ಚಳ್ಳಕೆರೆ ನಗರದ ದಲಿತ ಸಂಘಟನೆಯಿಂದ ಡಾ.ಬಿ ಆರ್.ಅಂಬೇಡ್ಕರ್ ಮಹಾಪರಿನಿರ್ವಾಣ ದಿನದ ಕಾರ್ಯಕ್ರಮ
ಚಳ್ಳಕೆರೆ: ನಗರದಲ್ಲಿ ತಾಲೂಕು ಪಂಚಾಯತಿ ನಗರಸಭೆ ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ
ಆಯೋಜಿಸಿದ್ದ 67ನೇ ಅಂಬೇಡ್ಕರ್ ಪರಿನಿಬ್ಬಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ತಾಪಂ ಇಒ ಶಶಿಧರ್ ಮಾತನಾಡಿದರು
ಅಂಬೇಡ್ಕರ್ ಸಂವಿಧಾನದಲ್ಲಿ ಪ್ರತಿಯೊಂದು ಶೋಷಿತ ವರ್ಗಕ್ಕೂ ನ್ಯಾಯವನ್ನು ಒದಗಿಸಿದ್ದಾರೆ.
ಮೀಸಲಾತಿಯನ್ನು ಸದ್ಬಳಕೆ ಮಾಡಿಕೊಂಡು ಎಲ್ಲರೂ ಶಿಕ್ಷಣದಲ್ಲಿ ಹಾಗೂ ಉದ್ಯೋಗ ರಂಗದಲ್ಲಿ ಉನ್ನತ ಸ್ಥಾನವನ್ನು ಪಡೆದು ಅಂಬೇಡ್ಕರ್ ಅವರ ಆಶಯಗಳನ್ನು ಸಾಕಾರಗೊಳಿಸಬೇಕೆಂದು ತಿಳಿಸಿದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪ್ರಕಾಶ್ ಮೂರ್ತಿ ಮಾತನಾಡಿ ಅಂಬೇಡ್ಕರ್ ತನಗಾಗಿ ಬದುಕದೆ ಸಮಾಜಕ್ಕಾಗಿ ಬದುಕಿದವರು ಅಂಬೇಡ್ಕರ್ ಒಂದು ದೀಪವಿದ್ದಂತೆ ತನ್ನನ್ನು ತಾನೇ ಉರಿದುಕೊಂಡು ಜಗತ್ತಿಗೆ ಬೆಳಕು ನೀಡಿದ ಮಹಾನ್ ಪುರುಷ ಅಂಬೇಡ್ಕರ್ ಆಶಯಗಳಿಗೆ ವಿರುದ್ಧವಾಗಿ ಇಂದಿನ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ ಸ್ತ್ರೀಯರ ಏಳಿಗೆಗಾಗಿ ಅವರು ಪಟ್ಟ ಶ್ರಮ ಅವಿಸ್ಮರಣೀಯವಾದದ್ದು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆಎಸ್ ಸುರೇಶ್ ಮಾತನಾಡಿ ಅಂಬೇಡ್ಕರ್ ತಮ್ಮ ಜ್ಞಾನವನ್ನು ಬಳಸಿಕೊಂಡು ಹಣ ಮಾಡಲು ಹೋಗಲಿಲ್ಲ ಬಡವರ ಬಗ್ಗೆ ಚಿಂತನೆ ಮಾಡಿ ಸಮಾನತೆ ತರಬೇಕು ಎಂದು ಚಿಂತಿಸಿದರು ಸ್ವಾತಂತ್ರ್ಯ ಬಂದ ಇಷ್ಟು ವರ್ಷಗಳಾದರೂ ದೀನ ದಲಿತರ ಉದ್ದಾರವಾಗಿಲ್ಲ ಎಲ್ಲಾ ದಲಿತರು ಸಂಘಟನೆಯಾಗುವ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಬೇಕು ಪುಸ್ತಕಗಳನ್ನು ಅಂಬೇಡ್ಕರ್ ಆಸ್ತಿಯನ್ನಾಗಿ ಮಾಡಿದರು.
ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ತಾಲೂಕು ಅಧ್ಯಕ್ಷ ಜಿಟಿ ವೀರಭದ್ರಯ್ಯ, ನಗರಸಭೆ ಸದಸ್ಯ ರಮೇಶ್ ಗೌಡ , ದಲಿತ ಮುಖಂಡ ಟಿ.ವಿಜಯ್ ಕುಮಾರ್, ಡಿ.ಚಂದ್ರು, ಕೃಷ್ಣಮೂರ್ತಿ, ಹೊನ್ನುರಸ್ವಾಮಿ, ನಾಗರಾಜ್, ಭಿಮ್ಮಣ್ಣ, ವಿನೋದ್ ಕುಮಾರ್, ಬಂಗ್ಲೆಶ್ರೀನಿವಾಸ್, ಅಣ್ಣಪ್ಪ, ಇಂದ್ರೇಶ್ ಕುಮಾರ್, , ಡಿವೈಎಸ್ಪಿ ಟಿ ಬಿ ರಾಜಣ್ಣ, ವೃತ್ತ ನಿರೀಕ್ಷಕ ಕೆ ಸಮಿವುಲ್ಲ, ಪಿಎಸ್ ಐ ಕೆ.ಸತೀಶ್ , ನಗರಸಭೆ ಪೌರಾಯುಕ್ತ ಸಿ ಚಂದ್ರಪ್ಪ, ದಿವಾಕರ್, ಗಿರೀಶ್ , ತಿಪ್ಪೇಸ್ವಾಮಿ, ಚೌಳೂರು ಪ್ರಕಾಶ್ , ಮಾಜ ಕಲ್ಯಾಣ ಇಲಾಖೆ ಡಿ ದಯಾನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.