ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗದೆ ಪಠ್ಯಪುಸ್ತಕದ ಜೊತೆ ಉತ್ತಮ ಜೀವನ ರೂಪಿಸಿಕೊಳ್ಳಿ

ವಾಸವಿ ಕಾಲೇಜಿನಲ್ಲಿ
ವಿಶ್ವ ಏಡ್ಸ್ ದಿನಾಚರಣೆ

ಹದಿ ಹರಿಯದ ವಯಸ್ಸಿನಲ್ಲಿ ಭಾವನಾತ್ಮಕ ಬದಲಾವಣೆ ನಿಮ್ಮದಾಗಿಸಿಕೊಳ್ಳಬೇಕು

ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ದೂರವಿರಬೇಕು

ಚಳ್ಳಕೆರೆ : 15 ರಿಂದ 20 ವರ್ಷದ ಮಕ್ಕಳ ವಯಸ್ಸಿನಲ್ಲಿ ಬದಲಾವಣೆ ಅನ್ನುವುದು ಸಹಜ ಆದರೆ ಮಕ್ಕಳು ಮಾದಕ ವಸ್ತುಗಳಿಂದ ದೂರವಿರಬೇಕು ಇಲ್ಲವಾದರೆ ನಿಮ್ಮ ವಿದ್ಯಾರ್ಥಿ ಜೀವನವನ್ನು ಹಾಳು ಮಾಡಿಕೊಳ್ಳುತ್ತೀರಿ ಎಂದು ಅಪರ ಸಿವಿಲ್ ನ್ಯಾಯಾಧೀಶರಾದ ಎಚ್ ಆರ್. ಹೇಮಾ ಅಭಿಪ್ರಾಯಪಟ್ಟರು

ಅವರು ನಗರದ ವಾಸವಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕಾನೂನು ಸಮಿತಿ ವಕೀಲರ ಸಂಘ ಹಾಗೂ ಆರೋಗ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮಕ್ಕೆ ಭಾಗವಹಿಸಿ ಮಾತನಾಡಿದ ಅವರು

ಏಡ್ಸ್ ರೋಗ ಅನ್ನುವುದು ಕಳೆದ ಹತ್ತು ವರ್ಷಗಳ ಹಿಂದೆ ಮಾರಣಾಂತಿಕವಾಗಿ ಹರಡಿತ್ತು, ಈ ಹಿನ್ನಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಏಡ್ಸ್ ಸಂಖ್ಯೆ ಬಹಳ ಕಡಿಮೆಯಾಗಿದೆ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ತುತ್ತಾಗದೆ ಹೆಚ್ಚಿನ ಸಮಯವನ್ನು ಪಠ್ಯಪುಸ್ತಕದ ಜೊತೆ ಕಳೆಯಿರಿ ಅಂದಾಗ ಮಾತ್ರ ವಿದ್ಯಾರ್ಥಿಗಳ ಜೀವನ ಸಾರ್ಥಕಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು

ಇನ್ನು ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ. ಎನ್ ಕಾಶಿ ಮಾತನಾಡಿ, ಏಡ್ಸ್ ರೋಗ ಹರಡುವುದು ರಕ್ತದ ಸಂಪರ್ಕದಿಂದ ಹರಡುತ್ತದೆ ಎಚ್ಐವಿ ಕಾಯಿಲೆಯೂ ನೀವು ಬಳಸುವ ಶೇವಿಂಗ್ ಬ್ಲೇಡ್ ನಿಂದ ಒಬ್ಬರಿಂದ ಒಬ್ಬರಿಗೆ ಶೇವಿಂಗ್ ಮಾಡಿದಾಗ ರಕ್ತದ ಸಂಪರ್ಕದಿಂದ ಹರಡುವ ಕಾಯಿಲೆ ಆಗಿದ್ದು, ಈ ಕಾಯಿಲೆಯಿಂದ ಕಳೆದು ಹತ್ತು ವರ್ಷಗಳ ಹಿಂದೆ ಮಾನವ ಸಂಕುಲಕ್ಕೆ ಮಾರಕವಾಗಿ ಎಷ್ಟೋ ಜನರು ಲೈಂಗಿಕ ಬಳಕೆಯಿಂದ ತಮ್ಮ ಜೀವನವನ್ನು ನರಕಕ್ಕೆ ತೆಗೆದುಕೊಂಡು ಹೋಗಿದ್ದಾರೆ ಈ ಹಿನ್ನಲೆಯಲ್ಲಿ ಎಚ್ಐವಿ ಪರೀಕ್ಷಿಸಲು ಸರ್ಕಾರಿ ಆಸ್ಪತ್ರೆಯಲ್ಲಿ ಮೂರು ಹಂತದಲ್ಲಿ ಪರೀಕ್ಷೆ ಮಾಡಲಾಗುವುದು

ಇನ್ನು ಈ ಸಂದರ್ಭದಲ್ಲಿ ಮುಖ್ಯ ಆಡಳಿತ ಅಧಿಕಾರಿಗಳು ಸಾರ್ವಜನಿಕ ಆಸ್ಪತ್ರೆ ಡಾ. ಜೆ ಡಿ ವೆಂಕಟೇಶ್, ವಕೀಲರ ಸಂಘದ ಉಪಾಧ್ಯಕ್ಷ ಪಿ ಪಾಲಯ್ಯ , ಎಂ ಸಿದ್ದರಾಜು , ಆರೋಗ್ಯ ಇಲಾಖೆಯ ಕುದಾಪುರ ತಿಪ್ಪೇಸ್ವಾಮಿ, ವಾಸವಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜೆ.ರಾಮುಲು, ಸೇರಿದಂತೆ ಅನೇಕ ಉಪನ್ಯಾಸಕರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗಿಯಾಗಿದ್ದರು

About The Author

Namma Challakere Local News
error: Content is protected !!