ಕಾಟಪ್ಪನಹಟ್ಟಿಯಲ್ಲಿ ಎತ್ತಿನ ಹಬ್ಬ ಆಚರಣೆ ಅದ್ದೂರಿ

ಚಳ್ಳಕೆರೆ: ನಗರದ ಕಾಟಪ್ಪನಹಟ್ಟಿಯ ಕಾಟಮಲಿಂಗೇಶ್ವರ ದೇವಸ್ಥಾನದ ಬಳಿ ಎತ್ತಿನ ಹಬ್ಬ ಆಚರಣೆ ಅದ್ದೂರಿಯಾಗಿ ಜರುಗಿತು ಎತ್ತುಗಳಿಗೆ ಹೂಗಳು ಹಾಗೂ ಬಣ್ಣ ಬಣ್ಣದ ಬಲೂನ್ಗಳು ಬಳಸಿ ಎತ್ತುಗಳನ್ನು ಅಲಂಕಾರ ಮಾಡಿ ದೇವಸ್ಥಾನದ ಬಳಿ ಕರೆತಂದು ವಿಶೇಷವಾಗಿ ಪೂಜೆ ಮಾಡಿದರು.

ಕಾಟಮಲಿಂಗೇಶ್ವರ ದೇವಸ್ಥಾನದಿಂದ ಗೊಲ್ಲರಟ್ಟಿಯ ಎತ್ತಪ್ಪ ದೇವಸ್ಥಾನದ ವರೆಗೂ ಎತ್ತುಗಳನ್ನು ಮೆರವಣಿಗೆ ಮಾಡುವ ಮೂಲಕ ಕರೆತಂದು ಹೆತ್ತಪ್ಪನ ದೇವಸ್ಥಾನದ ಬಳಿ ವಿಶೇಷವಾಗಿ ಹಸುಗಳಿಗೆ ಡೊಳ್ಳು ಬಾರಿಸುವ ಮೂಲಕ ಪೂಜೆಯನ್ನು ಮಾಡಿದರು.

ಎತ್ತುಗಳ ಹಬ್ಬದಲ್ಲಿ ಕಾಟಪ್ಪನಹಟ್ಟಿ ಹಾಗೂ ಗೊಲ್ಲರಟ್ಟಿಯ ಜನರು ಭಾಗವಹಿಸಿದ್ದರು ಎತ್ತುಗಳನ್ನು ಸಾಕಿರುವ ಮಾಲೀಕರು ತನ್ನ ಎತ್ತುಗಳಿಗೆ ವಿಶೇಷವಾಗಿ ಅಲಂಕಾರ ಮಾಡಿದ್ದು ಕಂಡು ಬಂತು ಒಂದು ಎತ್ತಿಗೆ ತೆಲುಗು ನಟ ಪವನ್ ಕಲ್ಯಾಣ್ ಇರುವ ಧ್ವಜವನ್ನು ಕಟ್ಟಿ ಹಸುವನ್ನು ಕರೆತಂದಿದ್ದು ವಿಶೇಷವಾಗಿತ್ತು.

ನಂತರ ಕಾಟಪ್ಪನ ಹಟ್ಟಿಯ ಹೊರಭಾಗದಲ್ಲಿ ಈಡು ಹಾಕಿ ಈಡುಗಳಿಗೆ ಬೆಂಕಿ ಹಚ್ಚಿ ಈಡುಗಳ ಸುತ್ತ ಎತ್ತುಗಳನ್ನು ಪ್ರದಕ್ಷಿಣೆ ಹಾಕಿಸಿ ಮೂಲಕ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಿದರು.

About The Author

Namma Challakere Local News
error: Content is protected !!