾಮಿ ಮಲ್ಲಿಕಾರ್ಜುನ ಅಭಿಷೇಕ್ ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!