ತಳಕು ಹೋಬಳಿಯ ವಿವಿಧ ಹಳ್ಳಿಗಳಲ್ಲಿ ಭರ್ಜರಿ ಸಂಚಾರ
ಲೋಕಸಭಾ ಕ್ಷೇತ್ರದ ಪ್ರಬಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂ.ರಾಮಪ್ಪ
ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗುವ ನಿರೀಕ್ಷೆ
ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ನಿಂದ ಮಾತ್ರ ನಿರುದ್ಯೋಗ ನಿರ್ಮೂಲನೆ
ಚಳ್ಳಕೆರೆ: ಕಾಂಗ್ರೆಸ್ ಪಕ್ಷ , ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವ ವಿಶ್ವಾಸವಿದೆ ಎಂದು ಪ್ರಬಲ ಟಿಕೆಟ್ ಆಕಾಂಕ್ಷಿ ಎಂ. ರಾಮಪ್ಪ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ್ದಾರೆ
ಅವರು ತಾಲೂಕಿನ ತಳಕು ಹೋಬಳಿಯ ಓಬಳಾಪುರ ,ಪಾತಪ್ಪನಗುಡಿ ,
ರೇಣುಕಾಪುರ, ಮೈಲನಹಳ್ಳಿ ಯಾದಲಗಟ್ಟೆ, ದೊಡ್ಡ ಉಳ್ಳಾರ್ತಿ, ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ನನಗೆ ಮತ ನೀಡುವಂತೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಕೃಷಿ ಕಾರ್ಮಿಕರು ಹಾಗೂ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ ನಿರುದ್ಯೋಗ ಮುಕ್ತ ಜಿಲ್ಲೆಯನಾಗಿಸುವುದು ನನ್ನ ಗುರಿಯಾಗಿದೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭೋವಿ ಸಮುದಾಯಕ್ಕೆ ಪ್ರಾಧಾನ್ಯತೆ ನೀಡಲು ಕಾಂಗ್ರೆಸ್ ಮುಖಂಡರು ಒಲವು ಹೊಂದಿದ್ದು ಹೀಗಾಗಿ ನನಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ದೊರೆಯುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯ ಪ್ರಬಲ ಟಿಕೆಟ್ ಆಕಾಂಕ್ಷಿ ಎಂ ರಾಮಪ್ಪ, ಬಾಪೂಜಿ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿ ಜಿ ಬಿ ಬಾಲರೆಡ್ಡಿ, ಜಿ ತಿಪ್ಪೇಸ್ವಾಮಿ, ಎನ್ ದೇವರಹಳ್ಳಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಲಿ ಸದಸ್ಯ ವರವು ಟಿ ಕಾಟಯ್ಯ, ಮಾಜಿ ಬಗರ್ ಹುಕುಂ ಕಮಿಟಿ ಸದಸ್ಯ ವಿ ಟಿ ಶಂಕರ್ ಮೂರ್ತಿ , ಹಿರೇಹಳ್ಳಿ ಕೃಷ್ಣಪ್ಪ, ಮೈಲನಹಳ್ಳಿನಾಗಣ್ಣ, ಇದ್ದರು